ETV Bharat / business

RBI ನಿಯಮಕ್ಕಿಲ್ಲ ಕಿಮ್ಮತ್ತು.. ಬಿಡಿಗಾಸಿಲ್ಲಿದ ಬಡವರ ಖಾತೆಗಳಿಂದ ₹300 ಕೋಟಿ ಶುಲ್ಕ​ ಸಂಗ್ರಹಿಸಿದ SBI - ಎಸ್‌ಬಿಐ ಬಿಎಸ್‌ಬಿಡಿಎ ಖಾತೆದಾರರು

ಬಿಎಸ್‌ಬಿಡಿಎ ಮೇಲೆ ಶುಲ್ಕ ವಿಧಿಸುವಿಕೆ, 2013ರ ಸೆಪ್ಟೆಂಬರ್ ಆರ್‌ಬಿಐ ಮಾರ್ಗಸೂಚಿಯಂತೆ ನಿರ್ದೇಶಿಸಲಾಗುತ್ತದೆ. ನಿರ್ದೇಶನದ ಪ್ರಕಾರ, ಈ ಖಾತೆದಾರರಿಗೆ ಒಂದು ತಿಂಗಳಲ್ಲಿ 'ನಾಲ್ಕು ವಿತ್​ಡ್ರಾಗೂ ಹೆಚ್ಚು' ಅವಕಾಶವಿದೆ. ಬ್ಯಾಂಕಿನ ವಿವೇಚನೆಯಿಂದ ಇದಕ್ಕೆ ಶುಲ್ಕ ವಿಧಿಸುವುದಿಲ್ಲ..

SBI
SBI
author img

By

Published : Apr 12, 2021, 3:42 PM IST

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೇರಿ ಹಲವು ಬ್ಯಾಂಕ್​ಗಳು ಶೂನ್ಯ ಉಳಿತಾಯ ಖಾತೆ (ಝೀರೋ ಬ್ಯಾಲೆನ್ಸ್​) ಅಥವಾ ಸಾಮಾನ್ಯ ಉಳಿತಾಯ ಬ್ಯಾಂಕ್ ಠೇವಣಿ ಖಾತೆ (ಬಿಎಸ್‌ಬಿಡಿಎ) ಹೊಂದಿರುವ ಬಡವರಿಗೆ ಒದಗಿಸುವ ಕೆಲ ಸೇವೆಗಳಿಗೆ ಹೆಚ್ಚಿನ ಶುಲ್ಕ ವಿಧಿಸುತ್ತಿವೆ ಎಂದು ಐಐಟಿ-ಬಾಂಬೆ ಅಧ್ಯಯನ ಬಹಿರಂಗಪಡಿಸಿದೆ.

ಬಿಎಸ್‌ಬಿಡಿಎ ಖಾತೆದಾರರು ನಿಗದಿತ ನಾಲ್ಕು ವಹಿವಾಟು ಮೀರಿದ ಪ್ರತಿ ಡೆಬಿಟ್​ಗೆ 17.70 ರೂ. ಶುಲ್ಕ ವಿಧಿಸುವ ಎಸ್‌ಬಿಐ ನಿರ್ಧಾರ ಸಮಂಜಸವಲ್ಲ ಎಂದು ಅಧ್ಯಯನ ಹೇಳಿದೆ. ಸೇವಾ ಶುಲ್ಕ ವಿಧಿಸಿ 2015-20ರ ಅವಧಿಯಲ್ಲಿ ಎಸ್‌ಬಿಐನ ಸುಮಾರು 12 ಕೋಟಿ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆ (ಬಿಎಸ್‌ಬಿಡಿಎ) ಹೊಂದಿರುವವರಿಂದ 300 ಕೋಟಿ ರೂ. ಸಂಗ್ರಹಿಸಿದೆ.

3.9 ಕೋಟಿ ಬಿಎಸ್‌ಬಿಡಿ ಖಾತೆ ಹೊಂದಿರುವ ಭಾರತದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಸಾಲದಾತ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದೇ ಅವಧಿಯಲ್ಲಿ 9.9 ಕೋಟಿ ರೂ. ಜಮಾ ಮಾಡಿದೆ. ಕೆಲ ಬ್ಯಾಂಕ್​ಗಳು ಬಿಎಸ್‌ಬಿಡಿಎಗಳ ಮೇಲಿನ ಆರ್‌ಬಿಐ ನಿಯಮಗಳನ್ನು ವ್ಯವಸ್ಥಿತವಾಗಿ ಉಲ್ಲಂಘಿಸಿದೆ. ಪ್ರತಿ ಡೆಬಿಟ್ ವಹಿವಾಟಿಗೆ (ಡಿಜಿಟಲ್ ವಿಧಾನಗಳ ಮೂಲಕವೂ) ತಿಂಗಳಿಗೆ ನಾಲ್ಕು ವಹಿವಾಟು ನಿಗದಿಪಡಿಸಿ 17.70 ರೂ. ವಸೂಲಿ ಮಾಡುತ್ತಿವೆ.

ಇದನ್ನೂ ಓದಿ: ಸೆನ್ಸೆಕ್ಸ್ ಮಹಾ ಕುಸಿತದ ದಿನವೇ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ ಇನ್ಫಿ ಷೇರು ಬೆಲೆ

ಸೇವಾ ಶುಲ್ಕವನ್ನು ಹೇರುವುದರಿಂದ 2015- 20ರ ಅವಧಿಯಲ್ಲಿ ಎಸ್‌ಬಿಐ ಸುಮಾರು 12 ಕೋಟಿ ಬಿಎಸ್‌ಬಿಡಿಎನಿಂದ 300 ಕೋಟಿ ರೂ. ಸಂಗ್ರಹಿಸಿದೆ. 2018-19ರ ಅವಧಿಯಲ್ಲಿ ಕೇವಲ 72 ಕೋಟಿ ರೂ. ಹಾಗೂ 2019-20ರ ನಡುವೆ 158 ಕೋಟಿ ರೂ. ಕಲೆಹಾಕಿದೆ ಎಂದು ಐಐಟಿ ಬಾಂಬೆ ಪ್ರಾಧ್ಯಾಪಕ ಆಶಿಶ್ ದಾಸ್ ನಡೆಸಿದ ಅಧ್ಯಯನ ವರದಿ ಹೇಳಿದೆ.

ಬಿಎಸ್‌ಬಿಡಿಎ ಮೇಲೆ ಶುಲ್ಕ ವಿಧಿಸುವಿಕೆ, 2013ರ ಸೆಪ್ಟೆಂಬರ್ ಆರ್‌ಬಿಐ ಮಾರ್ಗಸೂಚಿಯಂತೆ ನಿರ್ದೇಶಿಸಲಾಗುತ್ತದೆ. ನಿರ್ದೇಶನದ ಪ್ರಕಾರ, ಈ ಖಾತೆದಾರರಿಗೆ ಒಂದು ತಿಂಗಳಲ್ಲಿ 'ನಾಲ್ಕು ವಿತ್​ಡ್ರಾಗೂ ಹೆಚ್ಚು' ಅವಕಾಶವಿದೆ. ಬ್ಯಾಂಕಿನ ವಿವೇಚನೆಯಿಂದ ಇದಕ್ಕೆ ಶುಲ್ಕ ವಿಧಿಸುವುದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.