ಸಿಯೋಲ್: ಲಂಚ ಪ್ರಕರಣದಲ್ಲಿ ಜಾಗತಿಕ ಟೆಕ್ ದೈತ್ಯ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಉಪಾಧ್ಯಕ್ಷ ಸ್ಥಾನದ ಉತ್ತರಾಧಿಕಾರಿ ಲೀ ಜೇ-ಯಂಗ್ ಅವರು ಒಂಬತ್ತು ವರ್ಷಗಳ ಜೈಲು ಶಿಕ್ಷೆ ಎದುರಿಸುತ್ತಿದ್ದಾರೆ.
ಲಂಚ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಪಾರ್ಕ್ ಗಿಯುನ್-ಹೆಯನ್ನೂ ಕೂಡ ಪಾಲುದಾರರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಬುಧವಾರ ನಡೆದ ಅಂತಿಮ ವಿಚಾರಣೆಯ ಸಂದರ್ಭದಲ್ಲಿ ದೂರುದಾರರು ಲೀ ಅವರಿಗೆ ಒಂಬತ್ತು ವರ್ಷ ಜೈಲು ಶಿಕ್ಷೆ ವಿಧಿಸಬೇಕೆಂದು ಕೋರ್ಟ್ಗೆ ಮನವಿ ಮಾಡಿದ್ದಾರೆ ಎಂದು ಕೊರಿಯಾ ಹೆರಾಲ್ಡ್ ವರದಿ ಮಾಡಿದೆ.
ನ್ಯಾಯಾಲಯವು ಮುಂದಿನ ವರ್ಷ ಜನವರಿ 18ರಂದು ತನ್ನ ಅಂತಿಮ ತೀರ್ಪಿನ ದಿನಾಂಕ ಗೊತ್ತುಪಡಿಸಿದೆ.
ಓದಿ: ಅಣಬೆ, ನೀರು 'ಮಾರಿ' ಅಂಬಾನಿ, ಜಾಕ್ ಮಾ ಹಿಂದಿಕ್ಕಿ ನಂ.1 ಶ್ರೀಮಂತನಾದ ಜಲೋದ್ಯಮಿ!
ಸ್ಯಾಮ್ಸಂಗ್ ಅಂತಹ ಅಗಾಧ ಶಕ್ತಿ ಹೊಂದಿರುವ ಗ್ರೂಪಾಗಿದೆ. ಕೊರಿಯಾದ ಕಂಪನಿಗಳನ್ನು ಸ್ಯಾಮ್ಸಂಗ್ ಮತ್ತು ಸ್ಯಾಮ್ಸಂಗ್ಯೇತರ ಕಂಪನಿಗಳೆಂದು ವಿಂಗಡಿಸುತ್ತಾರೆ ಎಂದು ಅಂತಿಮ ವಿಚಾರಣೆಯ ಸಮಯದಲ್ಲಿ ದೂರುದಾರರು ಹೇಳಿದ್ದಾರೆ.
ನಮ್ಮ ಸಮಾಜದ ಉತ್ತಮ ಅಭಿವೃದ್ಧಿಗಾಗಿ ಭ್ರಷ್ಟಾಚಾರದಲ್ಲಿ ದೃಢವಾದ ಮನೋಭಾವ ತೋರಿಸುವುದು ಮತ್ತು ಅಂತಹ ಪ್ರಕರಣಗಳಿಗೆ ಉದಾಹರಣೆ ನೀಡುವುದು ಸ್ಯಾಮ್‌ಸಂಗ್‌ನ ನಿಲುವು ಎಂದಿದ್ದಾರೆ.
ಇತರ ಇಬ್ಬರು ಸ್ಯಾಮ್‌ಸಂಗ್ ಅಧಿಕಾರಿಗಳಾದ ಜಂಗ್ ಚೂಂಗ್-ಕಿ ಮತ್ತು ಪಾರ್ಕ್ ಸಾಂಗ್-ಜಿನ್ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಸಹ ವಕೀಲರು ಕೋರಿದ್ದಾರೆ.
ನಾನು ವಿಷಾದದ ಹೃದಯದಿಂದ ಇಲ್ಲಿ ನಿಂತಿದ್ದೇನೆ. ನಾನು ದೇಶದ ಘನತೆಗೆ ಸೂಕ್ತವಾದ ಹೊಸ ಸ್ಯಾಮ್‌ಸಂಗ್ ಮಾಡಲು ಬಯಸುತ್ತೇನೆ. ನನ್ನ ಗೌರವಾನ್ವಿತ ತಂದೆಗೆ ಉತ್ತಮ ಮಗನಾಗುತ್ತೇನೆ ಎಂದು ಲೀ ಹೇಳಿದ್ದಾರೆ.