ETV Bharat / business

SBI ಮಲ್ಟಿ ಆಪ್ಷನ್ ಠೇವಣಿ ಯೋಜನೆ: ಬಡ್ಡಿದರ, ಅರ್ಹತೆಯ ಸಂಪೂರ್ಣ ಮಾಹಿತಿ ಇಲ್ಲಿದೆ

author img

By

Published : Mar 12, 2021, 5:11 PM IST

ಸ್ಥಿರ ಠೇವಣಿಗಳಿಗಿಂತ ಭಿನ್ನವಾಗಿ, ನಿಮಗೆ ಹಣ ಬೇಕಾದಾಗ ಸಾಮಾನ್ಯ ಸ್ಥಿರ ಠೇವಣಿಗಳಂತೆ (ಎಫ್‌ಡಿ) ನಿಧಿಯ ಅಗತ್ಯಕ್ಕೆ ಅನುಗುಣವಾಗಿ ನೀವು ಎಸ್‌ಬಿಐ ಮಲ್ಟಿ ಆಪ್ಷನ್ ಖಾತೆಯಿಂದ 1, 000 ರೂ. ಮಲ್ಟಿಪ್ಲಸ್​​ನಡಿ ಹಿಂತೆಗೆದುಕೊಳ್ಳಬಹುದು. ನಿಮ್ಮ ಖಾತೆಯ ಬಾಕಿ ಮೇಲಿನ ಆರಂಭಿಕ ಠೇವಣಿಯ ವೇಳೆ ಅನ್ವಯವಾಗುವ ಠೇವಣಿ ದರಗಳನ್ನು ಸ್ವೀಕರಿಸುತ್ತೀರಿ.

SBI
SBI

ನವದೆಹಲಿ: ಎಸ್‌ಬಿಐ ಮಲ್ಟಿ ಆಪ್ಷನ್ ಠೇವಣಿ ಯೋಜನೆ (ಎಂಒಡಿಎಸ್) ಎನ್ನುವುದು ಉಳಿತಾಯ ಅಥವಾ ಚಾಲ್ತಿ ಖಾತೆಗೆ ಲಿಂಕ್ ಮಾಡಲಾದ ಟರ್ಮ್​ ಠೇವಣಿಯಾಗಿದೆ. ಸ್ಥಿರ ಠೇವಣಿಗಳಿಗಿಂತ ಭಿನ್ನವಾಗಿ, ನಿಮಗೆ ಹಣ ಬೇಕಾದಾಗ ಸಾಮಾನ್ಯ ಸ್ಥಿರ ಠೇವಣಿಗಳಂತೆ (ಎಫ್‌ಡಿ) ನಿಧಿಯ ಅಗತ್ಯಕ್ಕೆ ಅನುಗುಣವಾಗಿ ನೀವು ಎಂಒಡಿಎಸ್​ ಖಾತೆಯಿಂದ 1,000 ರೂ. ಮಲ್ಟಿಪ್ಲಸ್​​ನಡಿ ಹಿಂತೆಗೆದುಕೊಳ್ಳಬಹುದು. ನಿಮ್ಮ ಖಾತೆಯ ಬಾಕಿ ಮೇಲಿನ ಆರಂಭಿಕ ಠೇವಣಿಯ ವೇಳೆ ಅನ್ವಯವಾಗುವ ಠೇವಣಿ ದರಗಳನ್ನು ಸ್ವೀಕರಿಸುತ್ತೀರಿ.

ಎಸ್‌ಬಿಐ ಮಲ್ಟಿ ಆಪ್ಷನ್ ಠೇವಣಿ ಯೋಜನೆಯ ಬಗ್ಗೆ ತಿಳಿದುಕೊಳ್ಳಬೇಕಾದ 10 ವಿಷಯಗಳಿವು:

1) ಎಸ್‌ಬಿಐ ಮಲ್ಟಿ-ಆಪ್ಷನ್ ಠೇವಣಿ ಖಾತೆಯನ್ನು ತೆರೆಯಲು ಬೇಕಾದ ಕನಿಷ್ಠ ಠೇವಣಿ 10,000 ರೂ.

2) ಗರಿಷ್ಠ ಅವಧಿಯ ಠೇವಣಿ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ

3) ಈ ಖಾತೆಯ ಮೇಲಿನ ಬಡ್ಡಿದರವು ಟರ್ಮ್ ಠೇವಣಿಗಳ ಮೇಲೆ ಅನ್ವಯಿಸುತ್ತದೆ. ಸಾಮಾನ್ಯ ಗ್ರಾಹಕರಿಗೆ ಎಸ್‌ಬಿಐ ಎಫ್‌ಡಿ ಬಡ್ಡಿದರಗಳು ಶೇ 2.9 ರಿಂದ 5.4ರವರೆಗೆ ಇರುತ್ತವೆ. ಈ ದರಗಳು 2021ರ ಜನವರಿ 20 ರಿಂದ ಜಾರಿಗೆ ಬಂದವು.

4) ಖಾತೆಗೆ ಅನ್ವಯವಾಗುವ ಕನಿಷ್ಠ ಅವಧಿ ಒಂದು ವರ್ಷ ಮತ್ತು ಗರಿಷ್ಠ 5 ವರ್ಷ

5) ಆರಂಭಿಕ ಅಕಾಲಿಕ ವಾಪಸಾತಿ ಅನುಮತಿಸಲಾಗಿದೆ. 5 ಲಕ್ಷದವರೆಗಿನ ಎಫ್‌ಡಿಗಳಿಗೆ ಅಕಾಲಿಕ ವಾಪಸಾತಿ ದಂಡ ಶೇ 0.50ರಷ್ಟು ವಿಧಿಸಲಾಗುತ್ತದೆ. 5 ಲಕ್ಷಕ್ಕಿಂತ ಹೆಚ್ಚಿನ ಹಾಗೂ 1 ಕೋಟಿ ರೂ.ಗಿಂತ ಕಡಿಮೆ ಇರುವ ಎಫ್‌ಡಿಗಳಿಗೆ ದಂಡವು ಶೇ 1ರಷ್ಟು. ಖಾತೆ ಸಕ್ರಿಯವಾಗಿ ಇಲ್ಲದಿದ್ದಾಗ, ದಂಡದ ಜೊತೆಗೆ ಆ ಅವಧಿಗೆ ಅನ್ವಯವಾಗುವ ದರದಲ್ಲಿ ಬಡ್ಡಿ ಪಾವತಿಸಲಾಗುತ್ತದೆ. ಉಳಿದ ಮೊತ್ತವು ನೈಜ ಬಡ್ಡಿದರದ ಗಳಿಕೆ ಮುಂದುವರಿಸುತ್ತದೆ. 7 ದಿನಗಳಿಗಿಂತ ಕಡಿಮೆ ಠೇವಣಿಗಳ ಮೇಲೆ ಯಾವುದೇ ಬಡ್ಡಿ ಪಾವತಿ ಇರುವುದಿಲ್ಲ.

6) ವೈಯಕ್ತಿಕ ಅಥವಾ ಜಂಟಿ, ಅಪ್ರಾಪ್ತ (ವಯಸ್ಕನ/ ವಯಸ್ಕಳ ಮಗ/ಮಗಳು), ಎಚ್‌ಯುಎಫ್, ಸ್ಥಳೀಯ ಸಂಸ್ಥೆಗಳು, ಯಾವುದೇ ಸರ್ಕಾರಿ ಇಲಾಖೆ ಎಸ್‌ಬಿಐ ಮಲ್ಟಿ ಆಪ್ಷನ್ ಠೇವಣಿ ಖಾತೆ ತೆರೆಯಬಹುದು.

7) ಎಸ್‌ಬಿಐ ಮಲ್ಟಿ ಆಪ್ಷನ್ ಠೇವಣಿ ಯೋಜನೆಗೆ ಟಿಡಿಎಸ್ ಅನ್ವಯಿಸುತ್ತದೆ

8) ಈ ಖಾತೆಯಲ್ಲಿ ಸಾಲ ಸೌಲಭ್ಯವೂ ಇದೆ

9) ನಾಮನಿರ್ದೇಶನ ಸೌಲಭ್ಯ ಲಭ್ಯವಿದೆ

10) ನೀವು ಹತ್ತಿರದ ಎಸ್‌ಬಿಐ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ಆನ್‌ಲೈನ್‌ನಲ್ಲಿ ಖಾತೆ ತೆರೆಯಬಹುದು

ಎಸ್‌ಬಿಐ ಮಲ್ಟಿ ಆಪ್ಷನ್ ಠೇವಣಿ ಖಾತೆ ಆನ್‌ಲೈನ್‌ನಲ್ಲಿ ತೆರೆಯುವುದು ಹೇಗೆ?

1) ಎಸ್‌ಬಿಐ ಆನ್‌ಲೈನ್‌ಗೆ ಲಾಗಿನ್ ಮಾಡಿ

2) ಸ್ಥಿರ ಠೇವಣಿ ಕ್ಲಿಕ್ ಮಾಡಿ

3) ಇ-ಟಿಡಿಆರ್ / ಇ-ಎಸ್‌ಟಿಡಿಆರ್ (ಎಫ್‌ಡಿ) ಆಯ್ಕೆ ಕ್ಲಿಕ್ ಮಾಡಿ

4) ಇ-ಟಿಡಿಆರ್ / ಇ-ಎಸ್‌ಟಿಡಿಆರ್ (ಎಂಒಡಿ) ಮಲ್ಟಿ ಆಪ್ಷನ್ ಠೇವಣಿ ಆಯ್ಕೆಮಾಡಿ ಮತ್ತು ಮುಂದುವರಿಯಿರಿ

5) ನಿಮ್ಮ ಡೆಬಿಟ್ ಖಾತೆ ಸಂಖ್ಯೆ ಆಯ್ಕೆ ಮಾಡಿ, ಮಲ್ಟಿ ಆಪ್ಷನ್​ ಠೇವಣಿ ಮೊತ್ತ ನಮೂದಿಸಿ, ಟಿಡಿಆರ್ ಅಥವಾ ಎಸ್‌ಟಿಡಿಆರ್ ನಂತಹ ಠೇವಣಿ ಆಯ್ಕೆ ಆರಿಸಿ, ಸಮಯ ಮಿತಿ ನಮೂದಿಸಿ ಮತ್ತು ಸಲ್ಲಿಸಿ

6) ಖಾತೆ ತೆರೆಯುವ ವಿನಂತಿಯನ್ನು ದೃಢೀಕರಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.