ETV Bharat / business

ಟಾಟಾ-ಮಿಸ್ತ್ರಿ ವ್ಯಾಜ್ಯ.. ವಿಚಾರಣೆ ಅಂಗ ಸಂಸ್ಥೆಯಲ್ಲಿ ತಮ್ಮ ಪುತ್ರನ ಹೆಸರನ್ನೂ ಬಹಿರಂಗಪಡಿಸಿದ ಸುಪ್ರೀಂ​ ಚೀಫ್​ ಜಸ್ಟೀಸ್ - ಅರವಿಂದ್ ಬೊಬ್ಡೆ ಪುತ್ರ ಪುತ್ರ ಶಪೂರ್ಜಿ ಪಲ್ಲೊಂಜಿ ಅಂಗಸಂಸ್ಥೆ ಪ್ರತಿನಿಧಿ

ಎಸ್‌ಪಿ ಗ್ರೂಪ್ ಪ್ರತಿನಿಧಿಸುವ ಟಾಟಾಸ್ ಮತ್ತು ಸಿಎ ಸುಂದರಂ ಪರ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ, ಈ ವಿಷಯದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ತಮಗೆ ಯಾವುದೇ ಆಕ್ಷೇಪವಿಲ್ಲ ಎಂದರು. ನಾಲ್ಕನೇ ದಿನವೂ ಇದರ ವಿಚಾರಣೆ ಮುಂದುವರೆಯಿತು..

Tata-Mistry Case
ಟಾಟಾ-ಮಿಸ್ತ್ರಿ
author img

By

Published : Dec 15, 2020, 5:20 PM IST

ನವದೆಹಲಿ : ಟಾಟಾ ಸನ್ಸ್ ಮತ್ತು ಸೈರಸ್ ಇನ್ವೆಸ್ಟ್‌ಮೆಂಟ್ಸ್ ವ್ಯಾಜ್ಯದ ಮೇಲ್ಮನವಿ ನ್ಯಾಯಾಧಿಕರಣದ ಎನ್‌ಸಿಎಲ್‌ಎಟಿ ಆದೇಶದ ವಿರುದ್ಧ ಸಲ್ಲಿಸಿದ ಅರ್ಜಿಯ ಅಂತಿಮ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ನಡೆಯುತ್ತಿದೆ.

ವಿಚಾರಣೆ ನಡೆಸುತ್ತಿರುವ ಸುಪ್ರೀಂ ನ್ಯಾಯ ಪೀಠದ ಮುಖ್ಯಸ್ಥ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರು, ತಮ್ಮ ವಕೀಲ ಪುತ್ರ ಶ್ರೀನಿವಾಸ್ ಬೊಬ್ಡೆ ಅವರು ಕೊಳೆಗೇರಿ ಪುನರಾಭಿವೃದ್ಧಿ ಸಂಬಂಧಿತ ಶಪೂರ್ಜಿ ಪಲ್ಲೊಂಜಿ ಗ್ರೂಪ್‌ನ ಅಂಗಸಂಸ್ಥೆಯ ಕಂಪನಿಯೊಂದನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಟಾಟಾ ಗ್ರೂಪ್ ಮತ್ತು ಎಸ್‌ಪಿ ಗ್ರೂಪ್​ನಿಂದ ಹಾಜರಾದ ವಕೀಲರಿಗೆ, ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠವು ಈ ಬಗ್ಗೆ ಯಾವುದೇ ಆಕ್ಷೇಪಣೆ ಹೊಂದಿದ್ದೀರಾ ಎಂದು ಕೇಳಿತು.

ಎಸ್‌ಪಿ ಗ್ರೂಪ್ ಪ್ರತಿನಿಧಿಸುವ ಟಾಟಾಸ್ ಮತ್ತು ಸಿಎ ಸುಂದರಂ ಪರ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ, ಈ ವಿಷಯದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ತಮಗೆ ಯಾವುದೇ ಆಕ್ಷೇಪವಿಲ್ಲ ಎಂದರು. ನಾಲ್ಕನೇ ದಿನವೂ ಇದರ ವಿಚಾರಣೆ ಮುಂದುವರೆಯಿತು.

ಚೆಟ್ಟಿನಾಡ್ ಸಮೂಹದಿಂದ 700 ಕೋಟಿ ರೂ. ತೆರಿಗೆ ಗೋಲ್​ಮಾಲ್: 60 ಕಡೆ ಐಟಿ ದಾಳಿ

ಮುಂಬೈನಲ್ಲಿ ಇರುವ ನನ್ನ ಮಗ ಸುಮಾರು ಎರಡು ವರ್ಷಗಳಿಂದ ಕೊಳೆಗೇರಿ ಪುನರಾಭಿವೃದ್ಧಿ ಸಂಬಂಧಿತ ಎಸ್‌ಪಿ ಗ್ರೂಪ್‌ನ ಅಂಗಸಂಸ್ಥೆಯ ಪ್ರತಿನಿಧಿ ಆಗಿದ್ದಾನೆ ಎಂಬುದು ನನಗೆ ತಿಳಿದಿದೆ. ಈ ಪ್ರಕರಣದ ವಿಚಾರಣೆಗೆ ನಿಮ್ಮಲ್ಲಿ ಯಾರಾದರೂ ಆಕ್ಷೇಪಣೆಗಳು ಹೊಂದಿದ್ದರೆ ಅದನ್ನು ಬಹಿರಂಗಪಡಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

ಸಾಳ್ವೆ ಅವರು, ಸಿಜೆಐ ನೇತೃತ್ವದ ನ್ಯಾಯಪೀಠವು ಈ ಪ್ರಕರಣದ ವಿಚಾರಣೆಗೆ ಯಾವುದೇ ಆಕ್ಷೇಪಣೆ ಹೊಂದಿಲ್ಲ ಎಂದರು. ಇಂದಿನ ದಿನಮಾನಗಳಲ್ಲಿ ಇಂತಹ ಸಮಸ್ಯೆಗಳು ಮುಂದೊಂದಿನ ಸಮಸ್ಯೆಗಳನ್ನು ಸೃಷ್ಟಿಸುತ್ತವೆ ಎಂದು ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.