ETV Bharat / business

'ಇಂದು ಕೊನೆಯ ಕೆಲಸದ ದಿನ'ವೆಂದು ಮೆಸೇಜ್ ಕಳಿಸಿ 3,700 ನೌಕರರಿಗೆ ಗೇಟ್​ ಪಾಸ್! - ಉಬರ್ ಉದ್ಯೋಗ ಕಡಿತ

ಕಳೆದ ವಾರ ಉಬರ್ ಟೆಕ್ನಾಲಜೀಸ್ ಸುಮಾರು 3,700 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಕೋವಿಡ್​-19 ಸೋಂಕು ಕಂಪನಿಯ ವ್ಯವಹಾರದ ಮೇಲೆ ತೀವ್ರ ಪ್ರಭಾವ ಉಂಟುಮಾಡಿದ್ದು, ಆರ್ಥಿಕ ಸವಾಲು ಎದುರಿಸಲು ನಿರ್ವಹಣಾ ವೆಚ್ಚ ಕಡಿತಕ್ಕೆ ಉಬರ್ ನಿರ್ಧರಿಸಿದೆ.

lays off
ಉದ್ಯೋಗ ಕಡಿತ
author img

By

Published : May 13, 2020, 11:39 PM IST

ಸ್ಯಾನ್​ ಫ್ರಾನ್ಸಿಸ್ಕೊ: ರೈಡ್ ಹೇಲಿಂಗ್ ಅಪ್ಲಿಕೇಷನ್ ಉಬರ್ ಸುಮಾರು 3,700 ಉದ್ಯೋಗಿಗಳನ್ನು ಜೂಮ್ ಕರೆಗಳ ಮೂಲಕ ವಜಾಗೊಳಿಸಿದೆ. ಪ್ರತಿ ಕರೆ ಮೂರು ನಿಮಿಷಗಳಿಗಿಂತಲೂ ಕಡಿಮೆ ಕಾಲದಲ್ಲಿದ್ದು, 'ಇಂದು ಉಬರ್ ಜೊತೆಗೆ ನಿಮ್ಮ ಕೊನೆಯ ಕೆಲಸದ ದಿನ' ಎಂಬ ಸಾಮಾನ್ಯ ಸಂದೇಶದ ಮೂಲಕ ತೆಗೆದು ಹಾಕಿದೆ.

ಕಳೆದ ವಾರ ಉಬರ್ ಟೆಕ್ನಾಲಜೀಸ್ ಸುಮಾರು 3,700 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಕೋವಿಡ್​-19 ಸೋಂಕು ಕಂಪನಿಯ ವ್ಯವಹಾರದ ಮೇಲೆ ತೀವ್ರ ಪ್ರಭಾವ ಉಂಟುಮಾಡಿದ್ದು, ಆರ್ಥಿಕ ಸವಾಲು ಎದುರಿಸಲು ನಿರ್ವಹಣಾ ವೆಚ್ಚ ಕಡಿತಕ್ಕೆ ಉಬರ್ ನಿರ್ಧರಿಸಿದೆ.

ಡೈಲಿ ಮೇಲ್ ಪಡೆದ ವಿಡಿಯೋ ತುಣುಕಿನಲ್ಲಿ ಕಂಪನಿಯ ವ್ಯವಸ್ಥಾಪಕರೊಬ್ಬರು "ಇಂದು ಉಬರ್‌ನೊಂದಿಗಿನ ನಿಮ್ಮ ಕೊನೆಯ ಕೆಲಸದ ದಿನ ಆಗಿರುತ್ತದೆ" ಎಂಬ ಸಂದೇಶ ನೀಡಿದ್ದರು ಎಂದು ತಿಳಿದು ಬಂದಿದೆ.

ಕೋವಿಡ್​-19 ಕಾರಣದಿಂದಾಗಿ ಪ್ರಯಾಣಿಕ ವ್ಯವಹಾರವು ಅರ್ಧಕ್ಕಿಂತಲೂ ಕಡಿಮೆಯಾಗಿದೆ. ದುರದೃಷ್ಟಕರ ವಾಸ್ತವವೆಂದರೆ ಅನೇಕ ಮುಂಚೂಣಿಯ ಗ್ರಾಹಕ ಬೆಂಬಲಿತ ಉದ್ಯೋಗಿಗಳಿಗೆ ಸಾಕಷ್ಟು ಕೆಲಸವಿಲ್ಲ ಎಂದು ಉಬರ್‌ನ ಫೀನಿಕ್ಸ್ ಸೆಂಟರ್‌ನ ಮುಖ್ಯಸ್ಥ ರಫಿನ್ ಚಾವೆಲಿಯೊ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.