ನವದೆಹಲಿ: ಸಾಂಕ್ರಾಮಿಕ ರೋಗದ ಸಂಕಷ್ಟದಲ್ಲೂ ದೇಶ ಮುನ್ನಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದು ಉದ್ಯಮ ದಿಗ್ಗಜ ರತನ್ ಟಾಟಾ ಅವರು ಪ್ರಶಂಸಿಸಿದರು.
ಅಸ್ಸೋಚಾಮ್ ಫೌಂಡೇಷನ್ ವೀಕ್ 2020 ಕಾರ್ಯಕ್ರಮದಲ್ಲಿ 'ಅಸ್ಸೋಚಾಮ್ ಎಂಟರ್ಪ್ರೈಸ್ ಆಫ್ ದಿ ಸೆಂಚುರಿ ಅವಾರ್ಡ್' ಅನ್ನು ಪ್ರಧಾನಿ ಮೋದಿ ಅವರಿಂದ ಸ್ವೀಕರಿಸಿ ಮಾತನಾಡಿದ ರತನ್ ಟಾಟಾ ಅವರು, ಉದ್ಯಮವು ಈಗ ಅವರ (ಮೋದಿ) ಪ್ರಬಲ ನಾಯಕತ್ವದ ಪ್ರಯೋಜನಗಳನ್ನು ಮುಂದೆ ತೆಗೆದುಕೊಳ್ಳುತ್ತದೆ ಎಂದು ಆಶಿಸಿದರು.
'ದೇಶದ ಪ್ರಗತಿಯಲ್ಲಿ ಟಾಟಾ ಪಾತ್ರ ಅಜರಾಮರ': ರತನ್ ಟಾಟಾಗೆ 'ಶತಮಾನದ ಉದ್ಯಮಿ ಪ್ರಶಸ್ತಿ' ನೀಡಿದ ಮೋದಿ
'ಹೌದು, ಕೆಲವೊಮ್ಮ ಅಸಮಾಧಾನದ ಕ್ಷಣಗಳು ಇರುತ್ತವೆ, ವಿರೋಧವೂ ಇರುತ್ತದೆ. ಆದರೆ, ಯಾವತ್ತೂ ಮಂಕಾಗಿ ಏನೂ ಇಲ್ಲ ಎಂಬಂತೆ ಓಡಿಹೋಗುವುದು ಸಲ್ಲದು. ನಿಮಗೆ ಲಾಕ್‌ಡೌನ್ ಬೇಕಿತ್ತು ಲಾಕ್‌ಡೌನ್ ಸಿಕ್ಕಿತು. ನೀವು ದೇಶ ಸ್ಥಗಿತಗೊಳಿಸಿ ಅದಕ್ಕೆ ಪ್ರತಿಕ್ರಿಯೆಗೊಳಿಸಲು ಕೆಲವು ನಿಮಿಷಗಳ ಕಾಲ ವಿದ್ಯುತ್ ಆರಿಸಿ ದೀಪಗಳು ಬೆಳಗಿರಿ ಎಂದಿರಿ, ಅದನ್ನು ಮಾಡಲಾಯಿತು ಎಂದು ಕೊರೊನಾ ಅವಧಿಯ ಲಾಕ್ಡೌನ್ಗೆ ಪ್ರತಿಕ್ರಿಯಿಸಿದರು.
ಇದು ಬರೀ ಅಂದ- ಚಂದಕವಲ್ಲ, ಪ್ರದರ್ಶನವೂ ಅಲ್ಲ. ನಾವು ದೇಶವಾಸಿಗರು ಒಟ್ಟಿಗೆ ಸೇರಿದೆವು. ನಾವು ಎದ್ದು ನಿಲ್ಲಬಹುದು, ನಾವು ನಿರ್ಧರಿಸಿದ್ದನ್ನು ಮಾಡಲು ಪ್ರಯತ್ನಿಸಿದರೇ ಮಾಡಬಹುದು ಎಂಬುದನ್ನು ತೋರಿಸಿ ಕೊಟ್ಟಿತು. ಒಂದು ಉದ್ಯಮವಾಗಿ ಇದು ನಮ್ಮ ಕೆಲಸವಾಗಿದೆ. ಇದನ್ನು ಅನುಸರಿಸಿ ಈ ನಾಯಕತ್ವದ ಪ್ರಯೋಜನಗಳನ್ನು ತೋರಿಸುವುದು ನಮ್ಮ ಕೆಲಸವಾಗಿದೆ. ನಾವು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಈ ಕಷ್ಟದ ಅವಧಿಯಲ್ಲಿ ದೇಶ ಮುನ್ನಡೆಸಿದ ಪ್ರಧಾನ ಮಂತ್ರಿಗೆ ಧನ್ಯವಾದಗಳು. ನಾವೆಲ್ಲರೂ ಒಟ್ಟಾಗಿ ನಿಂತು ನೀವು ಹೇಳಿದ್ದನ್ನು, ನೀವು ಏನು ಮಾಡಿದ್ದೀರಿ ಮತ್ತು ನೀವು ತೋರಿಸಿದ್ದನ್ನು ಅನುಸರಿಸಿದ್ದೇವೆ. 'ಜಗತ್ತು ನಮ್ಮತ್ತ ನೋಡುವ ಗಳಿಗೆ ಬರುತ್ತದೆ ಹೇಳಿ' ಎಂದು ಪ್ರಧಾನಿ ಉಚ್ಚರಿಸಿದ್ದರು. ಅದನ್ನು ಹೇಳುವ ಪರಿಸ್ಥಿತಿ ನಮಗೆ ಬರಬಹುದು. ಅವರು ಹೇಳಿದ್ದನ್ನು ಮಾಡಿದಾಗ ಅದು ಸಾಧ್ಯವಾಗಬಹುದು ಎಂದು ರತನ್ ಟಾಟಾ ಅಭಿಪ್ರಾಯಪಟ್ಟರು.