ನವದೆಹಲಿ : ಪಾವತಿ ಅಪ್ಲಿಕೇಷನ್ ಪೇಟಿಎಂ ಮತ್ತು ಪೇಟಿಎಂ ಫಸ್ಟ್ ಗೇಮ್ ಆ್ಯಪ್ಗಳನ್ನು ಗೂಗಲ್ ಪ್ಲೇಸ್ಟೋರ್ನಿಂದ ತೆಗೆದು ಹಾಕಿದ ಕೆಲ ಗಂಟೆಗಳ ಬಳಿಕ ಮತ್ತೆ ಪ್ಲೇಸ್ಟೋರ್ಗೆ ಲಗ್ಗೆ ಇಟ್ಟಿವೆ. ಅನಿಯಂತ್ರಿತ ಜೂಜಿನ ಅಪ್ಲಿಕೇಷನ್ ಎಂದು ಪರಿಗಣಿಸಿ ಪೇಟಿಎಂ ಆ್ಯಪ್ ಪ್ಲೇಸ್ಟೋರ್ನಿಂದ ತೆಗೆದು ಹಾಕಲಾಗಿದೆ ಎಂದು ಗೂಗಲ್ ಬ್ಲಾಗ್ ಪೋಸ್ಟ್ನಲ್ಲಿ ಬರೆದುಕೊಂಡಿತ್ತು.
ಗೂಗಲ್ ಪ್ಲೇ ಸ್ಟೋರ್ ಪೇಟಿಎಂ ಆ್ಯಪ್‌ನ ತೆಗೆದು ಹಾಕಿದ್ದರಿಂದ ಕೆಲ ಗಂಟೆಗಳ ಕಾಲ ಲಭ್ಯವಾಗದ ಪೇಟಿಎಂ ಆ್ಯಪ್ ಗೂಗಲ್ ಪ್ಲೇಸ್ಟೋರ್ನಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.
-
Update: And we're back! 🥳
— Paytm (@Paytm) September 18, 2020 " class="align-text-top noRightClick twitterSection" data="
">Update: And we're back! 🥳
— Paytm (@Paytm) September 18, 2020Update: And we're back! 🥳
— Paytm (@Paytm) September 18, 2020
ಪೇಟಿಎಂ ಆ್ಯಪ್ ಗೂಗಲ್ ಪ್ಲೇಸ್ಟೋರ್ನಿಂದ ತೆಗೆದು ಹಾಕಿದ ಕೆಲವೇ ಕ್ಷಣದಲ್ಲಿ ಟ್ವೀಟಿಸಿದ ಪೇಟಿಎಂ ಶೀಘ್ರದಲ್ಲೇ ಗೂಗಲ್ ಪ್ಲೇಸ್ಟೋರ್ಗೆ ಮರಳುವುದಾಗಿ ಹೇಳಿತ್ತು. ಇದೀಗ ನಾವು ಅಪ್‌ಡೇಟ್ ಆಗಿ ಮರಳಿದ್ದೇವೆ ಎಂದು ಟ್ವೀಟ್ ಮಾಡಿದೆ.