ಹೊಸೂರು : ಟಿವಿಎಸ್ ಮೋಟಾರ್ ಕಂಪನಿಯು 2021ರ ಏಪ್ರಿಲ್‌ನಲ್ಲಿ 2,38,983 ಯುನಿಟ್ ಮಾರಾಟ ಮಾಡಿದೆ. 2020ರ ಏಪ್ರಿಲ್‌ನಲ್ಲಿ ಕೇವಲ 9,640 ಯುನಿಟ್ ಮಾರಾಟ ಮಾಡಿತ್ತು.
ಅನೇಕ ರಾಜ್ಯಗಳಲ್ಲಿನ ಲಾಕ್‌ಡೌನ್‌ಗಳಿಂದಾಗಿ 2021ರ ಏಪ್ರಿಲ್‌ನಲ್ಲಿ ದೇಶೀಯ ಮಾರಾಟ ಕಡಿಮೆಯಾಗಿದೆ. ಆದರೆ, ಚಿಲ್ಲರೆ ಮಾರಾಟ ರವಾನೆ ಮೇಲ್ಮುಖವಾಗಿದೆ.
ಚಾನಲ್ ಪಾಲುದಾರರನ್ನು ಬೆಂಬಲಿಸಲು ನಾವು ವ್ಯಾಪಾರಿ ಷೇರುಗಳನ್ನು ಕಡಿಮೆ ಮಾಡಿದ್ದೇವೆ. ಮತ್ತೆ ತೆರೆದಾಗ ಗ್ರಾಹಕರ ಬೇಡಿಕೆಗೆ ಸಾಕಷ್ಟು ದಾಸ್ತಾನುಗಳನ್ನು ನಿರ್ವಹಿಸಲು ಉತ್ಪಾದಿಸುತ್ತೇವೆ.
ಕೇಂದ್ರ ಸರ್ಕಾರವು ವಿಧಿಸಿದ್ದ ಲಾಕ್ಡೌನ್ನಿಂದಾಗಿ 2020ರ ಏಪ್ರಿಲ್‌ನಲ್ಲಿ ಕಡಿಮೆ ಮಾರಾಟ ಆಗಿತ್ತು. ಹೀಗಾಗಿ, ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ಹೋಲಿಕೆ ಮಾಡಲು ಆಗುವುದಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
ದ್ವಿಚಕ್ರ ವಾಹನ ಮಾರಾಟ : ದ್ವಿಚಕ್ರ ವಾಹನಗಳು 2021ರ ಏಪ್ರಿಲ್‌ನಲ್ಲಿ 2,26,193 ಯುನಿಟ್ ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 8,134 ಯುನಿಟ್ ಮಾರಾಟ ಆಗಿದ್ದವು. ದೇಶೀಯ ದ್ವಿಚಕ್ರ ವಾಹನಗಳ ಮಾರಾಟವನ್ನು ಏಪ್ರಿಲ್ 2021ರಲ್ಲಿ 1,31,386 ಯುನಿಟ್ ಎಂದು ನಿಗದಿಪಡಿಸಲಾಗಿದೆ.
ಕಂಪನಿಯ ಸ್ಕೂಟರ್ ಮಾರಾಟವು 65,213 ಯುನಿಟ್ ಹಾಗೂ 1,33,227 ಯುನಿಟ್ ಮೋಟಾರ್ ಸೈಕಲ್‌ಗಳನ್ನು ಮಾರಾಟ ಮಾಡಿದೆ. ಈ ಅವಧಿಯಲ್ಲಿ 1,07,185 ಯುನಿಟ್‌ಗಳಷ್ಟು ರಫ್ತು ದಾಖಲಿಸಿದ್ದು, 2020ರ ಏಪ್ರಿಲ್‌ನಲ್ಲಿ 9,640 ಯುನಿಟ್ ಮಾರಾಟ ಆಗಿದ್ದವು. ಟಿವಿಎಸ್ ಏಪ್ರಿಲ್ 2021ರಲ್ಲಿ 94,807 ಯುನಿಟ್‌ಗಳನ್ನು ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ.
ಕಂಪನಿಯ ತ್ರಿಚಕ್ರ ವಾಹನಗಳು 2021ರ ಏಪ್ರಿಲ್‌ನಲ್ಲಿ 12,790 ಯುನಿಟ್‌ಗಳ ಮಾರಾಟ ದಾಖಲಿಸಿದ್ದು, 2020ರ ಏಪ್ರಿಲ್‌ನಲ್ಲಿ 1,506 ಯುನಿಟ್‌ಗಳ ಮಾರಾಟವಾಗಿದ್ದವು.