ETV Bharat / business

ಆತ್ಮನಿರ್ಭರ ಭಾರತಕ್ಕೆ ರಿಲಯನ್ಸ್​-ಗೂಗಲ್​ ಸಾಥ್​ : ಆಂಡ್ರಾಯ್ಡ್ ಬೇಸ್ಡ್​ ನ್ಯೂ ಆಪರೇಟಿಂಗ್ ಸಿಸ್ಟಮ್!

author img

By

Published : Jul 15, 2020, 5:11 PM IST

ನೂತನ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಸ ಸ್ಮಾರ್ಟ್​​ಫೋನ್​ಗಳನ್ನು ಅಭಿವೃದ್ಧಿಪಡಿಸಲು ಬಳಸಿಕೊಳ್ಳಲಾಗುತ್ತದೆ. ಈಗಲೂ 2ಜಿ ಬಳಸುತ್ತಿರುವ ಬಹುಸಂಖ್ಯೆಯ ಭಾರತೀಯರಿಗೆ ಮೇಲ್ದರ್ಜೆಯ ತಂತ್ರಜ್ಞಾನಕ್ಕೆ ಪ್ರವೇಶ ಪಡೆಯಲು ನೆರವಾಗಲಿದೆ. ಈ ಹೊಸ ಆಪರೇಟಿಂಗ್ ಸಿಸ್ಟಮ್ ಬಳಸಿ ಭಾರತವನ್ನು ‘2 ಜಿ ಮುಕ್ತ’ ಮಾಡಲು ಜಿಯೋ ಯೋಜಿಸಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದರು.

ಆಂಡ್ರಾಯ್ಡ್ ಬೇಸ್ಡ್​ ನ್ಯೂ ಆಪರೇಟಿಂಗ್ ಸಿಸ್ಟಮ್
Android-based operating system

ಮುಂಬೈ : ಗೂಗಲ್ ಮತ್ತು ರಿಲಯನ್ಸ್​ ಜಿಯೋ ಜಂಟಿಯಾಗಿ ಆಂಡ್ರಾಯ್ಡ್ ಆಧಾರಿತ ಹೊಸ ಆಪರೇಟಿಂಗ್ ಸಿಸ್ಟಮ್ ಪ್ರಾರಂಭಿಸಲಿದ್ದು, ಇದನ್ನು ಕೈಗೆಟುಕುವ ಸ್ಮಾರ್ಟ್‌ಫೋನ್‌ಗಳ ತಯಾರಿಕೆಗೆ ಬಳಸಲಾಗುತ್ತದೆ.

ನೂತನ ಆಪರೇಟಿಂಗ್ ಸಿಸ್ಟಮ್‌ ಹೊಸ ಸ್ಮಾರ್ಟ್​​ಫೋನ್​ಗಳನ್ನು ಅಭಿವೃದ್ಧಿಪಡಿಸಲು ಬಳಸಿಕೊಳ್ಳಲಾಗುತ್ತದೆ. ಈಗಲೂ 2ಜಿ ಬಳಸುತ್ತಿರುವ ಬಹುಸಂಖ್ಯೆಯ ಭಾರತೀಯರಿಗೆ ಮೇಲ್ದರ್ಜೆಯ ತಂತ್ರಜ್ಞಾನಕ್ಕೆ ಪ್ರವೇಶ ಪಡೆಯಲು ನೆರವಾಗಲಿದೆ. ಈ ಹೊಸ ಆಪರೇಟಿಂಗ್ ಸಿಸ್ಟಮ್ ಬಳಸಿ ಭಾರತವನ್ನು ‘2ಜಿ ಮುಕ್ತ’ ಮಾಡಲು ಜಿಯೋ ಯೋಜಿಸಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದರು.

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮತ್ತು ಪ್ಲೇ ಸ್ಟೋರ್‌ ಉತ್ತಮಗೊಳಿಸಲು ಕೈಗೆಟುಕುವ ಸ್ಮಾರ್ಟ್‌ಫೋನ್ ಜಂಟಿಯಾಗಿ ಅಭಿವೃದ್ಧಿಪಡಿಸಲು ಜಿಯೋ ಪ್ಲಾಟ್‌ಫಾರ್ಮ್‌ ಮತ್ತು ಗೂಗಲ್ ನಡುವೆ ವಾಣಿಜ್ಯ ಒಪ್ಪಂದ ಏರ್ಪಟ್ಟಿದೆ.

ಗೂಗಲ್ ಲಕ್ಷಾಂತರ ಭಾರತೀಯರಿಗೆ ನೆರವಾಗುವಂತಹ ಮಾಹಿತಿ ಪಡೆಯಲು ಅವಕಾಶ ನೀಡಿದೆ. ಜಿಯೋದಂತೆ ಬದಲಾವಣೆ ಮತ್ತು ನಾವೀನ್ಯತೆಗೆ ಒಂದೊಂದು ಶಕ್ತಿಯಾಗಿದೆ. ನಾವು ಗೂಗಲ್‌ನ ಸ್ವಾಗತಿಸುತ್ತೇವೆ. ಅಂತರ್ಜಾಲ ಬಳಕೆಯನ್ನು ಸಾರ್ವತ್ರಿಕಗೊಳಿಸುವುದರಿಂದ ಹಿಡಿದು ಹೊಸ ಡಿಜಿಟಲ್ ಆರ್ಥಿಕತೆಯನ್ನು ಸದೃಢವಾಗಿಸುವವರೆಗೆ ನಮ್ಮ ಪಾಲುದಾರಿಕೆ ಸಾಗಲಿದೆ ಎಂದರು.

ಗೂಗಲ್ ಸಿಇಒ ಸುಂದರ್ ಪಿಚೈ ಅವರು ರಿಲಯನ್ಸ್ ಎಜಿಎಂನಲ್ಲಿ ಮಾತನಾಡುತ್ತಾ, ಜಿಯೋ ಪ್ಲಾಟ್‌ಫಾರ್ಮ್‌ ಜತೆ ಭಾರತದಲ್ಲಿ ಟೆಕ್ ಕಂಪನಿಯ ಕಾರ್ಯತಂತ್ರದ ಸಹಭಾಗಿತ್ವ ಮುಂದುವರಿಯುವುದು ದೃಢಪಟ್ಟಿದೆ. ಭಾರತದಲ್ಲಿ ಡಿಜಿಟಲ್ ರೂಪಾಂತರದ ವೇಗ ಮತ್ತು ಪ್ರಮಾಣವು ನಮಗೆ ಹೆಚ್ಚು ಸ್ಫೂರ್ತಿದಾಯಕವಾಗಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.