ETV Bharat / business

ಗೂಗಲ್​ನಲ್ಲಿ ಚಾಟಿಂಗ್ ಮಾಹಿತಿ ಸೋರಿಕೆ.. ಹೊಸ ಪಾಲಿಸಿ ಬಗ್ಗೆ ವಾಟ್ಸ್ಆ್ಯಪ್ ಸ್ಪಷ್ಟೀಕರಣ ಹೀಗಿದೆ.. - WhatsApp private data leak

ವಾಟ್ಸ್ಆ್ಯಪ್ ತನ್ನ ಇತ್ತೀಚೆಗೆ ಪರಿಷ್ಕೃತ ಪಾಲಿಸಿಯ ಬದಲಾವಣೆಯು ಸ್ನೇಹಿತರು ಅಥವಾ ಕುಟುಂಬದೊಂದಿಗೆ ನಡೆಸಿದ್ದ ಸಂದೇಶಗಳ ಗೌಪ್ಯತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬದಲಾಗಿ, ಈ ಅಪ್‌ಡೇಟ್‌ನಲ್ಲಿ ವಾಟ್ಸ್ಆ್ಯಪ್‌ನಲ್ಲಿ ವ್ಯವಹಾರ ಸಂದೇಶ ಕಳುಹಿಸುವಲ್ಲಿ ಬದಲಾವಣೆ ಒಳಗೊಂಡಿದೆ ಎಂದು ಹೇಳಿದೆ..

WhatsApp
ವಾಟ್ಸಾಪ್
author img

By

Published : Jan 12, 2021, 4:37 PM IST

ನವದೆಹಲಿ : ವಾಟ್ಸ್ಆ್ಯಪ್ ಬಳಕೆದಾರರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಡೆಸಿದ್ದ ಖಾಸಗಿ ಸಂದೇಶಗಳನ್ನು ಸರ್ಚ್ ಇಂಜಿನ್​ಗಳಲ್ಲಿ ಸೋರಿಕೆ ಮಾಡಿದ್ದಾರೆ ಎಂಬ ಆರೋಪದ ನಡುವೆ ಫೇಸ್​ಬುಕ್​ ಒಡೆತನದ ಮೆಸೇಜಿಂಗ್ ಸೇವೆ ಆ್ಯಪ್​ ಮತ್ತೊಂದು ಸ್ಪಷ್ಟೀಕರಣ ನೀಡಿದೆ.

ವಾಟ್ಸ್ಆ್ಯಪ್ ತನ್ನ ಇತ್ತೀಚೆಗೆ ಪರಿಷ್ಕೃತ ಪಾಲಿಸಿಯ ಬದಲಾವಣೆಯು ಸ್ನೇಹಿತರು ಅಥವಾ ಕುಟುಂಬದೊಂದಿಗೆ ನಡೆಸಿದ್ದ ಸಂದೇಶಗಳ ಗೌಪ್ಯತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬದಲಾಗಿ, ಈ ಅಪ್‌ಡೇಟ್‌ನಲ್ಲಿ ವಾಟ್ಸ್ಆ್ಯಪ್‌ನಲ್ಲಿ ವ್ಯವಹಾರ ಸಂದೇಶ ಕಳುಹಿಸುವಲ್ಲಿ ಬದಲಾವಣೆ ಒಳಗೊಂಡಿದೆ ಎಂದು ಹೇಳಿದೆ.

ಟ್ವಿಟರ್​ನಲ್ಲಿ ವಾಟ್ಸ್ಆ್ಯಪ್​ ಹಂಚಿಕೊಂಡ ಸ್ಪಷ್ಟನೆ

  • ವಾಟ್ಸ್ಆ್ಯಪ್ ಆಗಲಿ ಅಥವಾ ಫೇಸ್​ಬುಕ್​ ಆಗಲಿ ನಿಮ್ಮ ಖಾಸಗಿ ಸಂದೇಶ ಅಥವಾ ಕರೆಗಳನ್ನು ಕೇಳಲು, ನೋಡಲು ಸಾಧ್ಯವಿಲ್ಲ
  • ಪ್ರತಿಯೊಬ್ಬರೂ ಸಂದೇಶ ಕಳುಹಿಸುವ ಅಥವಾ ಕರೆ ಮಾಡುವವರ ದಾಖಲೆಗಳನ್ನು ವಾಟ್ಸ್ಆ್ಯಪ್ ತನ್ನ ಬಳಿ ಇರಿಸಿಕೊಳ್ಳುತ್ತದೆ
  • ನೀವು ಹಂಚಿಕೊಂಡ ಸ್ಥಳವನ್ನು ನೋಡಲು ವಾಟ್ಸ್ಆ್ಯಪ್ ಮತ್ತು ಫೇಸ್‌ಬುಕ್‌ಗೂ ಸಾಧ್ಯವಿಲ್ಲ.
  • ವಾಟ್ಸ್ಆ್ಯಪ್ ನಿಮ್ಮ ಸಂಪರ್ಕಗಳನ್ನು ಫೇಸ್‌ಬುಕ್‌ ಜತೆಗೆ ಹಂಚಿಕೊಳ್ಳುವುದಿಲ್ಲ.
  • ವಾಟ್ಸ್ಆ್ಯಪ್ ಗ್ರೂಪ್​ಗಳು ಖಾಸಗಿಯಾಗಿ ಇರಲಿವೆ.
  • ನಿಮ್ಮ ಸಂದೇಶಗಳು ಕಣ್ಮರೆಯಾಗುವಂತೆ ನೀವು ಹೊಂದಿಕೆ ಮಾಡಿಕೊಳ್ಳಬಹುದು.
  • ನಿಮ್ಮ ಡೇಟಾವನ್ನು ನೀವು ಡೌನ್‌ಲೋಡ್ ಮಾಡಬಹುದು

ನಾವು ಈ ಡೇಟಾವನ್ನು ಫೇಸ್‌ಬುಕ್‌ನೊಂದಿಗೆ ಜಾಹೀರಾತುಗಳಿಗಾಗಿ ಹಂಚಿಕೊಳ್ಳುವುದಿಲ್ಲ. ಈ ಖಾಸಗಿ ಚಾಟ್‌ಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ. ಹೀಗಾಗಿ, ಸೇವಾ ಪೂರೈಕೆದಾರರು ಬಳಕೆದಾರರ ಯಾವುದೇ ಸಂಗತಿಗಳನ್ನು ನೋಡುವುದಿಲ್ಲ.

  • We want to address some rumors and be 100% clear we continue to protect your private messages with end-to-end encryption. pic.twitter.com/6qDnzQ98MP

    — WhatsApp (@WhatsApp) January 12, 2021 " class="align-text-top noRightClick twitterSection" data=" ">

ಹೆಚ್ಚುವರಿ ಗೌಪ್ಯತೆಗಾಗಿ ಬಳಕೆದಾರರು ಸಂದೇಶ ಸೆಟ್ಟಿಂಗ್‌ಗಳನ್ನು ಕಳುಹಿಸಿದ ನಂತರ ಚಾಟ್‌ಗಳಿಂದ ಕಣ್ಮರೆಯಾಗುವಂತೆ ಬದಲಾಯಿಸಲು ಸೂಚಿಸಿದ್ದಾರೆ. ಇದು ಹೇಗೆ ಸಾಧಿಸುವುದು ಎಂಬುದರ ಕುರಿತು ಸಂಪೂರ್ಣ ಹಂತಗಳನ್ನು ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಕೋವಿಶೀಲ್ಡ್​ ಬೆನ್ನಲ್ಲೇ ಭಾರತ್​ ಬಯೋಟೆಕ್​​ನ 'ಕೋವ್ಯಾಕ್ಸಿನ್'​ ಸಾಗಾಣೆಗೆ ಸಿದ್ಧ!

ಕ್ರಾಸ್ ಪ್ಲಾಟ್‌ಫಾರ್ಮ್ ಮೆಸೇಜಿಂಗ್ ಮತ್ತು ವಾಯ್ಸ್ ಓವರ್ ಐಪಿ ಸೇವಾ ಪೂರೈಕೆದಾರರು ನೀಡುವ 2ನೇ ಸ್ಪಷ್ಟೀಕರಣ ಇದಾಗಿದೆ. ಮೂಲ ಕಂಪನಿ ಫೇಸ್‌ಬುಕ್‌ನೊಂದಿಗೆ ಡೇಟಾ ಹಂಚಿಕೊಳ್ಳುವ ತನ್ನ ಗೌಪ್ಯತೆ ನೀತಿ ಪರಿಷ್ಕರಿಸಿದೆ. ಹೊಸ ಬಳಕೆಯ ನಿಯಮಗಳನ್ನು ಬಳಕೆದಾರರು ಒಪ್ಪಿಕೊಳ್ಳುವುದು ಕಡ್ಡಾಯವಾಗಿದೆ. ಫೆಬ್ರವರಿಯಲ್ಲಿ ನೀತಿ ಜಾರಿಗೆ ಬಂದಾಗ ಬಳಕೆದಾರರ ಖಾತೆ ಡಿಲೀಟ್ ಆಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.