ಮುಂಬೈ: ಕೋವಿಡ್-19 ಬಿಕ್ಕಟ್ಟಿನಿಂದ ಹಣಕಾಸು ವಲಯವು ತೆವಳುತ್ತಾ ಸಾಗುತ್ತಿದೆ ಮತ್ತು ಬಂಡವಾಳ ಸಂರಕ್ಷಿಸುವ ಮಾರ್ಗಗಳತ್ತ ಉದ್ಯಮಿಗಳು ಎದುರು ನೋಡುತ್ತಿರುವ ಸಮಯದಲ್ಲಿ ದೇಶದ ಎರಡನೇ ಅತಿದೊಡ್ಡ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ತನ್ನ ಉನ್ನತ ಅಧಿಕಾರಿಗಳಿಗಾಗಿ ಮೂರು ಆಡಿ ಕಾರುಗಳನ್ನು ಖರೀದಿಸಿದೆ.
ಮೂಲಗಳ ಪ್ರಕಾರ, ಕಳೆದ ತಿಂಗಳು ಸುಮಾರು 1.34 ಕೋಟಿ ರೂ. ಮೌಲ್ಯದ ಉನ್ನತ ಮಟ್ಟದ ಐಷಾರಾಮಿ ಕಾರುಗಳ ಖರೀದಿಯ ನಿರ್ಧಾರವನ್ನು ಪಿಎನ್‌ಬಿ ತೆಗೆದುಕೊಂಡಿತು. ಕೊರೊನಾ ವೈರಸ್ ನಂತರದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮತ್ತು ಆರ್ಥಿಕ ವಲಯದ ಮೇಲೆ ಅದರ ಪರಿಣಾಮದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.
ಈ ಖರೀದಿಯ ವಾರ್ಷಿಕ ವೆಚ್ಚ ಸುಮಾರು 20 ಲಕ್ಷ ರೂ. ಆಗಲಿದೆ. ಈ ಐಷಾರಾಮಿ ಕಾರುಗಳನ್ನು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಇಬ್ಬರು ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕರು ಬಳಸುತ್ತಾರೆ.ಎಂಡಿ ಜೊತೆಗೆ ನಾಲ್ವರು ಕಾರ್ಯನಿರ್ವಾಹಕ ನಿರ್ದೇಶಕರಿಗೆ ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಡಳಿಯ ಅನುಮೋದನೆಯ ಮಿತಿಯೊಳಗೆ ಈ ಕಾರುಗಳನ್ನು ಖರೀದಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿಶೇಷವೆಂದರೆ, ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ಮತ್ತು ಕ್ಯಾಬಿನೆಟ್ ಮಂತ್ರಿಗಳು ಸಹ ಮಾರುತಿ ಸುಜುಕಿ ಸಿಯಾಜ್ ಬಳಸುತ್ತಾರೆ. ಪಿಎನ್‌ಬಿ ಖರೀದಿಸಿದ ಜರ್ಮನ್ ಆಡಿಸ್‌ಗಿಂತ ಕಡಿಮೆ ವೆಚ್ಚದ್ದಾಗಿದೆ.