ನವದೆಹಲಿ: ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಪರೀಕ್ಷಾ ಹಂತದಲ್ಲಿ ಲಭ್ಯವಿರುವ, ಟ್ವಿಟರ್‌ನ ಸ್ಪೇಸಸ್ ಎಂಬ ಹೊಸ ಕ್ಲಬ್‌ಹೌಸ್ ತರಹದ ಆಡಿಯೊ ಚಾಟ್ ರೂಮ್ ಫೀಚರ್, ಶೀಘ್ರದಲ್ಲೇ ಡೆಸ್ಕ್‌ಟಾಪ್‌ಗಳಲ್ಲಿಯೂ ಲಭ್ಯವಾಗಲಿದೆ ಎಂದು ಟ್ವಿಟರ್ ಕಂಪನಿ ಹೇಳಿದೆ.
ಅಪ್ಲಿಕೇಷನ್ ಸಂಶೋಧಕ ಜೇನ್ ಮಂಚುನ್ ವಾಂಗ್, ವೆಬ್ ಆವೃತ್ತಿಯಲ್ಲಿ ಸ್ಪೇಸ್ ಬಿಡುಗಡೆಯ ಬಗ್ಗೆ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.
ಟ್ವಿಟರ್ ವೆಬ್ ಅಪ್ಲಿಕೇಷನ್ಗಾಗಿ ಟ್ವಿಟರ್ ಸ್ಪೇಸ್ ಪೂರ್ವವೀಕ್ಷಣೆ ಕಾರ್ಡ್ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಟ್ವೀಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಐಒಎಸ್ನಲ್ಲಿನ ಸಣ್ಣ ಗುಂಪಿನ ಜನರೊಂದಿಗೆ ಅದರ ಆಡಿಯೋ ಚಾಟ್ ಫೀಚರ್ ಮೊದಲು ಪರೀಕ್ಷಿಸಿದ ನಂತರ, ಟ್ವಿಟರ್ ಕಳೆದ ತಿಂಗಳು ಭಾರತದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಪರೀಕ್ಷೆ ವಿಸ್ತರಿಸಲಾಗುತ್ತಿದೆ. ಆಡಿಯೋ ಸಂಭಾಷಣೆ, ಲೈವ್, ಹೋಸ್ಟ್ನಲ್ಲಿ ಮಾತನಾಡಲು ಅವಕಾಶ ನೀಡುತ್ತದೆ ಎಂದು ಕಳೆದ ತಿಂಗಳು ಹೇಳಿತ್ತು.
-
Twitter is working on @TwitterSpaces preview cards for the web app pic.twitter.com/wDaYfEGbCO
— Jane Manchun Wong (@wongmjane) April 1, 2021 " class="align-text-top noRightClick twitterSection" data="
">Twitter is working on @TwitterSpaces preview cards for the web app pic.twitter.com/wDaYfEGbCO
— Jane Manchun Wong (@wongmjane) April 1, 2021Twitter is working on @TwitterSpaces preview cards for the web app pic.twitter.com/wDaYfEGbCO
— Jane Manchun Wong (@wongmjane) April 1, 2021
ಪ್ರಸ್ತುತ ಈ ಫೀಚರ್ ದೇಶದ ಅಪ್ಲಿಕೇಷನ್‌ನ ಬೀಟಾ ಪ್ರೋಗ್ರಾಂ ಭಾಗವಾಗಿರುವ ಆಯ್ದ ಕೆಲವು ಆಂಡ್ರಾಯ್ಡ್ ಬಳಕೆದಾರರಿಗೆ ಆರಂಭಿಕ ಪೂರ್ವವೀಕ್ಷಣೆಯಾಗಿ ಲಭ್ಯವಿದೆ. ಫೀಚರ್ನಲ್ಲಿ ಬಳಕೆದಾರರು ತಮ್ಮ ಅನುಯಾಯಿಗಳು ಸಂವಾದದಲ್ಲಿ ಭಾಗವಹಿಸಲು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಕೋವಿಡ್ ಲಸಿಕೆ ರಫ್ತಿಗೆ ನಿಷೇಧ ಹೇರಿಲ್ಲ: ವಿದೇಶಾಂಗ ಇಲಾಖೆ ಸ್ಪಷ್ಟನೆ
ಟ್ವಿಟರ್ನಲ್ಲಿರುವ ಯಾರಾದರೂ ಸಂಭಾಷಣೆ ಆಲಿಸಬಹುದು. ಆದರೆ, ಯಾರು ಮಾತನಾಡಬೇಕೆಂಬುದನ್ನು ಹೋಸ್ಟ್ ಮಾತ್ರ ನಿಯಂತ್ರಿಸಬಹುದು. ಇನ್ವೈಟ್ ಓನ್ಲಿ, ಆಡಿಯೊ-ಚಾಟ್ ಅಪ್ಲಿಕೇಷನ್ ಕ್ಲಬ್‌ಹೌಸ್ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ವೇಗವಾಗಿ ಜನಪ್ರಿಯತೆ ಗಳಿಸುತ್ತಿರುವ ಸಮಯದಲ್ಲಿ ಈ ಫೀಚರ್ ಬರುತ್ತದೆ.
ಲಿಂಕ್ಡ್ಇನ್ ಮತ್ತು ಸ್ಪಾಟಿಫೈನಂತಹ ಟೆಕ್ ಕಂಪನಿಗಳು ಸಹ ಕ್ಲಬ್‌ಹೌಸ್ ತರಹದ ಲೈವ್ ಆಡಿಯೊ ವೈಶಿಷ್ಟ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಫೇಸ್ಬುಕ್ ಸಹ ಅಂತಹ ಫೀಚರ್ನಲ್ಲಿ ತೊಡಗಿಸಿಕೊಳ್ಳುತ್ತಿದೆ ಎಂದು ವರದಿ ಹೇಳಿದೆ.