ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ತನ್ನ ಗ್ರಾಹಕರಿಗೆ 'ಎಟಿಎಂ'ನಿಂದ ಹೆಚ್ಚಿನ ಮೊತ್ತದ ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತಿದೆ ಎಂದು ಎಸ್‌ಬಿಐ ತನ್ನ ವೆಬ್ಸೈಟ್ನಲ್ಲಿ (sbi.co.in) ತಿಳಿಸಿದೆ.
ಎಸ್‌ಬಿಐ ದೇಶಾದ್ಯಂತ 50,000ಕ್ಕೂ ಅಧಿಕ ಎಟಿಎಂ ಕೇಂದ್ರಗಳನ್ನು ಹೊಂದಿದ್ದು, ತನ್ನ ಗ್ರಾಹಕರಿಗೆ ಉಚಿತ ವಹಿವಾಟು ನಡೆಸುವ ಅವಕಾಶ ಕಲ್ಪಿಸಿದೆ. ಎಸ್‌ಬಿಐ ಗ್ರಾಹಕರಲ್ಲದೆ ಮೆಸ್ಟ್ರೋ (Maestro), ಮಾಸ್ಟರ್ ಕಾರ್ಡ್, ಸಿರಸ್, ವೀಸಾ ಮತ್ತು ವೀಸಾ ಎಲೆಕ್ಟ್ರಾನ್ ಲೋಗೊ ಉಳ್ಳ ಇತರ ಬ್ಯಾಂಕ್ಗಳು ನೀಡುವ ಕಾರ್ಡ್‌ಗಳಿಂದ ಎಸ್‌ಬಿಐ ಎಟಿಎಂಗಳಲ್ಲಿ ಬಳಸಬಹುದೆಂದು ಹೇಳಿದೆ.
* ಕ್ಲಾಸಿಕ್ ಡೆಬಿಟ್ ಕಾರ್ಡ್ದಾರರು ಎಟಿಎಂನಿಂದ ನಿತ್ಯ ಗರಿಷ್ಠ ₹ 40,000 ಸ್ವೀಕರಿಸಬಹುದು. ಕ್ಲಾಸಿಕ್ ಕಾರ್ಡ್ಗಿಂತ ಹೆಚ್ಚಿನ ಮೌಲ್ಯದ ಕಾರ್ಡ್ ಗ್ರಾಹಕರು ದಿನಕ್ಕೆ ಗರಿಷ್ಠ 1 ಲಕ್ಷ ಪಡೆಯಬಹುದಾಗಿದೆ.
* ನಗದು ಹಿಂಪಡೆಯುವಿಕೆ ಹೊರತಾಗಿ, ಎಸ್‌ಬಿಐ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯ ಬಾಕಿ ಮೊತ್ತ ಪರಿಶೀಲನೆ, ಎಟಿಎಂನ ಪಿನ್ ಸಂಖ್ಯೆ ಬದಲಾವಣೆ, ಮಿನಿ ಸ್ಟೇಟ್‌ಮೆಂಟ್ ಸ್ವೀಕೃತಿ, ಕ್ರೆಡಿಟ್ ಕಾರ್ಡ್ ಪಾವತಿ, ಒಂದು ಎಸ್‌ಬಿಐ ಡೆಬಿಟ್ ಕಾರ್ಡ್‌ನಿಂದ ಇನ್ನೊಂದಕ್ಕೆ ಹಣ ಕಳುಹಿಸಬಹುದು.
* ಎಸ್‌ಬಿಐ ಗ್ರಾಹಕರು ಚೆಕ್ ಬುಕ್ ಕೋರಿಕೆ, ಬಿಲ್ ಪಾವತಿ, ಮೊಬೈಲ್ ಬ್ಯಾಂಕ್ ನೋಂದಣಿ ಮತ್ತು ಐಎಂಪಿಎಸ್ ಸೇವೆಗಳನ್ನು ನೋಂದಾಯಿಸಬಹುದು.
* ಎಸ್‌ಬಿಐ ಗ್ರಾಹಕರು 1 ತಿಂಗಳಲ್ಲಿ ತಮ್ಮ ಎಟಿಎಂ ಕಾರ್ಡ್‌ಗಳನ್ನು ಇತರೆ ಬ್ಯಾಂಕ್ಗಳ ಎಟಿಎಂಗಳಲ್ಲಿ ಮೆಟ್ರೋ ನಗರ 3 ಮತ್ತು ಮೆಟ್ರೊ ನಗರ ಹೊರತುಪಡಿಸಿ 5 ಉಚಿತ ವಹಿವಾಟುಗಳನ್ನು ನಡೆಸಬಹುದು.