ETV Bharat / business

SBI ಗ್ರಾಹಕರೇ ಗಮನಿಸಿ.. ನಾಳೆ ಇಂಟರ್​ನೆಟ್, UPI, Yono ಸೇವೆಗಳಲ್ಲಿ ವ್ಯತ್ಯಯ

ನಾಳೆ(ಜುಲೈ 4) ರಂದು ತಮ್ಮ ಆನ್​ಲೈನ್​ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಸ್​ಬಿಐ ತಿಳಿಸಿದೆ.

sbi online banking
ಎಸ್​ಬಿಐ ಆನ್​ಲೈನ್ ಸೇವೆ ಸ್ಥಗಿತ
author img

By

Published : Jul 3, 2021, 1:41 PM IST

Updated : Jul 3, 2021, 1:51 PM IST

ಮುಂಬೈ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಜುಲೈ 4 (ನಾಳೆ) ಮುಂಜಾನೆ ಸುಮಾರು ಎರಡು ಗಂಟೆಗಳ ಕಾಲ ಲಭ್ಯವಿಲ್ಲರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಎಸ್​ಬಿಐ, ಜುಲೈ 4 ರಂದು ಮುಂಜಾನೆ 3 :25 ರಿಂದ 5:50 ಗಂಟೆಯವರೆಗೆ ನಿರ್ವಹಣಾ ಕೆಲಸಗಳು ಇವೆ. ಈ ಸಮಯದಲ್ಲಿ ಇಂಟರ್​ನೆಟ್​ ಬ್ಯಾಂಕಿಂಗ್, ಯೊನೊ, ಯೊನೋ ಲೈಟ್​ ಮತ್ತು ಯುಪಿಐ ಸೇವೆಗಳು ಲಭ್ಯವಿರುವುದಿಲ್ಲ. ಉತ್ತಮ ಬ್ಯಾಂಕಿಂಗ್ ಅನುಭವವನ್ನು ಒದಗಿಸಲು ನಾವು ಶ್ರಮಿಸುತ್ತಿರುವುದರಿಂದ ನಮ್ಮ ಗ್ರಾಹಕರು ನಮ್ಮೊಂದಿಗೆ ಸಹಕರಿಸಬೇಕಾಗಿ ವಿನಂತಿಕೊಳ್ಳುತ್ತೇವೆ ಎಂದು ಮನವಿ ಮಾಡಿದೆ.

ಓದಿ : Jio ಬಳಕೆದಾರರಿಗೆ ಬಂಪರ್​ ಆಫರ್​: ತುರ್ತು ಡೇಟಾ ಸಾಲ ಸೌಲಭ್ಯ ಪ್ರಾರಂಭ

ಎಸ್‌ಬಿಐ ಗ್ರಾಹಕರು 2021 ರ ಏಪ್ರಿಲ್ 1 ಮತ್ತು ಜೂನ್ 17 ರಂದು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದರು. ಎಸ್‌ಬಿಐ ಪ್ರಕಾರ, ಯೊನೊ ಸುಮಾರು 2.6 ಕೋಟಿ ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಇದರಲ್ಲಿ ದಿನಕ್ಕೆ 55 ಲಕ್ಷ ಜನರು ಲಾಗಿನ್ ಆಗುತ್ತಾರೆ. 4 ಸಾವಿರಕ್ಕೂ ಹೆಚ್ಚು ವೈಯಕ್ತಿಕ ಸಾಲಗಳು ಮತ್ತು 16 ಸಾವಿರಕ್ಕಿಂತ ಅಧಿಕ ಯೊನೊ ಕೃಷಿ, ಅಗ್ರೀ ಗೋಲ್ಡ್ ಲೋನ್​ ಸೇವೆಗಳು ಇದರ ಮೂಲಕ ನಡೆಯುತ್ತವೆ. ಬ್ಯಾಂಕ್​ನ​ ಶೇ. 55 ರಷ್ಟು ವ್ಯವಹಾರಗಳು ಆನ್​ಲೈನ್​ ಮೂಲಕ ನಡೆಯುತ್ತಿವೆ.

Last Updated : Jul 3, 2021, 1:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.