ಮುಂಬೈ: ಅಗ್ಗ ದರದಲ್ಲಿ ಸರಕು ಸಾಗಾಟ ಮಾಡುವ ಸ್ಪೈಸ್ ಜೆಟ್‌ನ ಸರಕು ಸಾಗಣೆ ವಿಭಾಗವು ಬೀಜಿಂಗ್‌ನಿಂದ 3,100 ಆಮ್ಲಜನಕ ಸಾಂದ್ರಕಗಳನ್ನು ವಿಮಾನದಲ್ಲಿ ಸಾಗಾಟ ಮಾಡಲಿದೆ.
ಕಳೆದ ಎರಡು ವಾರಗಳಲ್ಲಿ ಅಮೆರಿಕ, ಹಾಂಕಾಂಗ್, ಸಿಂಗಾಪುರ್ ಮತ್ತು ಚೀನಾದಿಂದ 9,950ಕ್ಕೂ ಹೆಚ್ಚು ಆಮ್ಲಜನಕ ಸಾಂದ್ರಕಗಳನ್ನು ವಿಮಾನಯಾನ ಸಂಸ್ಥೆ ಸಾಗಣೆ ಮಾಡಿದೆ.
ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆ ನೀಗಿಸಲು ವಿಶ್ವಾದ್ಯಂತ ಮುಂಬರುವ ದಿನಗಳಲ್ಲಿ ಸುಮಾರು 20,000 ಆಮ್ಲಜನಕ ಸಾಂದ್ರಕಗಳನ್ನು ತರಲು ನಮ್ಮ ಕಂಪನಿ ಎದುರು ನೋಡುತ್ತಿದೆ ಎಂದು ಸ್ಪೈಸ್ ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಹೇಳಿದ್ದಾರೆ.
ಈ ಆಮ್ಲಜನಕ ಸಾಂದ್ರಕಗಳನ್ನು ಸ್ಪೈಸ್‌ಹೆಲ್ತ್ ಮತ್ತು ಇತರ ಸಂಸ್ಥೆಗಳು ಆದೇಶಿಸಿವೆ. ಸ್ಪೈಸ್ ಜೆಟ್ 63 ದೇಶೀಯ ಮತ್ತು 50 ಅಂತಾರಾಷ್ಟ್ರೀಯ ತಾಣಗಳನ್ನು ಹೊಂದಿದೆ. 19 ಸರಕು ವಿಮಾನಗಳ ಸಮೂಹವನ್ನು ಹೊಂದಿದ್ದು, ಸ್ಪೈಸ್ ಎಕ್ಸ್‌ಪ್ರೆಸ್ ದೇಶೀಯ ಮತ್ತು ಅಂತಾರಾಷ್ಟ್ರೀಯ ಸ್ಥಳಗಳಿಗೆ ನಿತ್ಯ 600 ಟನ್‌ಗಳಷ್ಟು ಸರಕುಗಳನ್ನು ಸಾಗಿಸುವ ಸಾಮರ್ಥ್ಯವಿದೆ ಎಂದಿದ್ದಾರೆ.