ETV Bharat / business

ಬೆಂಗಳೂರಲ್ಲಿ ಬಾಡಿಗೆ ಬೈಕ್​ ಪಡೆದು ಚಾಲಕನ ಜತೆ 6 ಗಂಟೆ ತನಕ ನಗರ ಸುತ್ತಾಡಿ! - ರಾಪಿಡೊ ಬಾಡಿಗೆ

ನಗರದ ವಿವಿಧ ಭಾಗಗಳಲ್ಲಿ ಕೆಲಸ ಮಾಡುವವರ ಅನುಕೂಲಕ್ಕಾಗಿ ಅನೇಕ ಬಾರಿ ಬುಕ್ ಮಾಡಲು ಮತ್ತು ಎಲ್ಲಾ ಸಮಯದಲ್ಲೂ ವಾಹನವು ಬರುವವರೆಗೆ ಕಾಯುವುದನ್ನು ತಡೆಯಲು ಈ ಹೊಸ ನೀತಿ ಪರಿಚಯಿಸಿದ್ದೇವೆ ಎಂದು ರಾಪಿಡೋ ಘೋಷಿಸಿದೆ..

Rapido
Rapido
author img

By

Published : Feb 22, 2021, 8:37 PM IST

ಬೆಂಗಳೂರು : ದೇಶಾದ್ಯಂತ ಆನ್‌ಲೈನ್ ಬೈಕ್​ ಮತ್ತು ಟ್ಯಾಕ್ಸಿ ಸೇವಾ ಪೂರೈಕೆದಾರ ರಾಪಿಡೋ ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ಸೌಲಭ್ಯ ಬಿಡುಗಡೆ ಮಾಡಿದೆ.

ವಿವಿಧ ಸ್ಥಳಗಳಲ್ಲಿ ನಿಲ್ಲಿಸಿ ತಮ್ಮ ನಿತ್ಯದ ಕಾಯಕ ಕೈಗೊಳ್ಳುವವರಿಗೆ ‘ಮಲ್ಟಿಪಾಯಿಂಟ್ ಟ್ರಿಪ್’ ಸೌಲಭ್ಯ ಪ್ರಾರಂಭಿಸುವುದಾಗಿ ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸೇವೆಗಳು ಬೆಂಗಳೂರು ಸೇರಿ ದೆಹಲಿ, ಹೈದರಾಬಾದ್, ಚೆನ್ನೈ, ಕೋಲ್ಕತಾ ಮತ್ತು ಜೈಪುರದಲ್ಲಿ ಲಭ್ಯವಿರಲಿದೆ.

ಈ ಪ್ಯಾಕೇಜುಗಳು ಒಂದು, ಎರಡು, ಮೂರು, ನಾಲ್ಕು ಅಥವಾ ಆರು ಗಂಟೆಗಳ ಕಾಲ ಲಭ್ಯವಾಗಲಿವೆ. ಟ್ರಿಪ್ ಮುಗಿಯುವವರೆಗೂ ವಾಹನ ಓಡಿಸಲು ಕ್ಯಾಪ್ಟನ್ ಜತೆಗೆ ಇರುತ್ತಾನೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: ಕೊರೊನಾಗೆ ಮಕಾಡೆ ಮಲಗಿದ ಗೂಳಿ.. ಒಂದು ದಿನದ ತಲ್ಲಣಕ್ಕೆ 3.7 ಲಕ್ಷ ಕೋಟಿ ರೂ.ಮಾಯ!

ನಗರದ ವಿವಿಧ ಭಾಗಗಳಲ್ಲಿ ಕೆಲಸ ಮಾಡುವವರ ಅನುಕೂಲಕ್ಕಾಗಿ ಅನೇಕ ಬಾರಿ ಬುಕ್ ಮಾಡಲು ಮತ್ತು ಎಲ್ಲಾ ಸಮಯದಲ್ಲೂ ವಾಹನವು ಬರುವವರೆಗೆ ಕಾಯುವುದನ್ನು ತಡೆಯಲು ಈ ಹೊಸ ನೀತಿ ಪರಿಚಯಿಸಿದ್ದೇವೆ ಎಂದು ರಾಪಿಡೋ ಘೋಷಿಸಿದೆ.

ಕಳೆದ ಕೆಲವು ತಿಂಗಳಿಂದ ಈ ನೀತಿಯು ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸುತ್ತಿದೆ. ಶೀಘ್ರದಲ್ಲೇ ಈ ಸೌಲಭ್ಯವನ್ನು ದೇಶಾದ್ಯಂತ ನೂರಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಲಾಗುವುದು ಎಂದು ಕಂಪನಿಯ ಸಹ ಸಂಸ್ಥಾಪಕ ಅರವಿಂದ ಶಂಕ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.