ETV Bharat / business

ಜಿಯೋದಲ್ಲಿ ಗೂಗಲ್​ನಿಂದ ₹33,737 ಕೋಟಿ ಹೂಡಿಕೆ.. ಮುಂದಿನ ವರ್ಷ ಮೇಡ್​ ಇನ್​ ಇಂಡಿಯಾ 5ಜಿ - ಅಂಬಾನಿ

author img

By

Published : Jul 15, 2020, 2:56 PM IST

ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಮೊದಲ ಆನ್‌ಲೈನ್ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಬುಧವಾರ ನಡೆಸಿದ್ದು, 500 ಸ್ಥಳಗಳಿಂದ 1 ಲಕ್ಷಕ್ಕೂ ಅಧಿಕ ಷೇರುದಾರರನ್ನು ಏಕಕಾಲದಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಮಾತನಾಡಿದ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ಜಿಯೋ ಆರಂಭದಿಂದಲೂ 5ಜಿ ಸೇವೆ ಅಭಿವೃದ್ಧಿಗೆ ರಿಲಯನ್ಸ್​ ಯತ್ನಿಸುತ್ತಿದೆ. ಇದು ಭಾರತದಲ್ಲಿ ವಿಶ್ವ ದರ್ಜೆಯ 5ಜಿ ಸೇವೆ ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ. ಈ ಸೇವೆಗಳ ಪ್ರಯೋಗಗಳು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಮುಂದಿನ ವರ್ಷದ ವೇಳೆಗೆ ನಿಯೋಜನೆಗೆ ಸಿದ್ಧವಾಗಲಿದೆ ಎಂದರು.

Mukesh Ambani
ಮುಖೇಶ್ ಅಂಬಾನಿ

ಮುಂಬೈ: ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇ7.7ರಷ್ಟು ಪಾಲು ಪಡೆಯಲು ಗೂಗಲ್ 33,737 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್​ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಮೊದಲ ಆನ್‌ಲೈನ್ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಬುಧವಾರ ನಡೆಸಿದ್ದು, 500 ಸ್ಥಳಗಳಿಂದ 1 ಲಕ್ಷಕ್ಕೂ ಅಧಿಕ ಷೇರುದಾರರನ್ನು ಏಕಕಾಲದಲ್ಲಿ ಭಾಗವಹಿಸಿದ್ದಾರೆ. ನೂತನ ವರ್ಚುವಲ್ ಪ್ಲಾಟ್‌ಫಾರ್ಮ್‌ ಜತೆಗೆ ಅತಿ ದೊಡ್ಡ ವ್ಯವಹಾರಿಕ ಸಭೆ ಇದಾಗಿದೆ.

43ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಆರ್​ಐಎಲ್​ ಮುಖ್ಯಸ್ಥ, ರಿಲಯನ್ಸ್ ಈಗ ಶೂನ್ಯ ನಿವ್ವಳ ಸಾಲ ಕಂಪನಿಯಾಗಿದೆ. ಜಿಯೋ ಆರಂಭದಿಂದಲೂ 5ಜಿ ಸೇವೆಯನ್ನು ಅಭಿವೃದ್ಧಿಗೆ ರಿಲಯನ್ಸ್​ ಯತ್ನಿಸುತ್ತಿದೆ. ಇದು ಭಾರತದಲ್ಲಿ ವಿಶ್ವ ದರ್ಜೆಯ 5ಜಿ ಸೇವೆಯನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ. ಈ ಸೇವೆಗಳ ಪ್ರಯೋಗಗಳು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಮುಂದಿನ ವರ್ಷದ ವೇಳೆಗೆ ನಿಯೋಜನೆಗೆ ಸಿದ್ಧವಾಗಲಿದೆ ಎಂದು ಭರವಸೆ ನೀಡಿದರು.

14ನೇ ಜಾಗತಿಕ ಒಪ್ಪಂದ : ಗೂಗಲ್​ ಜತೆಗಿನ ಒಪ್ಪಂದ ಮೂಲಕ ಜಿಯೋ ಸಂಸ್ಥೆ ಜಾಗತಿಕ ಒಟ್ಟು 14 ಕಂಪನಿಗಳು ಹೂಡಿಕೆಯ ಒಪ್ಪಂದ ಮಾಡಿಕೊಂಡಂತೆ ಆಗಿದೆ. ಫೇಸ್​ಬುಕ್- 43,573.62 ಕೋಟಿ ರೂ., ಸಿಲ್ವರ್ ಲೇಕ್ ಪಾಟ್​ನರ್ಸ್​- 6,655.75 ಕೋಟಿ ರೂ., ವಿಸ್ಟಾ ಈಕ್ವಿಟಿ ಪಾಟ್​ನರ್ಸ್-11,367 ಕೋಟಿ ರೂ., ಜನರಲ್ ಅಟ್ಲಾಂಟಿಕ್- 6,598.38 ಕೋಟಿ ರೂ., ಕೆಕೆಆರ್- 11,367 ಕೋಟಿ ರೂ., ಮುಬದಲಾ- 9,093.60 ಕೋಟಿ ರೂ., ಸಿಲ್ವರ್ ಲೇಕ್ ಪಾಟ್​ನರ್ಸ್ 2ನೇ ಹೂಡಿಕೆ- 4,546.80 ಕೋಟಿ ರೂ., ಅಬುಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿ- 5,683.50 ಕೋಟಿ ರೂ., ಟಿಪಿಜಿ- 4,546.80 ಕೋಟಿ ರೂ., ಎಲ್ ಕಾಟರ್​ಟನ್- 1,894.50 ಕೋಟಿ ರೂ., ಪಿಐಎಫ್- 11,367ಕೋಟಿ ರೂ., ಇಂಟೆಲ್ ಕ್ಯಾಪಿಟಲ್- 1,894.50 ಕೋಟಿ ರೂ., ಕ್ವಾಲ್​ಕಾಮ್ ವೆಂಚರ್ಸ್- 730 ಕೋಟಿ ರೂ ಹಾಗೂ ಇತ್ತೀಚಿನ ಗೂಗಲ್​ ಸಂಸ್ಥೆ 33,737 ಕೋಟಿ ರೂ. ಹೂಡಿಕೆ ಮಾಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.