ಸ್ಯಾನ್ಫ್ರಾನ್ಸಿಸ್ಕೋ: ಟ್ವಿಟರ್ ಎಲ್ಲ ವಿಧದ ರಾಜಕೀಯ ಜಾಹೀರಾತುಗಳನ್ನು ಜಾಗತಿಕವಾಗಿ ನಿಲ್ಲಿಸಲು ನಿರ್ಧರಿಸಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜ್ಯಾಕ್ ಡಾರ್ಸೆ ತಿಳಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಜ್ಯಾಕ್, ಕಂಪನಿಯ ನಿಲುವು ರಾಜಕೀಯ ಸಂದೇಶವನ್ನು ತಲುಪಬೇಕು ಮತ್ತು ಅವುಗಳನ್ನು ಖರೀದಿಸಬಾರದು. ಜನರು ಇನ್ನೊಬ್ಬರ ಖಾತೆಯನ್ನು ಅನುಸರಿಸಲು ಅಥವಾ ರಿಟ್ವೀಟ್ ಮಾಡುತ್ತಿದ್ದಂತೆ ರಾಜಕೀಯ ಸಂದೇಶಗಳು ಹರಡುತ್ತವೆ ಎಂದಿದ್ದಾರೆ.
ವಾಣಿಜ್ಯ ಜಾಹೀರಾತುದಾರರಿಗೆ ಲಾಭದಾಯಕ ಆಗಿರುವ ಇಂಟರ್ನೆಟ್, ರಾಜಕೀಯ ಜಾಹೀರಾತುಗಳು ನಂಬಿಕೆಗೆ ಅರ್ಹವಲ್ಲ. ಇದು ರಾಜಕೀಯಕ್ಕೆ ಗಮನಾರ್ಹ ಅಪಾಯಗಳನ್ನು ತಂದೊಡ್ಡಲಿದೆ. ಲಕ್ಷಾಂತರ ಮತದಾರರ ಮೇಲೆ ಪ್ರಭಾವ ಬೀರಿ ಅವರನ್ನು ತಪ್ಪು ದಾರಿಗೆ ಎಳೆಯಬಹುದು. ಉದ್ದೇಶ ಪೂರ್ವಕವಾಗಿ ತಪ್ಪು ದಾರಿಗೆ ತರುವ ರಾಜಕೀಯ ಜಾಹೀರಾತುಗಳನ್ನು ಬಳಸದೇ ಇರಲು ನಿರ್ಧರಿಸಿದ್ದೇವೆ ಎಂದು ಜ್ಯಾಕ್ ಬರೆದುಕೊಂಡಿದ್ದಾರೆ.
ಟ್ವಟರ್ನ ಈ ನಿಲುವಿಗೆ ಪ್ರತಿಯಾಗಿ ಪ್ರತಿಸ್ಪರ್ಧಿ ಫೇಸ್ಬುಕ್, ಇದಕ್ಕೆ ತದ್ವಿರುದ್ಧವಾದ ನಿರ್ಧಾರ ತೆಗೆದುಕೊಂಡಿದೆ. ರಾಜಕೀಯ ಜಾಹೀರಾತುಗಳ ನಿಷೇಧವನ್ನು ತಳ್ಳಿಹಾಕಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್, ರಾಜಕೀಯ ಜಾಹೀರಾತುಗಳು ಆದಾಯದ ಮೂಲವಲ್ಲ. ಬದಲಾಗಿ ಪ್ರತಿಯೊಬ್ಬರ ಧ್ವನಿಗೆ ವೇದಿಕೆ ಕಲ್ಪಿಸುವುದು ಮುಖ್ಯವಾಗುತ್ತದೆ. ರಾಜಕೀಯ ಜಾಹೀರಾತು ನಿಷೇಧಿಸುವುರಿಂದ ಅಧಿಕಾರಸ್ಥರಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
-
This is the right thing to do for democracy in America and all over the world.
— Hillary Clinton (@HillaryClinton) October 30, 2019 " class="align-text-top noRightClick twitterSection" data="
What say you, @Facebook? https://t.co/dRgipKHzUG
">This is the right thing to do for democracy in America and all over the world.
— Hillary Clinton (@HillaryClinton) October 30, 2019
What say you, @Facebook? https://t.co/dRgipKHzUGThis is the right thing to do for democracy in America and all over the world.
— Hillary Clinton (@HillaryClinton) October 30, 2019
What say you, @Facebook? https://t.co/dRgipKHzUG
ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಹಿಲರಿ ಕ್ಲಿಂಟನ್ ಅವರು ಟ್ವಿಟ್ಟರ್ ಈ ನಡೆಯನ್ನು ಬೆಂಬಲಿಸಿ, 'ಪ್ರಜಾಪ್ರಭುತ್ವವಾದಿ ಅಮೆರಿಕ ಸೇರಿದಂತೆ ಎಲ್ಲ ರಾಷ್ಟ್ರಗಳಿಗೆ ಇದೊಂದ ಸರಿಯಾದ ನಿರ್ಧಾರವಾಗಿದೆ. ಈ ಬಗ್ಗೆ ಫೇಸ್ಬುಕ್ ಏನು ಹೇಳುತ್ತದೆ?' ಎಂದು ಪ್ರಶ್ನಿಸಿದ್ದಾರೆ.