ETV Bharat / business

ಬ್ಯಾಂಕ್​ ಸಿಇಒ, ನಿರ್ದೇಶಕರ ವಯಸ್ಸಿನ ಮಿತಿ ಪ್ರಸ್ತಾಪಿಸಿದ RBI

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇತ್ತೀಚೆಗೆ ಬಿಡುಗಡೆ ಮಾಡಿದ ಚರ್ಚಾ ಪೇಪರ್​ನಲ್ಲಿ ಪ್ರವರ್ತಕ ಗುಂಪಿಗೆ ಸೇರಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ಸಿಇಒ) ಮತ್ತು ಸಂಪೂರ್ಣ ಸಮಯದ ನಿರ್ದೇಶಕರು (ಡಬ್ಲ್ಯುಟಿಡಿ) ಹತ್ತು ವರ್ಷಗಳ ಬಳಿಕ ವ್ಯವಸ್ಥಾಪಕ ನಾಯಕತ್ವವನ್ನು ವೃತ್ತಿಪರರಿಗೆ ವರ್ಗಾಯಿಸಬೇಕು ಎಂದು ಹೇಳಿದೆ.

Reserve Bank of India
ಭಾರತೀಯ ರಿಸರ್ವ್​ ಬ್ಯಾಂಕ್
author img

By

Published : Jun 12, 2020, 6:49 PM IST

ಮುಂಬೈ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಡಳಿತ ಸುಧಾರಣೆ ಭಾಗವಾಗಿ ಆರ್‌ಬಿಐ, ಬ್ಯಾಂಕ್​ಗಳ ಸಿಇಒಗಳಿಗೆ ಮತ್ತು ಪೂರ್ಣ ಪ್ರಮಾಣದ ನಿರ್ದೇಶಕರಿಗೆ 70 ವರ್ಷ ಹಾಗೂ ಪ್ರವರ್ತಕ ಗ್ರೂಪ್​ನವರಿಗೆ ಗರಿಷ್ಠ 10 ವರ್ಷಗಳ ಅವಧಿ ಪ್ರಸ್ತಾಪಿಸಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇತ್ತೀಚೆಗೆ ಬಿಡುಗಡೆ ಮಾಡಿದ ಚರ್ಚಾ ಪೇಪರ್​ನಲ್ಲಿ ಪ್ರವರ್ತಕ ಗುಂಪಿಗೆ ಸೇರಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ಸಿಇಒ) ಮತ್ತು ಸಂಪೂರ್ಣ ಸಮಯದ ನಿರ್ದೇಶಕರು (ಡಬ್ಲ್ಯುಟಿಡಿ) ಹತ್ತು ವರ್ಷಗಳ ಬಳಿಕ ವ್ಯವಸ್ಥಾಪಕ ನಾಯಕತ್ವವನ್ನು ವೃತ್ತಿಪರರಿಗೆ ವರ್ಗಾಯಿಸಬೇಕು ಎಂದು ಹೇಳಿದೆ.

ಬ್ಯಾಂಕ್​ಗಳ ಸಿಇಒ / ಡಬ್ಲ್ಯುಟಿಡಿಗಳಿಗೆ ಹೆಚ್ಚಿನ ವಯಸ್ಸಿನ ಮಿತಿ 70 ವರ್ಷ ಇರಲಿದೆ. ಇದನ್ನು ಮೀರಿ ಯಾರೂ ಪೋಸ್ಟ್‌ನಲ್ಲಿ ಮುಂದುವರಿಯಲು ಸಾಧ್ಯವಿಲ್ಲ. 70 ವರ್ಷಗಳ ಮಿತಿಯೊಳಗೆ ಮಂಡಳಿಯು ಸಿಇಒ / ಡಬ್ಲ್ಯುಟಿಡಿಗಳಿಗೆ ಸೂಚಿಸಬಹುದು ಎಂದು ಚರ್ಚಾ ಪೇಪರ್​ನಲ್ಲಿ ಸೂಚಿಸಿದ್ದು, 2020ರ ಜುಲೈ 15ರೊಳಗೆ ಆರ್‌ಬಿಐ ವಿವಿಧ ಷೇರ್​​ ಹೋಲ್ಡರ್​ಗಳಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ.

ಉತ್ತಮ ಆಡಳಿತ ಅಭ್ಯಾಸದ ಸಂಸ್ಕೃತಿಯನ್ನು ಪರಿಚಯಿಸಲು ಮತ್ತು ನಿರ್ವಹಣೆಯಿಂದ ಮಾಲೀಕತ್ವವನ್ನು ಬೇರ್ಪಡಿಸುವ ತತ್ವವನ್ನು ಅಳವಡಿಸಿಕೊಳ್ಳಲು ಡಬ್ಲ್ಯುಟಿಡಿ ಮತ್ತು ಸಿಇಒಗಳ ಅಧಿಕಾರಾವಧಿಯನ್ನು ಮಿತಿಗೊಳಿಸುವ ಇಂಗಿತ ವ್ಯಕ್ತಪಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.