ETV Bharat / business

ಸ್ಮಾರ್ಟ್​ಟಿವಿ ಮಾರ್ಕೆಟ್​ಗೆ ರಿಯಲ್​ಮಿ ಎಂಟ್ರಿ: 32 ಇಂಚಿನ HDಟಿವಿ ಬೆಲೆ 12,999 ರೂ. - ರಿಯಲ್​ಮಿ ಬಡ್ಸ್‌ ಏರ್‌

ಸ್ಮಾರ್ಟ್‌ ಟಿವಿ, ಸ್ಮಾರ್ಟ್‌ವಾಚ್‌, ಬಡ್ಸ್‌ ಏರ್‌ ಹಾಗೂ ಪವರ್ ಬ್ಯಾಂಕ್‌ ಅನ್ನು ಬಿಡುಗಡೆ ಮಾಡಿರುವುದಾಗಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. 4 ಸ್ಪೀಕರ್‌ ಹಾಗೂ 1 ಸಬ್ ‌ಊಫರ್‌ ಒಳಗೊಂಡ 100ವ್ಯಾಟ್ಸ್‌ ಸೌಂಡ್‌ಬಾರ್ ಮಾರುಕಟ್ಟೆಗೆ ಬರಲಿದೆ ಎಂದಿದೆ. ಇದರ ಬೆಲೆ ಹಾಗೂ ದಿನಾಂಕ ಹಂಚಿಕೊಂಡಿಲ್ಲ.

realme smart tv
ರಿಯಲ್​​ಮಿ ಸ್ಮಾರ್ಟ್​ ಟಿವಿ
author img

By

Published : May 25, 2020, 6:21 PM IST

ನವದೆಹಲಿ: ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ರಿಯಲ್​​ಮಿ ಟೆಕ್ ಲೈಫ್‌ಸ್ಟೈಲ್ ವಿಭಾಗದಲ್ಲಿ ತನ್ನ ಮೊದಲ ಸ್ಮಾರ್ಟ್ ಟಿವಿಯನ್ನು ಕೇವಲ 12,999 ರೂ.ಗಳ ಆರಂಭಿಕ ಬೆಲೆಯ ಮೂಲಕ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದೆ.

ಮೀಡಿಯಾ ಟೆಕ್ 64- ಬಿಟ್ ಕ್ವಾಡ್ ಕೋರ್ ಪ್ರೊಸೆಸರ್ ಮತ್ತು ಡಾಲ್ಬಿ ಆಡಿಯೊ ಪ್ರಮಾಣಿತ 24 ಡಬ್ಲ್ಯೂ ಕ್ವಾಡ್ ಸ್ಟಿರಿಯೊ ಸ್ಪೀಕರ್‌ಗಳ ಎರಡು ರೂಪಾಂತರಗಳಲ್ಲಿ ಸ್ಮಾರ್ಟ್​ಟಿವಿ ಪರಿಚಯಿಸಿದೆ. ರಿಯಲ್​ಮಿ ಸ್ಮಾರ್ಟ್​ಟಿವಿ 32 ಇಂಚು (ಎಚ್​ಡಿ) 12,999 ರೂ ಮತ್ತು 43 ಇಂಚು ಟಿವಿಗೆ 21,999 ರೂ. ನಿಗದಿ ಮಾಡಿ.

ಈ ಎರಡೂ ಮಾದರಿಗಳು ಜೂನ್ 2ರಿಂದ ರಿಯಲ್​ಮಿ.ಕಾಮ್ ಮತ್ತು ಫ್ಲಿಪ್​ಕಾರ್ಟ್​ನಲ್ಲಿ ಮಾರಾಟವಾಗಲಿವೆ. ಒಂದು ವರ್ಷ ಹೆಚ್ಚುವರಿ ವಾರಂಟಿ (ಟವಿ ಪ್ಯಾನೆಲ್‌ಗೆ ಮಾತ್ರ) 6 ತಿಂಗಳು ಯುಟ್ಯೂಬ್‌ ಪ್ರೀಮಿಯಂ ನೀಡಲಾಗಿದೆ.

64 ಬಿಟ್‌ ಮೀಡಿಯಾಟೆಕ್‌ ಪ್ರೊಸೆಸರ್‌, ಮಾಲಿ 470 ಜಿಪಿಯು, 1ಜಿಬಿ ರ್ಯಾಮ್​ ಮತ್ತು 8ಜಿಬಿ ಸಂಗ್ರಹ ಸಾಮರ್ಥ್ಯ ಒಳಗೊಂಡಿದೆ. ಡಿಸ್‌ಪ್ಲೇಯಲ್ಲಿ ಕ್ರೋಮಾ ಬೂಸ್ಟ್‌, ಎಚ್‌ಡಿಆರ್‌ 10 ಹಾಗೂ ಎಚ್‌ಎಲ್‌ಜಿ ಫಾರ್ಮ್ಯಾಟ್‌ಗೆ ನೆರವಾಗಲಿದೆ.

ಆ್ಯಂಡ್ರಾಯ್ಡ್​ ಟಿವಿ ಆಗಿರುವುದರಿಂದ ಎಲ್ಲ ಆ್ಯಂಡ್ರಾಯ್ಡ್‌ ಆ್ಯಪ್‌ಗಳೊಂದಿಗೆ ನೆಟ್‌ಫ್ಲಿಕ್ಸ್‌, ಯುಟ್ಯೂಬ್‌, ಡಿಸ್ನಿ+ ಸೇರಿದಂತೆ ಇತರ ಚಲನಚಿತ್ರ, ಟಿವಿ ಶೋ ವೀಕ್ಷಣೆಯ ಆ್ಯಪ್‌ಗಳನ್ನು ಹೊಂದಿದೆ.

4 ಸ್ಪೀಕರ್‌ ಹಾಗೂ 1 ಸಬ್‌ಊಫರ್‌ ಒಳಗೊಂಡ 100ವ್ಯಾಟ್ಸ್‌ ಸೌಂಡ್‌ಬಾರ್ ಮಾರುಕಟ್ಟೆಗೆ ಬರಲಿದೆ ಎಂದು ಹೇಳಿದೆ. ಆದರೆ, ಇದರ ಬೆಲೆ ಹಾಗೂ ಬಿಡುಗಡೆ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ.

3,999 ರೂ. ಮುಖಬೆಲೆಯ ರಿಯಲ್‌ಮಿ ಸ್ಮಾರ್ಟ್​ ವಾಚ್‌ ಸಹ ಬಿಡುಗಡೆ ಮಾಡಿದೆ. 3.5 ಸೆಂ.ಮೀ ಕಲರ್‌ ಟಚ್‌ಸ್ಕ್ರೀನ್‌, 14 ಸ್ಪೋರ್ಟ್ಸ್‌ ಮೋಡ್‌, ಹಾರ್ಟ್‌ ರೇಟ್‌ನ ರಕ್ತ–ಆಕ್ಸಿಜನ್‌ ಮಾನಿಟರ್‌, ಮ್ಯೂಸಿಕ್‌, ಕ್ಯಾಮೆರಾ ಕಂಟ್ರೋಲ್‌ ಮತ್ತು ಸ್ಮಾರ್ಟ್ ನೋಟಿಫಿಕೇಷನ್​ನಂತಹ ಫಿಚರ್​ಗಳನ್ನು ಒಳಗೊಂಡಿದೆ.

ಆಟೊ ಕನೆಕ್ಷನ್‌, 17 ಗಂಟೆಗಳ ಪ್ಲೇಬ್ಯಾಕ್‌ ಮತ್ತು ಇಂಟೆಲಿಜೆಂಟ್‌ ಟಚ್‌ ಸಾಮರ್ಥ್ಯದ ರಿಯಲ್‌ಮಿ ಬಡ್ಸ್‌ ಏರ್‌ ನಿಯೊ ಲಾಂಚ್​ ಮಾಡಿದ್ದು, ಇದರ ಬೆಲೆಯನ್ನು 2,999 ರೂ.ಗೆ ನಿಗದಿಪಡಿಸಿದೆ. ಇದರ ಜೊತೆಗೆ ರಿಯಲ್‌ಮಿ 10,000 ಎಂಎಎಚ್‌ ಪವರ್‌ ಬ್ಯಾಂಕ್‌ 2 ಪರಿಚಯಿಸಿದ್ದು, 999 ರೂ. ಎಂದು ಹೇಳಿದೆ. 18 ವ್ಯಾಟ್‌ ಟುವೇ ಚಾರ್ಜ್‌, ಯುಎಸ್‌ಬಿ ಎ ಹಾಗೂ ಸಿ ಪೋರ್ಟ್ಸ್‌ ಲಕ್ಷಣಗಳನ್ನು ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.