ನವದೆಹಲಿ: ಕಡಿಮೆ ಜಿಎಸ್‌ಟಿ ದರಗಳ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸದ ಸ್ಟಾರ್ಬಕ್ಸ್ನ ವಂಚನೆಯನ್ನು ರಾಷ್ಟ್ರೀಯ ಲಾಭೋದ್ದೇಶ ವಿರೋಧಿ ಪ್ರಾಧಿಕಾರ (ಎನ್‌ಎಎ) ಪತ್ತೆಹಚ್ಚಿದೆ.
2017ರ ನವೆಂಬರ್ 15ರಿಂದ ಜಿಎಸ್‌ಟಿ ಅನ್ನು ಶೇ 18ರಿಂದ ಶೇ 5ಕ್ಕೆ ಇಳಿಸಲಾಗಿತ್ತು. ಇದರ ಪ್ರಯೋಜನಗಳನ್ನು ಗ್ರಾಹಕರಿಗೆ ರವಾನಿಸದ ಕಾರಣ ಕಂಪನಿಯು ಒಟ್ಟು 1.04 ಕೋಟಿ ರೂ. ಲಾಭ ಮಾಡಿಕೊಂಡಿದೆ. ಈ ಮೊತ್ತ 2017ರ ನವೆಂಬರ್ 15ರಿಂದ 2018ರ ಜೂನ್ 30ರವರೆಗೆ ಗಳಿಸಿಕೊಂಡಿತ್ತು.
ತೆರಿಗೆ ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ತಲುಪಿಸಲು ಎನ್‌ಎಎ ಕಂಪನಿಗೆ ನಿರ್ದೇಶನ ನೀಡಿದೆ.
ಗ್ರಾಹಕರಿಗೆ ಲಾಭದಾಯಕ ಪಾವತಿಸದೆ ಆರಂಭಿಕ ದಿನಗಳಿಂದ ಸಂಗ್ರಹಿಸಿದ ಠೇವಣಿ ಮೊತ್ತಕ್ಕೆ ಬಡ್ಡಿಯೊಂದಿಗೆ ಮರುಪಾವತಿಸಲು ಪ್ರತಿ ವಾದಿಗಳಿಗೆ ನಿರ್ದೇಶನ ನೀಡಿಲಾಗಿದೆ. ಆದೇಶದ ಮೂರು ವಾರಗಳಲ್ಲಿ ಈ ಮೊತ್ತವನ್ನು ಕೇಂದ್ರದ ಗ್ರಾಹಕ ಕಲ್ಯಾಣ ನಿಧಿ ಮತ್ತು ಲಾಭ ಗಳಿಕೆಯ ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಗೆ ಜಮಾ ಮಾಡಬೇಕು ಎಂದು ಎನ್ಎಎ ಸೂಚಿಸಿದೆ.
ಜಿಎಸ್‌ಟಿ ದರ ಕಡಿತವು ಜಾರಿಗೆ ಬಂದಾಗ ಕಾಫಿ ಚೈನ್, ತನ್ನ 'ಶಾರ್ಟ್ ಕ್ಯಾಪುಸಿನೊ'ದ ಬೆಲೆ 155 ರೂ.ಯಿಂದ 170 ರೂ.ಗೆ ಹೆಚ್ಚಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.