ನವದೆಹಲಿ: ರಾಜ್ಯದ ಖನಿಜ ಗಣಿಗಾರಿಕೆಯಲ್ಲಿ ತೊಡಗಿರುವ ಕಂಪನಿಗಳ ಮೇಲೆ ಜಾರ್ಖಂಡ್ ಸರ್ಕಾರ ವಿಧಿಸಿರುವ ಕೋವಿಡ್ -19 ಸಾಂಕ್ರಾಮಿಕ ಸೆಸ್ ವಿರುದ್ಧ ಟಾಟಾ ಸ್ಟೀಲ್ ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ನಷ್ಟಗಳನ್ನು ತಗ್ಗಿಸಲು ಖನಿಜ ಗಣಿಗಾರಿಕೆಗಳ ಮೇಲೆ ‘ಕೋವಿಡ್ ಸೆಸ್’ ವಿಧಿಸುವ ಆದೇಶವನ್ನು ಜಾರ್ಖಂಡ್ ಸರ್ಕಾರ ಜುಲೈನಲ್ಲಿ ಪ್ರಕಟಿಸಿತ್ತು. ಜಾರ್ಖಂಡ್ ಮಿನರಲ್ ಬೇರಿಂಗ್ ಲ್ಯಾಂಡ್ (ಸಿಒವಿಐಡಿ -19 ಸಾಂಕ್ರಾಮಿಕ) ಸೆಸ್ ಆರ್ಡಿನೆನ್ಸ್ 2020 ಅನ್ನು ಘೋಷಿಸಿತ್ತು.
30 ದಿನಗಳಲ್ಲಿ 15 ಬಾರಿ ದರ ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮೊತ್ತದಲ್ಲಿ ನಿಂತ ಪೆಟ್ರೋಲ್, ಡಿಸೇಲ್
ಸುಗ್ರೀವಾಜ್ಞೆಯ ಪ್ರಕಾರ, ರವಾನೆಯಾದ ಪ್ರತಿ ಮೆಟ್ರಿಕ್ ಟನ್ ಕಲ್ಲಿದ್ದಲಿಗೆ 10 ರೂ., ಮೆಟ್ರಿಕ್ ಟನ್ ಕಬ್ಬಿಣ ಅದಿರಿಗೆ 5 ರೂ., ಬಾಕ್ಸೈಟ್ಗೆ 20 ರೂ, ಸುಣ್ಣದ ಕಲ್ಲುಗೆ 10 ರೂ. ಮತ್ತು ಮ್ಯಾಂಗನೀಸ್ ಮೇಲೆ 5 ರೂ. (ಪ್ರತಿ ಮೆಟ್ರಿಕ್ ಟನ್) ಸೆಸ್ ವಿಧಿಸುತ್ತಿದೆ. ಇದನ್ನು ಪ್ರಶ್ನಿಸಿದರು ಟಾಟಾ ಸ್ಟೀಲ್ ಸುಪ್ರೀಂಕೋರ್ಟ್ ಮೆಟ್ಟಿಲೇರಿ, ಜಾರ್ಖಂಡ್ ಸರ್ಕಾರದ ಕ್ರಮವನ್ನ ಪ್ರಶ್ನಿಸಿದೆ.