ನವದೆಹಲಿ: ಕೊರೊನಾ ವೈರಸ್ ಲಸಿಕೆ ವಿತರಣೆಗೆ ಸಂಬಂಧಿತ ವ್ಯವಸ್ಥೆಯ ಬಗ್ಗೆ ಭಾರತ ಉತ್ತಮವಾಗಿ ಸಿದ್ಧವಾಗಿದೆ. ಸೋಂಕು ಪೀಡಿತರು ಕೂಡ ಲಸಿಕೆ ತೆಗೆದುಕೊಳ್ಳಬೇಕು ಎಂದು ಭಾರತ್ ಬಯೋಟೆಕ್ ಅಧ್ಯಕ್ಷ & ಎಂಡಿ ಕೃಷ್ಣ ಎಲ್ಲಾ ಹೇಳಿದ್ದಾರೆ.
ಉದ್ಯಮಿ ಒಕ್ಕೂಟ ಸಿಐಐ ಆಯೋಜಿಸಿದ 'ಪೂರ್ವ ಮತ್ತು ನಂತರದ ವ್ಯಾಕ್ಸಿನೇಷನ್ ಯುಗದಲ್ಲಿ ಇಮ್ಯುನೊಜೆನಿಸಿಟಿ ಮತ್ತು ಸುರಕ್ಷತೆಯಲ್ಲಿ ಸೆರೋ ಕಣ್ಗಾವಲಿನ ಪ್ರಾಮುಖ್ಯತೆ' ಕುರಿತು ಮಾತನಾಡಿದ ಅವರು, ಸೋಂಕಿತ ಜನರರು ಕೂಡ ಲಸಿಕೆಯನ್ನು ಸ್ವೀಕರಿಸಬೇಕು. ಪರಿಣಾಮಕಾರಿ ಪ್ರಯೋಗಗಳಿಗಾಗಿ ಕಂಪನಿಯು ದೇಶಾದ್ಯಂತ 24 ಕೇಂದ್ರಗಳಲ್ಲಿ ಕಾರ್ಯೋನ್ಮುಖವಾಗಿದೆ. ಇದರಿಂದ ಲಸಿಕೆ ಪರಿಣಾಮದ ಫಲಿತಾಂಶಗಳನ್ನು ಉತ್ತಮವಾಗಿ ಸೆರೆಹಿಡಿಯಲು ಶ್ರೇಣಿ I, ಶ್ರೇಣಿ II ಮತ್ತು ಶ್ರೇಣಿ III ನಗರಗಳಿವೆ ಎಂದರು.
ಭಾರತವು ಲಸಿಕೆಗಳ ವಿತರಣೆಗೆ ಉತ್ತಮವಾಗಿ ಸಿದ್ಧವಾಗಿದೆ. ಭಾರತೀಯ ರೋಗನಿರೋಧಕ ವ್ಯವಸ್ಥೆಯು ತುಂಬಾ ದೃಢವಾಗಿದೆ ಎಂದು ಹೇಳಿದರು.
ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಮಾತನಾಡಿ, ನಾವು ಸಾಂಕ್ರಾಮಿಕ ಸನ್ನದ್ಧತೆಯ ಪ್ರಜ್ಞೆಯನ್ನು ಹೊಂದಿದ್ದೇವೆ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಒಂದು ಏಕೀಕೃತ ಪ್ರಯತ್ನದ ಅಗತ್ಯ ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಪ್ರತಿಜನಕ ಮತ್ತು ಪ್ರತಿಕಾಯ ಪರೀಕ್ಷೆ ಎರಡನ್ನೂ ಆಧರಿಸಿ ಬಹುದೂರ ಸಾಗುವುದಕ್ಕೆ ನೆರವಾಗಲಿದೆ ಎಂದರು.
ಇದನ್ನೂ ಓದಿ: ಸ್ಟಾರ್ಟ್ಅಪ್, ಐಟಿ ಕಂಪನಿಗಳಿಗೆ ಗುಡ್ ನ್ಯೂಸ್: ಲಸಿಕೆ ವಿತರಣೆಗೆ ಡಿಜಿಟಲ್ ಜಾಲ ಬಲಪಡಿಸಲು ಕೇಂದ್ರದ ಆಹ್ವಾನ