ETV Bharat / business

ವರ್ಷಾಂತ್ಯದಲ್ಲಿ ಸ್ಯಾಮ್‌ಸಂಗ್ ಪೇ ಡೆಬಿಟ್ ಕಾರ್ಡ್ ಶುರು - Samsung Pay debit card

ಪ್ರಸ್ತುತ, ಹಿಂದೆಂದಿಗಿಂತಲೂ ಹೆಚ್ಚಾಗಿ ಮೊಬೈಲ್ ಹಣಕಾಸು ಸೇವೆ ಮತ್ತು ಹಣ ನಿರ್ವಹಣಾ ಸಾಧನಗಳು ದೈನಂದಿನ ಜೀವನದಲ್ಲಿ ದೊಡ್ಡ ಪಾತ್ರ ವಹಿಸುತ್ತಿವೆ. ಇದು ಹೊಸ-ಹೊಸ ಸಾಧ್ಯತೆಗಳನ್ನು ತೆರೆಯುತ್ತಿದೆ. ನಮ್ಮ ಗ್ರಾಹಕರಿಗೆ ಸ್ಯಾಮ್‌ಸಂಗ್ ಪೇ ಡೆಬಿಟ್ ಕಾರ್ಡ್ ಅನ್ನು ವರ್ಷಾಂತ್ಯದ ಒಳಗೆ ಪರಿಚಯಿಸುತ್ತೇವೆ ಎಂದು ಕಂಪನಿ ಹೇಳಿದೆ.

Samsung Pay debit card
ಸ್ಯಾಮ್‌ಸಂಗ್
author img

By

Published : May 8, 2020, 5:58 PM IST

ಸಿಯೋಲ್ : ಸ್ಯಾಮ್‌ಸಂಗ್ ತನ್ನ ಸ್ಯಾಮ್‌ಸಂಗ್ ಪೇ ಡೆಬಿಟ್ ಕಾರ್ಡ್, ಈ ವರ್ಷ ನಗದು ನಿರ್ವಹಣಾ ಖಾತೆ ಬೆಂಬಲದೊಂದಿಗೆ ಆರಂಭಿಸಲು ಸನ್ನದ್ಧವಾಗಿದೆ.

ಸ್ಯಾಮ್​ಸಂಗ್​ ತನ್ನ ಗ್ರಾಹಕರ ಸೇವಾ ಜಾಲವನ್ನು ವಿಸ್ತರಿಸಲಿದೆ. ಕಳೆದ ಒಂದು ವರ್ಷದಿಂದ ನಾವು ಪ್ರಥಮ ಮೊಬೈಲ್ ಹಣ ನಿರ್ವಹಣಾ ಪ್ಲಾಟ್​ಫಾರ್ಟ್​ ಅಭಿವೃದ್ಧಿಪಡಿಸುವಲ್ಲಿ ನಿರತರಾಗಿದ್ದೇವೆ ಎಂದು ಸ್ಯಾಮ್‌ಸಂಗ್ ಪೇ ಉಪಾಧ್ಯಕ್ಷ/ ಜಿಎಂ ಸಾಂಗ್ ಅಹ್ನ್ ಹೇಳಿದರು.

ಪ್ರಸ್ತುತ, ಹಿಂದೆಂದಿಗಿಂತಲೂ ಹೆಚ್ಚಾಗಿ ಮೊಬೈಲ್ ಹಣಕಾಸು ಸೇವೆ ಮತ್ತು ಹಣ ನಿರ್ವಹಣಾ ಸಾಧನಗಳು ದೈನಂದಿನ ಜೀವನದಲ್ಲಿ ದೊಡ್ಡ ಪಾತ್ರ ವಹಿಸುತ್ತಿವೆ. ಇದು ಹೊಸ-ಹೊಸ ಸಾಧ್ಯತೆಗಳನ್ನು ತೆರೆಯುತ್ತಿದೆ ಎಂದು ಅಹ್ನ್ ಬ್ಲಾಗ್ ಪೋಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ.

ವಿಶಾಲ ದೃಷ್ಟಿಕೋನದ ಜತೆ ಮೊದಲ ಹೆಜ್ಜೆ ಇಡುತ್ತಿದ್ದೇವೆ. ಈ ಬೇಸಿಗೆಯಲ್ಲಿ ಸ್ಯಾಮ್‌ಸಂಗ್ ಸೋಫಿಯ ಸಹಭಾಗಿತ್ವದಲ್ಲಿ ನಗದು ನಿರ್ವಹಣಾ ಖಾತೆಯ ಬೆಂಬಲದ ಜತೆಗೆ ಹೊಸ ಡೆಬಿಟ್ ಕಾರ್ಡ್‌ ಸ್ಯಾಮ್‌ಸಂಗ್ ಪೇ ಪರಿಚಯಿಸಲಿದೆ. ಮುಂಬರುವ ವಾರಗಳಲ್ಲಿ ಈ ಬಗ್ಗೆ ಹೆಚ್ಚಿನ ವಿವರ ಹಂಚಿಕೊಳ್ಳುತ್ತೇನೆ ಎಂದು ಅವರು ಇದೇ ವೇಳೆ ಬರೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.