ಹೈದರಾಬಾದ್ : ಸಿಕ್ಕಿಂ ಮತ್ತು ಲಡಾಖ್ನ ವಾಸ್ತವ ಗಡಿ ನಿಯಂತ್ರಣ ರೇಖೆ (ALC) ಯಲ್ಲಿ ಚೀನಾ ತಗಾದೆ ತೆಗೆಯುತ್ತಿದೆ. ಈ ವೇಳೆ ಚೀನಿ ಸರಕುಗಳನ್ನು ನಿಷೇಧಿಸುವಂತೆ ಅಭಿಯಾನ ನಡೆಯುತ್ತಿದೆ. ಇದರ ಸೂಚಕವಾಗಿ ಅಮೂಲ್ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಟ್ವಿಟರ್ ಸಂಸ್ಥೆ ಅಮೂಲ್ ಖಾತೆಯಲ್ಲಿ ಬ್ಲಾಕ್ ಮಾಡಿತ್ತು. ಇದು ಸಾಕಷ್ಟು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಟ್ವಿಟರ್ ಇಂಕ್ ಅಮೂಲ್ ಖಾತೆಯನ್ನು ಅನ್‌ಬ್ಲಾಕ್ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತಕ್ಕಾಗಿ ಕರೆ ನೀಡಿದರು. ಭಾರತದ ಭಿನ್ನಾಭಿಪ್ರಾಯದ ನಡುವೆ ಚೀನಾದ ಸರಕುಗಳ ವಿರುದ್ಧ ಹೆಚ್ಚುತ್ತಿರುವ ಭಾವನೆಗಳನ್ನು ಕೇಂದ್ರೀಕರಿಸಿ ಅಮೂಲ್ ಟ್ವೀಟ್ ಮಾಡಿತ್ತು.
ಜೂನ್ 3ರಂದು ಚೀನಾ ಉತ್ಪನ್ನಗಳ ಬಹಿಷ್ಕಾರದ ಬಗ್ಗೆ ಮಾಡಲಾದ ಅಮೂಲ್ ಟ್ವಿಟರ್ ಖಾತೆಯಲ್ಲಿ ಅಮೂಲ್ ಬೇಬಿ ಡ್ರ್ಯಾಗನ್ ವಿರುದ್ಧ ಹೋರಾಡುವುದನ್ನು ಕಾಣಬಹುದು. ಡ್ರ್ಯಾಗನ್‌ನಿಂದ ನಿರ್ಗಮಿಸಿ? ಎಂಬ ಶೀರ್ಷಿಕೆಯೊಂದಿಗೆ ಚೀನಿ ವಸ್ತುಗಳು ಬೇಡ ಎಂದು ಸಂಕೇತಿಸಲಾಗಿತ್ತು.
-
#Amul Topical: About the boycott of Chinese products... pic.twitter.com/ZITa0tOb1h
— Amul.coop (@Amul_Coop) June 3, 2020 " class="align-text-top noRightClick twitterSection" data="
">#Amul Topical: About the boycott of Chinese products... pic.twitter.com/ZITa0tOb1h
— Amul.coop (@Amul_Coop) June 3, 2020#Amul Topical: About the boycott of Chinese products... pic.twitter.com/ZITa0tOb1h
— Amul.coop (@Amul_Coop) June 3, 2020
ಇದೇ ಚಿತ್ರದಲ್ಲಿ ಅಮೂಲ್ ಮೇಡ್ ಇನ್ ಇಂಡಿಯಾ ಎಂದು ನೋಡುಗರ ಗಮನ ಸೆಳೆಯುವಂತೆ ದಪ್ಪ ಅಕ್ಷರಗಳಲ್ಲಿ ಮುದ್ರಿತವಾಗಿದೆ. ಇದಕ್ಕೂ ಮೊದಲು ಚೀನಾದ ವಿಡಿಯೋ ಹಂಚಿಕೆಯ ಮೊಬೈಲ್ ಅಪ್ಲಿಕೇಷನ್ ಟಿಕ್‌ಟಾಕ್‌ನ ಲೋಗೊ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿತ್ತು. ಕೊರೊನಾ ವೈರಸ್ ಹಾಗೂ ಗಡಿ ವಿವಾದ ಬಳಿಕ ಅದರ ಜನಪ್ರಿಯತೆ ಕುಗ್ಗುತ್ತಿದೆ.