ನವದೆಹಲಿ: ಪೇಟಿಎಂ ಬಳಕೆದಾರರು ಕ್ರೆಡಿಟ್ ಕಾರ್ಡ್ ಬಳಸಿ ತಮ್ಮ ಇ-ವ್ಯಾಲೆಟ್‌ಗೆ ಹಣ ವರ್ಗಾಯಿಸಿದರೆ ಶೇ 2ರಷ್ಟು ಶುಲ್ಕ ಪಾವತಿಸಬೇಕಾಗುತ್ತದೆ.
ಬಳಕೆದಾರರು ತಮ್ಮ ಇ - ವ್ಯಾಲೆಟ್‌ಗಳಲ್ಲಿ 10,000 ರೂ.ಗಿಂತ ಅಧಿಕ ಹಣವನ್ನು ಕ್ರೆಡಿಟ್ ಕಾರ್ಡ್ ಮೂಲಕ ಒಂದು ತಿಂಗಳಲ್ಲಿ ವರ್ಗಾವಣೆ ಮಾಡಿದರೆ ಶೇ 2ರಷ್ಟು ಶುಲ್ಕ ಪಾವತಿಸಬೇಕಾಗಿತ್ತು.
ವಾಲೆಟ್ಗೆ ಕ್ರೆಡಿಟ್ ಕಾರ್ಡ್ನಿಂದ ಹಣ ವರ್ಗಾವಣೆ ಮಾಡಿದರೆ ಶೇ 2ರಷ್ಟು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಶೇ 2ರಷ್ಟು ಶುಲ್ಕದಲ್ಲಿ ಜಿಎಸ್ಟಿ ಸಹ ಸೇರಿರುತ್ತದೆ ಎಂದು ಪೇಟಿಎಂ ಸ್ಪಷ್ಟಪಡಿಸಿದೆ. ನಿನ್ನೆಯಿಂದ ಹೆಚ್ಚುವರಿ ಶುಲ್ಕ ಕಡಿತ ಆಗುತ್ತಿರುವುದರ ಬಗ್ಗೆ ಟ್ವಿಟರ್ನಲ್ಲಿ ಹಲವರು ಪ್ರಶ್ನೆ ಎತ್ತಿದ್ದರು. ಈಗ ಪೇಟೆಎಂ ಆ ಪ್ರಶ್ನೆಗಳಿಗೆ ತೆರೆ ಎಳೆದಿದೆ.
ಈ ಮೊದಲು ಜನವರಿ ತಿಂಗಳಿನಿಂದ ಈ ನಿಯಮ ಜಾರಿಯಲ್ಲಿ ಇತ್ತು. ಆದರೆ, ಒಂದು ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣ ವರ್ಗಾವಣೆಗೆ ಮಾತ್ರ ಈ ನಿಯಮ ಅನ್ವಯ ಆಗುತ್ತಿತ್ತು. ಆದರೆ, ಅಕ್ಟೋಬರ್ 15ರಿಂದ ಹೊಸ ನಿಯಮ ಜಾರಿಗೆ ಬಂದಿದ್ದು, ಇದರ ಅನ್ವಯ ಹಣದ ಮೊತ್ತ ಎಷ್ಟೇ ಇದ್ದರೂ ಶೇ.2ರಷ್ಟು ಹೆಚ್ಚುವರಿ ಶುಲ್ಕವನ್ನು ಬಳಕೆದಾರರು ತೆರಲೇಬೇಕಾಗಿದೆ.