ನವದೆಹಲಿ : ಭಾರತಕ್ಕೆ 1,000 ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸುತ್ತಿದೆ ಎಂದು ಏರೋಸ್ಪೇಸ್ ಮತ್ತು ರಕ್ಷಣಾ ದೈತ್ಯ ರೇಥಿಯಾನ್ ಟೆಕ್ನಾಲಜೀಸ್ ಕಾರ್ಪೊರೇಷನ್ ತಿಳಿಸಿದೆ.
ಪ್ರ್ಯಾಟ್ ಅಂಡ್ ವಿಟ್ನಿ ಹಾಗೂ ಕಾಲಿನ್ಸ್ ಏರೋಸ್ಪೇಸ್ ಮೂಲಕ ಕಂಪನಿಯು ಭಾರತದಲ್ಲಿ ಸುಮಾರು 5,000 ಜನರನ್ನು ನೇಮಿಸಿದೆ. ಕೆಲವು ಆಮ್ಲಜನಕ ಸಾಂದ್ರಕಗಳು ಈಗಾಗಲೇ ಭಾರತಕ್ಕೆ ಬರುತ್ತಿವೆ.
ಅಮೆರಿಕ-ಭಾರತದ ಜಂಟಿ ಪಾಲುದಾರಿಕೆ ವೇದಿಕೆ ಮತ್ತು ದೇಶಾದ್ಯಂತ ಸರ್ಕಾರದೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಮೂಲಕ ಇವು ವಿತರಣೆಯಾಗಿವೆ ಎಂದು ಏರೋಸ್ಪೇಸ್ ಮತ್ತು ಡಿಫೆನ್ಸ್ ಮೇಜರ್ ಮಾಹಿತಿ ನೀಡಿದೆ.
ಇಲ್ಲಿನ ನೌಕರರು ಹಾಗೂ ನಾಗರಿಕರು ಒಳಗೊಂಡಂತೆ ಅಗತ್ಯವಿರುವವರಿಗೆ ಈ ಜೀವ ರಕ್ಷಕ ಸಾಧನಗಳನ್ನು ವಿತರಿಸಲಾಗುವುದು. ಆರ್ಟಿಎಕ್ಸ್ ಭಾರತ ಚೇತರಿಸಿಕೊಳ್ಳುತ್ತಿದ್ದಂತೆ ಬೆಂಬಲಿಸುವ ಮಾರ್ಗಗಳನ್ನು ಅನ್ವೇಷಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದೆ.