ನವದೆಹಲಿ: ವಹಿವಾಟು ಶುಲ್ಕದಿಂದ ವ್ಯಾಪಾರಿಗಳು ಎದುರಿಸುತ್ತಿರುವ ನಷ್ಟವನ್ನು ಸರಿದೂಗಿಸಲು ಡಿಜಿಟಲ್ ಪಾವತಿ ಸಂಸ್ಥೆ ಪೇಟಿಎಂ, ಕಿರಾಣಿ ಅಂಗಡಿಗಳಿಗೆ 100 ಕೋಟಿ ರೂ. ಲಾಯಲ್ಟಿ ಸ್ಕೀಮ್ ಘೋಷಿಸಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಪೇಟಿಎಂ ಆಲ್ ಇನ್ ಒನ್ ಕ್ಯೂಆರ್ ಮೂಲಕ ಡಿಜಿಟಲ್ ಪಾವತಿಗಳ ಬೆಳವಣಿಗೆಯನ್ನು ವೇಗಗೊಳಿಸಲು ಕಿರಾಣಿ ಮಳಿಗೆಗಳನ್ನು ಉತ್ತೇಜಿಸಲು, ಹಣಕಾಸು ಸೇವೆಗಳು ಮತ್ತು ವಿವಿಧ ಮಾರ್ಕೆಟಿಂಗ್ ಪರಿಕರಗಳಿಗೆ ಪ್ರವೇಶವನ್ನು ನೀಡಲು ಹೂಡಿಕೆ ಮಾಡಲಾಗುವುದು ಎಂದು ಪೇಟಿಎಂ ಹೇಳಿದೆ.
ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಬಳಸುವ ವಿವಿಧ ಹಣಕಾಸು ಮತ್ತು ವ್ಯವಹಾರ ಸೇವೆಗಳನ್ನು ಒಳಗೊಂಡಿರುವ ವ್ಯವಹಾರದ ಪ್ರಯೋಜನಗಳನ್ನು ದ್ವಿಗುಣಗೊಳಿಸುವ ಮೂಲಕ ನಾವು ಈ ಶೇ 1ರಷ್ಟು ಎಂಡಿಆರ್ ಅನ್ನು ಹಿಂದಿರುಗಿಸುತ್ತೇವೆ ಎಂದು ಪೇಟಿಎಂ ಹಿರಿಯ ಉಪಾಧ್ಯಕ್ಷ ಸೌರಭ್ ಶರ್ಮಾ ಹೇಳಿದ್ದಾರೆ.