ನವದೆಹಲಿ: ರಾಷ್ಟ್ರೀಯ ವಾಹಕ ಏರ್ ಇಂಡಿಯಾ ಖರೀದಿ ಆಸಕ್ತಿ ವ್ಯಕ್ತಪಡಿಸಲು (ಇಒಐ) ಟಾಟಾ ಸನ್ಸ್ ತನ್ನ ಇಒಐ ಕಳುಹಿಸುವ ನಿರೀಕ್ಷೆಯಿದೆ ಎಂದು ಉದ್ಯಮ ತಜ್ಞರು ಹೇಳಿದ್ದಾರೆ.
ಉದ್ಯಮಿ ಸಂಘಟನೆಯಾದ ಟಾಟಾ ಗ್ರೂಪ್ನ ಟಾಟಾ ಸನ್ಸ್ ವಿಮಾನಯಾನದಲ್ಲಿ ಸರ್ಕಾರದ ಪಾಲು ಖರೀದಿಸಲು ನೇರವಾಗಿ ಇಒಐ ಕಳುಹಿಸುತ್ತದೆ. ಟಾಟಾ ಸನ್ಸ್ ಇಒಐ ಅನ್ನು ಸಲ್ಲಿಸಲಿದೆ ಎಂದು ಉನ್ನತ ಮೂಲಗಳು ಸುದ್ದಿ ಏಜೆನ್ಸಿ ಐಎಎನ್‌ಎಸ್‌ಗೆ ತಿಳಿಸಿವೆ.
ನವೆಂಬರ್ನಲ್ಲಿ ಭಾರತದ ಸಗಟು ಬೆಲೆ ಆಧಾರಿತ ಹಣದುಬ್ಬರ ಏರಿಕೆ!
ಟಾಟಾ ಗ್ರೂಪ್ನ ಅಧಿಕೃತ ವಕ್ತಾರರನ್ನು ಸಂಪರ್ಕಿಸಿದಾಗ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಟಾಟಾ ತನ್ನ ಈ ಹಿಂದಿನ ವಿಮಾನಯಾನ ಸಂಸ್ಥೆಯಲ್ಲಿನ ಷೇರು ಖರೀದಿಸುವ ಆಸಕ್ತಿಯ ಬಗ್ಗೆ ಹಲವು ತಿಂಗಳುಗಳಿಂದ ಊಹಾಪೋಹಗಳು ಹಬ್ಬುತ್ತಿವೆ. 1960ರ ದಶಕದಲ್ಲಿ ವಿಮಾನಯಾನ ರಾಷ್ಟ್ರೀಕರಣಕ್ಕೆ ಮುಂಚಿತವಾಗಿ ಏರ್ ಇಂಡಿಯಾವನ್ನು ಪ್ರಾರಂಭಿಸಿದ್ದು ಟಾಟಾ ಸಂಸ್ಥೆಯಾಗಿದೆ.
ಇಒಐ ಸಲ್ಲಿಕೆಗೆ ಸೋಮವಾರವೇ ಕೊನೆಯ ದಿನಾಂಕವಾಗಿದೆ. ಟಾಟಾಸ್ ಜೊತೆಗೆ, ವಿಮಾನಯಾನ ವಾಣಿಜ್ಯ ನಿರ್ದೇಶಕ ಮೀನಾಕ್ಷಿ ಮಲ್ಲಿಕ್ ನೇತೃತ್ವದ ಏರ್ ಇಂಡಿಯಾ ನೌಕರರ ತಂಡ ಸಹ ತಮ್ಮ ಇಒಐಗೆ ಕಳುಹಿಸುವ ನಿರೀಕ್ಷೆಯಿದೆ.