ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಝೈಡಸ್ ಬಯೋಟೆಕ್ ಪಾರ್ಕ್‌ನಲ್ಲಿ ಕೆಲ ಸಮಯ ಕಳೆದದ್ದು, ಆರೋಗ್ಯದ ಅಗತ್ಯತೆಗಳನ್ನು ಪೂರೈಸುವ ಕಂಪನಿಯ ಪ್ರಯತ್ನವನ್ನು ಮತ್ತೊಂದು ಎತ್ತರಕ್ಕೆ ಕೊಡೊಯ್ಯಲು ಪ್ರೇರೇಪಿಸಿತು ಎಂದು ಔಷಧ ಸಂಸ್ಥೆ ಝೈಡಸ್ ಕ್ಯಾಡಿಲಾ ಹೇಳಿದೆ.
ಅಹಮದಾಬಾದ್ ಬಳಿಯ ಝೈಡಸ್ ಕ್ಯಾಡಿಲಾ ಔಷಧಿ ಉತ್ಪಾದನಾ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಅಭಿವೃದ್ಧಿಪಡಿಸಲಾಗುತ್ತಿರುವ ಕೊರೊನಾ ವೈರಸ್ ಲಸಿಕೆಯ ಪ್ರಗತಿಯ ಕಾರ್ಯಗಳನ್ನು ಈ ವೇಳೆ ಪರಿಶೀಲಿಸಿದರು.
ಭಾರತ್ ಬಯೋಟೆಕ್ ಭೇಟಿ ನಂತರ ಪುಣೆಗೆ ಪ್ರಯಾಣ ಬೆಳೆಸಿದ ಮೋದಿ
ಪ್ರಧಾನಿ ಅವರ ಸ್ಫೂರ್ತಿದಾಯಕ ಉಪಸ್ಥಿತಿಯು ಅನಿಯಮಿತವಾದ ಆರೋಗ್ಯ ಅಗತ್ಯತೆಗಳನ್ನು ಪೂರೈಸುವ ನಮ್ಮ ಸಂಶೋಧನೆ ಹಾಗೂ ಅನ್ವೇಷಣೆಯನ್ನು ಮತ್ತೊಂದು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಲು ಪ್ರೇರೇಪಿಸುತ್ತದೆ ಎಂದು ಝೈಡಸ್ ಕ್ಯಾಡಿಲಾ ನಿಯಂತ್ರಕ ಫೈಲಿಂಗ್ನಲ್ಲಿ ಹೇಳಿದೆ.
25 ಸಾವಿರ ಝೈಡಾನ್ಗಳನ್ನು (ಸಿಬ್ಬಂದಿ) ಒಳಗೊಂಡ ನಮ್ಮ ಕುಟುಂಬವು 'ಆತ್ಮನಿರ್ಭರ ಭಾರತ' ಅಭಿಯಾನಕ್ಕೆ ಬದ್ಧವಾಗಿದೆ. ಕೋವಿಡ್-19 ವಿರುದ್ಧ ಹೋರಾಡಲು ರಾಷ್ಟ್ರಕ್ಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ, ಚಿಕಿತ್ಸೆ ಮತ್ತು ರೋಗ ನಿವಾರಕ ಔಷಧಿ ನೀಡಲಿದೆ ಎಂದು ಹೇಳಿದೆ.
ಕೋವಿಡ್ ಲಸಿಕೆ ಮೆಂಬರ್ನ 'ಝೈಕೋವ್-ಡಿ'ಯ ಮೊದಲನೇ ಹಂತದ ಕ್ಲಿನಿಕಲ್ ಪ್ರಯೋಗ ಮುಗಿದಿದ್ದು, ಈಗ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿದೆ.