ETV Bharat / business

ಸಂಕಷ್ಟದಲ್ಲಿ ವಾಹನೋದ್ಯಮ: ಪ್ರಧಾನಿಗೆ ರತನ್​ ಟಾಟಾ ವಾಣಿಜ್ಯಾತ್ಮಕ ಸಲಹೆ

author img

By

Published : Feb 7, 2020, 10:05 PM IST

ಆಟೋ ಉದ್ಯಮದಲ್ಲಿ ಬಳಸಲಾಗುವ ಪ್ರೊಪಲ್ಷನ್ ವ್ಯವಸ್ಥೆಯ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕು ಎಂದು ವಿಶ್ವದಾದ್ಯಂತ ಸರ್ಕಾರಗಳನ್ನು ಒತ್ತಾಯಿಸಿದರು. ಪ್ರಪಂಚದ ಸರ್ಕಾರಗಳು ಮತ್ತು ವಾಹನ ಉದ್ಯಮದವರು ಭವಿಷ್ಯದ ಕಾರುಗಳ ಮುಂದೂಡುವಿಕೆಯ ವ್ಯವಸ್ಥೆಯ ಬಗ್ಗೆ ಬಿಗುವಾದ ದೃಷ್ಟಿಕೋನವನ್ನು ತೆಗೆದುಕೊಳ್ಳಬಹುದು ಎಂದು ನಾನು ಭಾವಿಸುತ್ತೇನೆ ಎಂದು ರತನ್​ ಟಾಟಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

Ratan Tata
ರತನ್ ಟಾಟಾ

ನವದೆಹಲಿ: ಭಾರತೀಯ ವಾಹನೋದ್ಯಮ ವಲಯ ಮಂದಗತಿಯಲ್ಲಿ ಸಾಗುತ್ತಿದೆ. ಕ್ಷೀಣಿಸಿದ ಮಾರಾಟದ ಸಂಖ್ಯೆಗಳಿಂದಾಗಿ ಉದ್ಯಮದಲ್ಲಿ ದೀರ್ಘಕಾಲದ ಕಗ್ಗತ್ತಲು ಆವರಿಸಿದೆ. ನಿಧಾನಗತಿಯ ಬಳಕೆಯಿಂದಾಗಿ ವಾಹನಗಳ ಬೇಡಿಕೆಯನ್ನು ಪುನರುಜ್ಜೀವನಗೊಳಿಸಿಬೇಕಿದೆ. ಇಂತಹ ಸಂದರ್ಭದಲ್ಲಿ ಉದ್ಯಮಿ ದಿಗ್ಗಜ ರತನ್ ಟಾಟಾ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ವಾಹನೋದ್ಯಮ ಸಂಬಂಧ ಕೆಲವು ವಾಣಿಜ್ಯಾತ್ಮಕ ಸಲಹೆಗಳನ್ನು ನೀಡಿದ್ದಾರೆ.

'ಆಟೋ ಎಕ್ಸ್‌ಪೋ 2020' ದಹನಕಾರಿ ಎಂಜಿನ್‌ಗಳಿಂದ ಎಲೆಕ್ಟ್ರಿಕ್ ಎಂಜಿನ್‌ಗಳಿಗೆ ಟೆಕ್ಟೋನಿಕ್ ಪರಿವರ್ತನೆಗೆ ಸಾಕ್ಷಿಯಾಗಿದೆ. 'ಹಸಿರು' ಪರಿವರ್ತನೆಯು ಜಾಗತಿಕ ಹವಾಮಾನ ವೈಪರೀತ್ಯದ ಬೇಡಿಕೆಗಳು ಮತ್ತು ಬದಲಾಗುತ್ತಿರುವ ಗ್ರಾಹಕರ ಆದ್ಯತೆಗೆ ಸೇತುವೆಯಾಗಲಿದೆ. ಪರಿವರ್ತನೆಯ ಹೇರಿಕೆಯನ್ನು ಅನೇಕ ಉದ್ಯಮದ ಪ್ರಮುಖರು ಈ ವೇಳೆ ಪ್ರಶ್ನಿಸಿದ್ದರು.

ಭವಿಷ್ಯದ ವಾಹನೋದ್ಯಮದ ಚಲನಶೀಲತೆಯ ಕುರಿತು ಮಾತನಾಡಿದ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ, ಭವಿಷ್ಯದ ಕಾರುಗಳಿಗೆ ಪ್ರೊಪಲ್ಷನ್ ವ್ಯವಸ್ಥೆಗಳ ಬಗ್ಗೆ 'ಬಿಗುವಾದ ದೃಷ್ಟಿಕೋನ' ತೆಗೆದುಕೊಳ್ಳುವಂತೆ ವಾಹನ ಉದ್ಯಮ ಮತ್ತು ವಿಶ್ವದಾದ್ಯಂತ ಇರುವ ಸರ್ಕಾರಗಳನ್ನು ಕೇಳಿಕೊಂಡಿದ್ದಾರೆ. ಸುಗಮ ಪರಿವರ್ತನೆಗಾಗಿ ಯೋಜನೆಗಳನ್ನು ರೂಪಿಸುವಾಗ ಸರ್ಕಾರಗಳು ವಾಸ್ತವಿಕ ಅಂಶಗಳತ್ತ ಸಹ ಗಮನಹರಿಸಬೇಕು. ಇದರಲ್ಲಿ ದಕ್ಷ ದಹನಕಾರಿ ಎಂಜಿನ್​ಗಳು ಮತ್ತು ಮಿಶ್ರತಳಿಗಳು ಸಹ ಸೇರಿವೆ ಎಂದರು.

ದಹನಕಾರಿ ಎಂಜಿನ್‌ಗಳ ಮೇಲೆ ಎಲೆಕ್ಟ್ರಾನಿಕ್ ಎಂಜಿನ್​ಗಳನ್ನು​ ಬೆಂಬಲಿಸುವ ಕೊನೆಯ ಮೂರರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೀತಿಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. 'ಈ ವಿಷಯದ ಬಗ್ಗೆ ಯಾವುದೇ ಶಾಸನವನ್ನು ವಾಸ್ತವಕ್ಕೆ ಆಧಾರವಾಗಿ ಇರಿಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.

ಭಾರತದಲ್ಲಿ ಚಾರ್ಜಿಂಗ್ ಮೂಲಸೌಕರ್ಯಗಳು ಸೀಮಿತವಾಗಿದ್ದರಿಂದ ಎಲ್ಲ ಎಲೆಕ್ಟ್ರಾನಿಕ್​ ವಾಹನಗಳ ವಿಧಾನಕ್ಕೆ ಮಾರ್ಪಾಡುಗೊಳ್ಳುವುದು ಕಷ್ಟ. ಸರ್ವವ್ಯಾಪಿ ಚಾರ್ಜಿಂಗ್ ಮೂಲಸೌಕರ್ಯವಿಲ್ಲದೆ ಇಂತಹ ಬದಲಾವಣೆಗೆ ಹಿನ್ನೆಡೆ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆಟೋ ಉದ್ಯಮದಲ್ಲಿ ಬಳಸಲಾಗುವ ಪ್ರೊಪಲ್ಷನ್ ವ್ಯವಸ್ಥೆಯ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕು ಎಂದು ವಿಶ್ವದಾದ್ಯಂತ ಸರ್ಕಾರಗಳನ್ನು ಒತ್ತಾಯಿಸಿದರು. ಪ್ರಪಂಚದ ಸರ್ಕಾರಗಳು ಮತ್ತು ವಾಹನ ಉದ್ಯಮದವರು ಭವಿಷ್ಯದ ಕಾರುಗಳ ಮುಂದೂಡುವಿಕೆಯ ವ್ಯವಸ್ಥೆಯ ಬಗ್ಗೆ ಬಿಗುವಾದ ದೃಷ್ಟಿಕೋನವನ್ನು ತೆಗೆದುಕೊಳ್ಳಬಹುದು ಎಂದು ನಾನು ಭಾವಿಸುತ್ತೇನೆ ಎಂದು ಟಾಟಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.