ಬೆಂಗಳೂರು: ಆನ್ಲೈನ್ ಫುಡ್ ವಿತರಣೆ ಪ್ಲಾಟ್ಫಾರ್ಮ್ ಸ್ವಿಗ್ಗಿ, ತನ್ನ ವಿತರಣಾ ಪಾಲುದಾರರಿಗೆ ಕೋವಿಡ್-19 ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
ಕೋವಿಡ್-19 ಸೋಂಕಿನ ವಿರುದ್ಧ ರಾಷ್ಟ್ರವ್ಯಾಪಿ ನಡೆಯುತ್ತಿರುವ ಲಸಿಕೆ ಅಭಿಯಾನದಡಿ ಸ್ವಿಗ್ಗಿ ಕಂಪೆನಿ ತನ್ನ ವಿತರಣೆದಾರರಿಗೆ ಸಂಪೂರ್ಣ ಲಸಿಕೆ ವೆಚ್ಚದ ಹಣವನ್ನು ಭರಿಸಲಿದೆ. ಕಂಪೆನಿ ಪ್ರಸ್ತುತ, ದೇಶದ ಸುಮಾರು 500 ನಗರಗಳಲ್ಲಿ 2,00,000ಕ್ಕೂ ಹೆಚ್ಚು ಆಹಾರ ವಿತರಣೆದಾರರನ್ನು ಹೊಂದಿದೆ. ಅವರೆಲ್ಲರಿಗೂ ಲಸಿಕೆ ಡೋಸ್ಗಳ ವೆಚ್ಚ ನೀಡಲಿದೆ.
ಇದನ್ನೂ ಓದಿ: ಮಾರ್ಚ್27ರಿಂದ 9 ದಿನಗಳಲ್ಲಿ 7 ದಿನ ಬ್ಯಾಂಕ್ಗಳು ಬಂದ್.. ಅದಕ್ಕೆ ಕಾರಣವೂ ಇವೆ..
ಈ ಯೋಜನೆಯ ಮೊದಲ ಹಂತದಲ್ಲಿ 45 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 5,500 ಮಂದಿ ವ್ಯಾಕ್ಸಿನೇಷನ್ಗೆ ಅರ್ಹರಾಗಿದ್ದಾರೆ. ಅಭಿಯಾನದ ಅಂತ್ಯದ ವೇಳೆಗೆ 2,00,000ಕ್ಕೂ ಅಧಿಕ ಮಂದಿಗೆ ಅಗತ್ಯ ಸೇವೆ ನೀಡಲಾಗುತ್ತದೆ.