ETV Bharat / business

ಡಿಹೆಚ್‌ಎಫ್‌ಎಲ್‌ನಿಂದ ಪಂಜಾಬ್ ನ್ಯಾಷನಲ್​ ಬ್ಯಾಂಕ್​ಗೆ ₹ 3,688 ಕೋಟಿ ಸಾಲ ವಂಚನೆ! - DHFL

ಕಳೆದ ನವೆಂಬರ್‌ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ), ಡಿಹೆಚ್‌ಎಫ್‌ಎಲ್‌ ಕಂಪನಿಯ ನಿರ್ದೇಶಕರ ಮಂಡಳಿಯನ್ನು ರದ್ದುಗೊಳಿಸಿ ನಿರ್ವಾಹಕರನ್ನು ನೇಮಿಸಿತು. ಇದಲ್ಲದೆ ಮುಂಬೈನ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಪೀಠವು ಆರ್‌ಬಿಐನ ಅರ್ಜಿಯ ಬಳಿಕ ಕಂಪನಿಯ ವಿರುದ್ಧ ಸಿಐಆರ್‌ಪಿಯನ್ನು ಡಿಸೆಂಬರ್‌ನಲ್ಲಿ ಪ್ರಾರಂಭಿಸಿತ್ತು..

PNB
ಪಿಎನ್​ಬಿ
author img

By

Published : Jul 10, 2020, 3:27 PM IST

ಮುಂಬೈ : ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್​ನ (ಡಿಎಚ್‌ಎಫ್‌ಎಲ್) ಎನ್‌ಪಿಎ ಖಾತೆಯಲ್ಲಿ 3,688.58 ಕೋಟಿ ರೂ. ಸಾಲ ವಂಚನೆ ಎಸಗಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವರದಿ ಮಾಡಿದೆ. ಬ್ಯಾಂಕ್ ಈಗಾಗಲೇ 1,245.58 ಕೋಟಿ ರೂ. ಒದಗಿಸಿದೆ ಎಂದು ನಿಯಂತ್ರಕ ಫೈಲಿಂಗ್​ನಲ್ಲಿ ಹೇಳಿದೆ.

ಕಂಪನಿಯ ಖಾತೆಗಳಲ್ಲಿ (ಡಿಎಚ್‌ಎಫ್‌ಎಲ್) 3,688.58 ಕೋಟಿ ರೂ. ವಂಚನೆಯನ್ನು ಆರ್‌ಬಿಐಗೆ ವರದಿ ಮಾಡಲಾಗುತ್ತಿದೆ. ನಿಗದಿತ ಮಾನದಂಡಗಳ ಪ್ರಕಾರ ಬ್ಯಾಂಕ್ ಈಗಾಗಲೇ 1,246.58 ಕೋಟಿ ರೂ. ಒದಗಿಸಿದೆ. ಇತರೆ ಬ್ಯಾಂಕ್​ಗಳು ಈಗಾಗಲೇ ಡಿಹೆಚ್​ಎಫ್​ಎಲ್​ನ ವಂಚನೆ ಬಗ್ಗೆ ವರದಿ ಮಾಡಿವೆ.

ಕಳೆದ ನವೆಂಬರ್‌ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಂಪನಿಯ ನಿರ್ದೇಶಕರ ಮಂಡಳಿಯನ್ನು ರದ್ದುಗೊಳಿಸಿ ನಿರ್ವಾಹಕರನ್ನು ನೇಮಿಸಿತು. ಇದಲ್ಲದೆ ಮುಂಬೈನ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಪೀಠವು ಆರ್‌ಬಿಐನ ಅರ್ಜಿಯ ಬಳಿಕ ಕಂಪನಿಯ ವಿರುದ್ಧ ಸಿಐಆರ್‌ಪಿಯನ್ನು ಡಿಸೆಂಬರ್‌ನಲ್ಲಿ ಪ್ರಾರಂಭಿಸಿತ್ತು.

ಕಂಪನಿಯು ಸುಮಾರು 97,000 ಕೋಟಿ ರೂ. ಸಾಲ ಹೊಂದಿದೆ. ಒಟ್ಟು ಬ್ಯಾಂಕ್ ಸಾಲಗಳಿಂದ 31,000 ಕೋಟಿ ರೂ. ಬ್ಯಾಂಕ್​ ಸಾಲ ಸೈಫನ್​ (ಕಾನೂನುಬಾಹಿರವಾಗಿ ವರ್ಗ) ಮಾಡಲಾಗಿದೆ ಎಂಬ ಆರೋಪವಿದೆ. ಇದರ ಪ್ರವರ್ತಕರಾದ ಕಪಿಲ್ ವಾಧವನ್ ಮತ್ತು ಧೀರಜ್ ವಾಧವನ್ ಅವರನ್ನು ಕೇಂದ್ರೀಯ ತನಿಖಾ ತಂಡ ಏಪ್ರಿಲ್‌ನಲ್ಲಿ ಬಂಧಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.