ETV Bharat / business

ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: 20 ಹೊಸ ಮಾರ್ಗಗಳಲ್ಲಿ ಸ್ಪೈಸ್​ ಜೆಟ್ ಹಾರಾಟ

ರಾಂಚಿಯು ಕೂಡ ನೂತನ ದೇಶಿ ತಾಣವಾಗಿ ಸೇರ್ಪಡೆ ಆಗಲಿದೆ. ಜಾರ್ಖಂಡ್ ರಾಜಧಾನಿಯು ದೆಹಲಿ ಮತ್ತು ಮುಂಬೈನಂತಹ ಪ್ರಮುಖ ಮಹಾನಗರಗಳಿಗೆ ತಡೆರಹಿತ ವಿಮಾನಗಳನ್ನು ಪರಿಚಯಿಸಿದೆ. ಪ್ರತಿದಿನ ದೆಹಲಿ-ರಾಂಚಿ-ದೆಹಲಿ ಮತ್ತು ಮುಂಬೈ-ರಾಂಚಿ-ಮುಂಬೈ ನಡುವೆ ವಿಮಾನ ಸೇವೆಯು ಪ್ರಯಾಣಿಕರಿಗೆ ಲಭ್ಯವಾಗಲಿದೆ. ಸ್ಪೈಸ್ ಜೆಟ್ ಮಹಾರಾಷ್ಟ್ರದ ಪ್ರಮುಖ ಯಾತ್ರಾ ಕೇಂದ್ರವಾದ ಶಿರಡಿಗೂ ಸಂಪರ್ಕ ಕಲ್ಪಿಸಲಿದೆ.

SpiceJet
ಸ್ಪೈಸ್​ ಜೆಟ್
author img

By

Published : Dec 1, 2020, 8:24 PM IST

Updated : Dec 1, 2020, 8:32 PM IST

ನವದೆಹಲಿ: ಸ್ಪೈಸ್‌ಜೆಟ್ ಏರ್‌ಲೈನ್ ತನ್ನ ದೇಶೀಯ ಪ್ರಯಾಣಿಕ ಸೇವೆಯಲ್ಲಿ ಡಿಸೆಂಬರ್ 5ರಿಂದ ಹಂತ-ಹಂತವಾಗಿ 20 ಹೊಸ ವಿಮಾನಗಳನ್ನು ಪ್ರಾರಂಭಿಸಲು ಯೋಜಿಸಿದೆ ಎಂದು ಕಂಪನಿ ತಿಳಿಸಿದೆ.

ರಾಂಚಿಯು ಕೂಡ ನೂತನ ದೇಶಿ ತಾಣವಾಗಿ ಸೇರ್ಪಡೆ ಆಗಲಿದೆ. ಜಾರ್ಖಂಡ್ ರಾಜಧಾನಿಯು ದೆಹಲಿ ಮತ್ತು ಮುಂಬೈನಂತಹ ಪ್ರಮುಖ ಮಹಾನಗರಗಳಿಗೆ ತಡೆರಹಿತ ವಿಮಾನಗಳನ್ನು ಪರಿಚಯಿಸಿದೆ. ಪ್ರತಿದಿನ ದೆಹಲಿ-ರಾಂಚಿ-ದೆಹಲಿ ಮತ್ತು ಮುಂಬೈ-ರಾಂಚಿ-ಮುಂಬೈ ನಡುವೆ ವಿಮಾನ ಸೇವೆಯು ಪ್ರಯಾಣಿಕರಿಗೆ ಲಭ್ಯವಾಗಲಿದೆ. ಸ್ಪೈಸ್ ಜೆಟ್ ಮಹಾರಾಷ್ಟ್ರದ ಪ್ರಮುಖ ಯಾತ್ರಾ ಕೇಂದ್ರವಾದ ಶಿರಡಿಗೂ ಸಂಪರ್ಕ ಕಲ್ಪಿಸಲಿದೆ.

ಬಾಹ್ಯಾಕಾಶದಲ್ಲಿ ಮೂಲಂಗಿ ಬೆಳೆದ ನಾಸಾ : ಹೇಗಿರುತ್ತೆ ಅಲ್ಲಿನ ಕೃಷಿ?

ನಿತ್ಯ ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್‌ ನಡುವೆ ತಡೆರಹಿತ ವಿಮಾನಗಳನ್ನು ಸಂಪರ್ಕಿಸುತ್ತಿದೆ. ಅಹಮದಾಬಾದ್ ಸಂಪರ್ಕಿಸುವ ಹೊಸ ವಿಮಾನಯಾನಗಳನ್ನು ಪರಿಚಯಿಸಿದ್ದು, ಅಹಮದಾಬಾದ್-ಜಮ್ಮು-ಅಹಮದಾಬಾದ್, ಅಹಮದಾಬಾದ್-ಗುವಾಹಟಿ-ಅಹಮದಾಬಾದ್ ಮತ್ತು ಅಹಮದಾಬಾದ್-ಕೊಚ್ಚಿ-ಅಹಮದಾಬಾದ್ ಮಾರ್ಗಗಳಲ್ಲಿ ಹಾರಾಡಲಿವೆ.

ಅಹಮದಾಬಾದ್ ಮತ್ತು ಕೊಚ್ಚಿ ನಡುವೆ ನಿತ್ಯ ಕಾರ್ಯನಿರ್ವಹಿಸಿದ್ದರೇ ಅಹಮದಾಬಾದ್-ಜಮ್ಮು-ಅಹಮದಾಬಾದ್ ಮಾರ್ಗದಲ್ಲಿ ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಹಾರಾಟ ನಡೆಸಲಿವೆ.

ಅಹಮದಾಬಾದ್-ಗುವಾಹಟಿ-ಅಹಮದಾಬಾದ್‌ ಮಾರ್ಗದಲ್ಲಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ವಿಮಾನಗಳು ಕಾರ್ಯನಿರ್ವಹಿಸಲಿವೆ.

Last Updated : Dec 1, 2020, 8:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.