ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಇ- ಮೇಲ್ ಒಂದನ್ನು ಕಳುಹಿಸಿದೆ. 'ನಿಮ್ಮ ಸುರಕ್ಷತೆಗಾಗಿ ಒಂದು ಪತ್ರ' ಎಂಬ ಶೀರ್ಷಿಕೆಯಡಿ ಆನ್‌ಲೈನ್ ಬ್ಯಾಂಕಿಂಗ್ಗೆ ಗ್ರಾಹಕರು ಅನುಸರಿಸಬೇಕಾದ ಆರು ಪ್ರಮುಖ ಸಲಹೆಗಳನ್ನು ಅದರಲ್ಲಿ ಸೂಚಿಸಿದೆ.
ಸುರಕ್ಷಿತ ಬ್ಯಾಂಕಿಂಗ್‌ನ ಪ್ರಮುಖ ಅಂಶವೆಂದರೆ ಜಾಗರೂಕತೆ. ವಂಚಕರಿಂದ ತಮ್ಮ ವೈಯಕ್ತಿಕ ಮಾಹಿತಿಯನ್ನು ಕಾಪಾಡಿಕೊಳ್ಳಲು ನಮ್ಮ ಗ್ರಾಹಕರು ಅನುಸರಿಸಬೇಕಾದ ಆರು ಪ್ರಮುಖ ಪ್ರೋಟೋಕಾಲ್‌ಗಳನ್ನು ಎಸ್‌ಬಿಐ ರೂಪಿಸಿದೆ. ಸುರಕ್ಷಿತವಾಗಿರಿ, ಬ್ಯಾಂಕ್ ಸುರಕ್ಷಿತವಾಗಿರಿಸಿ ಎಂದು ಟ್ವೀಟ್ ಮೂಲಕ ತಿಳಿಸಿದೆ.
-
The key to safe banking is vigilance. SBI has laid out six important protocols that our customers must follow in order to safeguard their personal information from fraudsters. Be Safe. Bank Safe.#SBI #StateBankOfIndia #BeSafe #BankSafe #SafetyTips pic.twitter.com/3ofVr9v25y
— State Bank of India (@TheOfficialSBI) April 23, 2020 " class="align-text-top noRightClick twitterSection" data="
">The key to safe banking is vigilance. SBI has laid out six important protocols that our customers must follow in order to safeguard their personal information from fraudsters. Be Safe. Bank Safe.#SBI #StateBankOfIndia #BeSafe #BankSafe #SafetyTips pic.twitter.com/3ofVr9v25y
— State Bank of India (@TheOfficialSBI) April 23, 2020The key to safe banking is vigilance. SBI has laid out six important protocols that our customers must follow in order to safeguard their personal information from fraudsters. Be Safe. Bank Safe.#SBI #StateBankOfIndia #BeSafe #BankSafe #SafetyTips pic.twitter.com/3ofVr9v25y
— State Bank of India (@TheOfficialSBI) April 23, 2020
1) ಎಸ್‌ಬಿಐ ಗ್ರಾಹಕರಿಗೆ ಇಎಂಐ ಅಥವಾ ಡಿಬಿಟಿ ಅಥವಾ ಪ್ರಧಾನ ಮಂತ್ರಿ ಕೇರ್ ಫಂಡ್ ಅಥವಾ ಇನ್ನಾವುದೇ ಕೇರ್ ಫಂಡ್‌ಗೆ ಸಂಬಂಧಿಸಿದಂತೆ ಒಟಿಪಿ ಅಥವಾ ಬ್ಯಾಂಕ್ ವಿವರಗಳನ್ನು ಕೇಳುವ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ಈ ತಿಂಗಳ ಆರಂಭದಲ್ಲಿ ಎಸ್‌ಬಿಐ ಇಎಂಐ ಹಗರಣದ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡಿತ್ತು.
2) ಎಸ್‌ಎಂಎಸ್, ಇ-ಮೇಲ್, ಫೋನ್ ಕರೆ ಅಥವಾ ಜಾಹೀರಾತುಗಳ ಮೂಲಕ ನಗದು ಬಹುಮಾನ ಅಥವಾ ಉದ್ಯೋಗಾವಕಾಶಗಳನ್ನು ನೀಡುವುದಾಗಿ ಹೇಳುವ ನಕಲಿ ಯೋಜನೆಗಳ ಬಗ್ಗೆ ಎಚ್ಚರದಿಂದಿರಿ.
3) ಬ್ಯಾಂಕ್‌ಗೆ ಸಂಬಂಧಿಸಿದ ಎಲ್ಲಾ ಪಾಸ್‌ವರ್ಡ್‌ಗಳನ್ನು ಕಾಲಕಾಲಕ್ಕೆ ಬದಲಾಯಿಸಿ.
4) ಎಸ್‌ಬಿಐ ಅಥವಾ ಅದರ ಪ್ರತಿನಿಧಿಗಳು ಎಂದಿಗೂ ಇಮೇಲ್ / ಎಸ್‌ಎಂಎಸ್ ಕಳುಹಿಸುವುದಿಲ್ಲ ಅಥವಾ ವೈಯಕ್ತಿಕ ಮಾಹಿತಿ, ಪಾಸ್‌ವರ್ಡ್ ಅಥವಾ ಒಟಿಪಿಗಾಗಿ ತಮ್ಮ ಗ್ರಾಹಕರನ್ನು ಕೇಳುವುದಿಲ್ಲ ಎಂಬುದನ್ನು ದಯವಿಟ್ಟು ನೆನಪಿನಲ್ಲಿಡಿ.
5) ಸಂಪರ್ಕ ಸಂಖ್ಯೆ ಮತ್ತು ಇತರ ವಿವರಗಳಿಗಾಗಿ ಯಾವಾಗಲೂ ಎಸ್‌ಬಿಐನ ಅಧಿಕೃತ ವೆಬ್‌ಸೈಟ್ ಅನ್ನು ಮಾತ್ರ ಬಳಸಿ. ಇಂಟರ್ನೆಟ್ ಹುಡುಕಾಟ ಫಲಿತಾಂಶಗಳಲ್ಲಿ ಲಭ್ಯವಿರುವ ಯಾವುದೇ ಬ್ಯಾಂಕ್ ಮಾಹಿತಿಯನ್ನು ಅವಲಂಬಿಸಬೇಡಿ.
6) ವಂಚಕರ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ತಕ್ಷಣ ವರದಿ ಮಾಡಿ ಮತ್ತು ಅದನ್ನು ನಿಮ್ಮ ಹತ್ತಿರದ ಎಸ್‌ಬಿಐ ಶಾಖೆಗೆ ತಿಳಿಸಿ.