ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ನ ಸೂಚನೆಗಳಿಗೆ ಬದ್ಧವಾಗಿ ನಡೆದುಕೊಳ್ಳದ ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (ಎಸ್ಬಿಐ) ಆರ್ಬಿಐ ದಂಡ ವಿಧಿಸಿದೆ.
ಆದಾಯ ಗುರುತಿಸುವಿಕೆ ಮತ್ತು ಆಸ್ತಿ ವರ್ಗೀಕರಣ (ಐಆರ್ಎಸಿ) ಮಾನದಂಡ, ಚಾಲ್ತಿ ಖಾತೆಗಳ ತೆರೆಯುವ ಮತ್ತು ಅವುಗಳ ನಿರ್ವಹಣೆ, ಕೇಂದ್ರೀಯ ದತ್ತಾಂಶಕ್ಕೆ ಖಾತೆ ವಿವರಗಳ ವರದಿ ಸಲ್ಲಿಕೆ, ಮರುಪಾವತಿ ಮಾಡದ ಸಾಲಗಾರರ ಗುರುತಿಸುವಿಕೆ ಹಾಗೂ ವಂಚನೆಯ ರಿಸ್ಕ್ ನಿರ್ವಹಣೆ ಕುರಿತು ನಿಯಮ ಉಲ್ಲಂಘಿಸಿದ್ದಕ್ಕೆ 7 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಆರ್ಬಿಐ ತಿಳಿಸಿದೆ.
1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಅಡಿ ಆರ್ಬಿಐಗೆ ನೀಡಲಾಗಿರುವ ಅಧಿಕಾರ ಬಳಸಿಕೊಂಡು ಈ ದಂಡ ಪ್ರಯೋಗಿಸಿದೆ. ಈ ಕ್ರಮವು ನಿಯಂತ್ರಕ ಅನುಸರಣೆಯಲ್ಲಿನ ನ್ಯೂನತೆಗಳನ್ನು ಆಧರಿಸಿದೆ ಹಾಗೂ ಯಾವುದೇ ವಹಿವಾಟು ಅಥವಾ ಒಪ್ಪಂದದ ಮಾನ್ಯತೆಯ ಮೇಲೆ ಕ್ರಮತೆಗೆದುಕೊಂಡಿಲ್ಲ ಎಂದು ಆರ್ಬಿಐ ಸ್ಪಷ್ಟನೆ ನೀಡಿದೆ.