ETV Bharat / business

ಎಸ್‌ಬಿಐ ಹೋಮ್​ ಶಾಖೆಗಳೇತರ ಬ್ರಾಂಚ್​ಗಳಲ್ಲಿ ನಗದು ಹಿಂಪಡೆಯುವಿಕೆ ಮಿತಿ ಹೆಚ್ಚಳ

ಉಳಿತಾಯ ಬ್ಯಾಂಕ್ ಪಾಸ್‌ಬುಕ್‌ನೊಂದಿಗೆ ವಾಪಸಾತಿ ಫಾರ್ಮ್ ಮೂಲಕ ಸ್ವಯಂ ಹಣ ಹಿಂತೆಗೆದುಕೊಳ್ಳುವ ಪರಿಷ್ಕೃತ ಸೀಲಿಂಗ್ ಅನ್ನು ದಿನಕ್ಕೆ 25 ಸಾವಿರ ರೂ.ಗೆ ಏರಿಸಲಾಗಿದೆ. ಇದಲ್ಲದೇ, ಗ್ರಾಹಕರು ಚೆಕ್ ಮೂಲಕ ಹಣ ಹಿಂತೆಗೆದುಕೊಳ್ಳುವ ಸೀಲಿಂಗ್ ಅನ್ನು 1 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

author img

By

Published : May 31, 2021, 3:02 PM IST

SBI
SBI

ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಹೋಮ್​ ಬ್ರಾಂಚ್​​ಯೇತರ ಶಾಖೆಗಳಲ್ಲಿ ಚೆಕ್ ಮತ್ತು ವಾಪಸಾತಿ ನಮೂನೆಗಳ ಮೂಲಕ ನಗದು ಹಿಂಪಡೆಯುವಿಕೆಯ ಮಿತಿ ಹೆಚ್ಚಿಸಿದೆ.

ಸಾಂಕ್ರಾಮಿಕ ರೋಗದಲ್ಲಿ ನಮ್ಮ ಗ್ರಾಹಕರನ್ನು ಬೆಂಬಲಿಸಲು, ಎಸ್‌ಬಿಐ ಚೆಕ್ ಮತ್ತು ವಾಪಸಾತಿ ಫಾರ್ಮ್ ಮೂಲಕ ಎಸ್​​ಬಿಐಯೇತರ ಹಣ ಹಿಂತೆಗೆದುಕೊಳ್ಳುವ ಮಿತಿಯನ್ನು ಹೆಚ್ಚಿಸಿದೆ ಎಂದು ಸಾರ್ವಜನಿಕ ವಲಯದ ಸಾಲದಾತ ಟ್ವೀಟ್‌ನಲ್ಲಿ ತಿಳಿಸಿದೆ.

ಉಳಿತಾಯ ಬ್ಯಾಂಕ್ ಪಾಸ್‌ಬುಕ್‌ನೊಂದಿಗೆ ವಾಪಸಾತಿ ಫಾರ್ಮ್ ಮೂಲಕ ಸ್ವಯಂ ಹಣ ಹಿಂತೆಗೆದುಕೊಳ್ಳುವ ಪರಿಷ್ಕೃತ ಸೀಲಿಂಗ್ ಅನ್ನು ದಿನಕ್ಕೆ 25 ಸಾವಿರ ರೂ.ಗೆ ಏರಿಸಲಾಗಿದೆ. ಇದಲ್ಲದೇ, ಗ್ರಾಹಕರು ಚೆಕ್ ಮೂಲಕ ಹಣ ಹಿಂತೆಗೆದುಕೊಳ್ಳುವ ಸೀಲಿಂಗ್ ಅನ್ನು 1 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ತೃತೀಯ ನಗದು ಹಿಂಪಡೆಯುವಿಕೆಯ ವಿಷಯದಲ್ಲಿ ಬ್ಯಾಂಕ್ ದೈನಂದಿನ ಮೇಲಿನ ಮಿತಿಯನ್ನು 50,000 ರೂ.ಗಳಿಗೆ ಹೆಚ್ಚಿಸಿದೆ. ಮೂರನೇ ವ್ಯಕ್ತಿಗಳಿಗೆ ಹಿಂಪಡೆಯುವಿಕೆಯನ್ನು ಚೆಕ್‌ಗಳ ಮೂಲಕ ಮಾತ್ರ ಅನುಮತಿಸಲಾಗುತ್ತದೆ. ವಾಪಸಾತಿ ನಮೂನೆಗಳ ಮೂಲಕ ಯಾವುದೇ ನಗದು ಪಾವತಿಯನ್ನು ಅನುಮತಿಸಲಾಗುವುದಿಲ್ಲ.

ಚೆಕ್ ಬಳಸಿ ಮೂರನೇ ವ್ಯಕ್ತಿಯಿಂದ ಹಣ ಹಿಂಪಡೆಯಲು, ಸಂಬಂಧಪಟ್ಟ ಮೂರನೇ ವ್ಯಕ್ತಿಯ ಕೆವೈಸಿ ಅಗತ್ಯವಿದೆ. ಪರಿಷ್ಕೃತ ಬದಲಾವಣೆಯು ಸೆಪ್ಟೆಂಬರ್ 30ರವರೆಗೆ ಅನ್ವಯವಾಗುತ್ತವೆ ಎಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.