ನವದೆಹಲಿ : ಉಕ್ಕು ಉತ್ಪಾದನೆ ಮಾಡುವುದಕ್ಕಿಂತ ಜನರ ಜೀವ ರಕ್ಷಿಸುವುದೇ ಮುಖ್ಯವಾಗಿದೆ ಎಂದು ಜೆಎಸ್‌ಡಬ್ಲ್ಯೂ ಸಮೂಹದ ಅಧ್ಯಕ್ಷ ಸಜ್ಜನ್ ಜಿಂದಾಲ್ ಹೇಳಿದ್ದಾರೆ.
ಕೋವಿಡ್ ಪ್ರಕರಣಗಳ ತೀವ್ರ ಏರಿಕೆಯ ಮಧ್ಯೆ ಜೀವ ರಕ್ಷಕ ಆಕ್ಸಿಜನ್ ಕೊರತೆ ಪೂರೈಸಲು ಜೆಎಸ್‌ಡಬ್ಲ್ಯು ದ್ರವ ವೈದ್ಯಕೀಯ ಆಮ್ಲಜನಕದ ಸರಬರಾಜು ಹೆಚ್ಚಳ ಮಾಡಿದೆ.
ಉತ್ಪಾದನಾ ಕಡಿತ ಸಂಕೇತಿಸುತ್ತಾ, ಕಂಪನಿಯೊಂದಿಗೆ ಲಭ್ಯವಿರುವ ಯಾವುದೇ ಸಂಪನ್ಮೂಲಗಳು ದೇಶಕ್ಕೆ ಅಗತ್ಯವಿರುವವರೆಗೂ ಉತ್ಪಾದನೆಯು ನಷ್ಟವಾಗಬಹುದು ಎಂದರು.
ಉಕ್ಕಿನ ಸಚಿವಾಲಯದ ನಿರ್ದೇಶನದ ಮೇರೆಗೆ ದೇಶದ ಉಕ್ಕಿನ ಸ್ಥಾವರಗಳು ವಿವಿಧ ರಾಜ್ಯಗಳಿಗೆ ದ್ರವ ವೈದ್ಯಕೀಯ ಆಮ್ಲಜನಕ (ಎಲ್‌ಎಂಒ) ಪೂರೈಸುತ್ತಿವೆ. ಅನಿಲದ ಬೇಡಿಕೆ ಹೆಚ್ಚುತ್ತಿರುವ ಮಧ್ಯೆ, ಇದನ್ನು ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತದೆ.
ಭಾರತೀಯರ ಜೀವ ಉಳಿಸಲು ತಮ್ಮ ಪ್ಲಾಂಟ್ಗಳಿಂದ ಆಮ್ಲಜನಕದ ಪೂರೈಕೆ ಗರಿಷ್ಠಗೊಳಿಸುವುದಾಗಿ ಜಿಂದಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಕ್ಕನ್ನು ಉತ್ಪಾದಿಸುವುದಕ್ಕಿಂತ ಜೀವ ಉಳಿಸುವುದು ಬಹಳ ಮುಖ್ಯವಾಗಿದೆ. ಕಂಪನಿಯೊಂದಿಗೆ ಲಭ್ಯವಿರುವ ಯಾವುದೇ ಸಂಪನ್ಮೂಲ ದೇಶಕ್ಕೆ ಅಗತ್ಯವಿರುವವರೆಗೂ ಉತ್ಪಾದನೆ ಮಾಡಲಿದೆ ಎಂದರು.
ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ಬಳಸಲಾಗುವ ಜೀವ ರಕ್ಷಕ ಅನಿಲದ ಕೊರತೆ ಪೂರೈಸಲು ಉಕ್ಕಿನ ಸ್ಥಾವರಗಳು 3.5 ದಿನಗಳ ಹಿಂದಿನಿಂದ ತಮ್ಮ ಆಮ್ಲಜನಕದ ಸಂಗ್ರಹವನ್ನು ಕೇವಲ ಅರ್ಧ ದಿನಕ್ಕೆ ಇಳಿಸಿವೆ ಎಂದು ಉಕ್ಕಿನ ಸಚಿವಾಲಯ ತಿಳಿಸಿದೆ.
ಉಕ್ಕಿನ ಪ್ಲಾಂಟ್ಗಳು ಸಾಮಾನ್ಯವಾಗಿ ಕನಿಷ್ಟ ಮೂರು ದಿನಗಳ ದ್ರವ ಆಮ್ಲಜನಕ ಸಂಗ್ರಹಿಸುತ್ತವೆ. ಇದರಿಂದ ತುರ್ತು ಪರಿಸ್ಥಿತಿಯಲ್ಲಿ ಅನಿಲ ಆಮ್ಲಜನಕ ಹೊರ ತೆಗೆಯಲಾಗುತ್ತದೆ. ಉಕ್ಕಿನ ತಯಾರಿಕೆ ಪ್ರಕ್ರಿಯೆಗೆ ಅದನ್ನು ಕಳುಹಿಸಲಾಗುತ್ತದೆ.
ರೋಗಿಗಳಿಗೆ ಅನಿಲ ಆಮ್ಲಜನಕವನ್ನು ನೇರವಾಗಿ ಪೂರೈಸಲು ಜೆಎಸ್‌ಡಬ್ಲ್ಯು ಮೀಸಲಾದ ಪೈಪ್‌ಲೈನ್ ಹಾಕುತ್ತಿರುವ ತನ್ನ ಪ್ಲಾಂಟ್ಗಳ ಸುತ್ತ ತುರ್ತು ಆಧಾರದ ಮೇಲೆ ದೊಡ್ಡ ಕೋವಿಡ್ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಇದು ದ್ರವ ಆಮ್ಲಜನಕದ ಮೇಲಿನ ಅವಲಂಬನೆ ತಪ್ಪಿಸುತ್ತದೆ ಎಂದು ಜಿಂದಾಲ್ ಹೇಳಿದರು.