ನವದೆಹಲಿ: ಸಿಗ್ನಲ್ ತನ್ನ ದೊಡ್ಡ ಪ್ರತಿಸ್ಪರ್ಧಿ ವಾಟ್ಸಾಪ್ ಬಗೆಗಿನ ಬಳಕೆದಾರರ ಗೌಪ್ಯತೆ ಚರ್ಚೆಯ ನೇರ ಪರಿಣಾಮವಾಗಿ ಡೌನ್‌ಲೋಡ್ ಪ್ರಮಾಣ ಏರಿಕೆ ಕಂಡಿದೆ. ಅದರ ಸಹ-ಸಂಸ್ಥಾಪಕ ಬ್ರಿಯಾನ್ ಆಕ್ಟನ್, ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಗೌಪ್ಯತಾ ನೀತಿಯ ಸರಳ ಮತ್ತು ನೇರವಾದ ಸೇವಾ ನಿಯಮಗಳೊಂದಿಗೆ ಅವಕಾಶಗಳನ್ನು ಲಾಭ ಮಾಡಿಕೊಳ್ಳಲು ಆಶಿಸುತ್ತಿದೆ ಎಂದು ಹೇಳಿದರು.
ವಾಟ್ಸಾಪ್ ತನ್ನ ಗೌಪ್ಯತೆ ನೀತಿ ನವೀಕರಿಸಿದ ನಂತರ ಲಾಭರಹಿತವಾದ ಸಿಗ್ನಲ್ ಜಾಗತಿಕವಾಗಿ ಲಕ್ಷಾಂತರ ಡೌನ್‌ಲೋಡ್‌ಗಳನ್ನು ಕಂಡಿದೆ. ವಾಟ್ಸಾಪ್ ಬಳಕೆದಾರರ ಡೇಟಾ ಫೇಸ್‌ಬುಕ್‌ನ ಇತರ ಉತ್ಪನ್ನ ಮತ್ತು ಸೇವೆಗಳಿಗೆ ಲಿಂಕ್ ಮಾಡುವ ವಿವಾದಾತ್ಮಕ ಬದಲಾವಣೆ ಒಳಗೊಂಡಿದೆ ಎಂಬ ವದಂತಿ ಸಾಕಷ್ಟು ಸುದ್ದಿ ಮಾಡಿತ್ತು.
ಸುದ್ದಿ ಸಂಸ್ಥೆ ಜತೆ ಮಾತನಾಡಿದ ಆಕ್ಟನ್, ಭಾರತೀಯ ಮಾರುಕಟ್ಟೆ ಎಲ್ಲಾ ನಿರೀಕ್ಷೆಗಳನ್ನು ಸಂಪೂರ್ಣವಾಗಿ ಮೀರಿದೆ ಎಂದು ನಾನು ಭಾವಿಸುತ್ತೇನೆ. ಕಳೆದ ಕೆಲವು ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಕಂಪನಿಗೆ ಬಳಕೆದಾರರ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರೇರೇಪಿಸಿದೆ ಎಂದರು.
ಇದನ್ನೂ ಓದಿ: ಕೊರೊನಾ ಕಾಲಘಟ್ಟದ ಬಜೆಟ್ನಲ್ಲಿ ಏನಿರಬೇಕು-ಏನಿರಬಾರದು? SBI ತಜ್ಞರ ಮಾತು ಕೇಳ್ತಾರಾ ಸೀತಾರಾಮನ್?
ಈ ಬೆಳವಣಿಗೆ ಅದ್ಭುತವಾಗಿವೆ. ಕಳೆದ 72 ಗಂಟೆಗಳಲ್ಲಿ ಇದು ತುಂಬಾ ವೇಗವಾಗಿ ಸಾಗಿದೆ. ನಮ್ಮಲ್ಲಿ ಹೆಚ್ಚಿನವರು ಹೆಚ್ಚು ನಿದ್ರೆ ಮಾಡಿಲ್ಲ. ಅದು ಒಳ್ಳೆಯ ಸಮಸ್ಯೆ ಎಂದು ಆಕ್ಟನ್ ವ್ಯಂಗ್ಯವಾಡಿದರು.
ಕಳೆದ ಕೆಲವು ದಿನಗಳಿಂದ ಬಳಕೆದಾರರ ಸಂಖ್ಯೆ ವಿವರಗಳನ್ನು ಬಹಿರಂಗಪಡಿಸದಿದ್ದರೂ, 50ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಿಗ್ನಲ್ 40 ದೇಶಗಳಲ್ಲಿ ಐಒಎಸ್ ಆ್ಯಪ್ ಸ್ಟೋರ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಗೂಗಲ್ ಸ್ಟೋರ್‌ನಲ್ಲಿ 18 ದೇಶಗಳಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.
ಆ ಎರಡೂ ಸಿಸ್ಟಮ್ಗಳಲ್ಲಿ ನೀವು ನಮ್ಮ ಡೌನ್‌ಲೋಡ್ ದರಗಳನ್ನು ನೋಡಬಹುದು. 10 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳು ಕಳೆದ ಮೂರು-ನಾಲ್ಕು ದಿನಗಳಲ್ಲಿ ಕಂಡಿದೆ. ಅಪಾರ ಪ್ರಮಾಣದ ಬಳಕೆ ಮತ್ತು ಬೆಳವಣಿಗೆಯನ್ನು ನಾವು ಕಂಡಿದ್ದೇವೆ. ನಾವು ಇದನ್ನು ನಿಲ್ಲಿಸುವುದನ್ನು ನೋಡುತ್ತಿಲ್ಲ ಎಂದರು.