ನವದೆಹಲಿ: ಸ್ಪೈಸ್ ಜೆಟ್ ಬುಧವಾರ 'ಸ್ಪೈಸ್‌ಕ್ಲಬ್' ಎಂಬ ಫ್ಲೈಯರ್ ಪ್ರೋಗ್ರಾಂ ಪ್ರಾರಂಭಿಸಿದ್ದು, ಇದರ ಅಡಿಯಲ್ಲಿ ಪ್ರಯಾಣಿಕ ಚಂದಾದಾರರು ಫ್ಲೈಟ್ ಬುಕಿಂಗ್, ಟಿಕೆಟ್ ನವೀಕರಣ, ಊಟ ಮತ್ತು ಇತರ ಆಡ್-ಆನ್ ಸೇವೆಗಳಿಗಾಗಿ ಖರ್ಚು ಮಾಡಿದ ಪ್ರತಿ 100 ರೂ. ಮೇಲೆ 10 ರಿವಾರ್ಡ್ ಅಂಕ ಗಳಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿ ರಿವಾರ್ಡ್ ಪಾಯಿಂಟ್ 0.50 ರೂ.ಯಷ್ಟು ಮೌಲ್ಯ ಹೊಂದಿರುತ್ತವೆ. ಪ್ರತಿ ಫ್ಲೈಟ್ ಬುಕಿಂಗ್, ಟಿಕೆಟ್ ನವೀಕರಣ, ಊಟ ಮತ್ತು ಇತರ ಆಡ್-ಆನ್‌ಗಳ ಮೇಲೆ ಮಾಡಿದ ಖರ್ಚಿಗೆ 10 ಎಸ್‌ಸಿ ಪಾಯಿಂಟ್ / 100 ರೂ.ವರೆಗೆ ರಿವಾರ್ಡ್ ಗಳಿಸಬಹುದು.
ಸಿಲ್ವರ್ ಹಂತದ ಸ್ಪೈಸ್‌ಕ್ಲಬ್ ಚಂದಾದಾರರು ಆದ್ಯತೆಯ ಚೆಕ್-ಇನ್ ಮತ್ತು ಬೋರ್ಡಿಂಗ್ ಸೇವೆಗಳನ್ನು ಪಡೆಯಬಹುದು. ಸ್ಪೈಸ್‌ಮ್ಯಾಕ್ಸ್ ನವೀಕರಣಗಳಿಗೆ ಶೇ 20ರಷ್ಟು ರಿಯಾಯಿತಿ ಪಡೆಬಹುದು. 250 ಎಸ್‌ಸಿ ಪಾಯಿಂಟ್‌ಗಳ ಬೋನಸ್ ನೇರವಾಗಿ ಸ್ಪೈಸ್‌ಜೆಟ್‌ನ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಷನ್ ಮೂಲಕ ಟಿಕೆಟ್ ಕಾಯ್ದಿರಿಸಿದವರಿಗೆ ಸಿಗಲಿದೆ ಎಂದು ಹೇಳಿದೆ.
ನಮ್ಮ ನೂತನ ಸ್ಪೈಸ್‌ಕ್ಲಬ್ ಪ್ರೋಗ್ರಾಮ್ ನಿಮ್ಮ ಪ್ರಯಾಣವನ್ನು ಇನ್ನಷ್ಟು ಲಾಭದಾಯಕವಾಗಿಸುತ್ತದೆ. ಉಚಿತ ಫ್ಲೈಟ್ ವೋಚರ್, ಪೂರಕ ಊಟ, ನವೀಕರಣ, ಶೂನ್ಯ ರದ್ದತಿ ಶುಲ್ಕ, ಆದ್ಯತೆಯ ಚೆಕ್-ಇನ್, ಉಚಿತ ಆಸನ ಆಯ್ಕೆಯಂತಹ ವಿಶೇಷ ಆಯ್ಕೆಗಳನ್ನು ನೀಡುತ್ತಿದ್ದೇವೆ ಎಂದು ಸ್ಪೈಸ್‌ಜೆಟ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಹೇಳಿದ್ದಾರೆ.