ನವದೆಹಲಿ: ಜಾಗತಿಕ ಡಿಜಿಟಲ್ ಪಾವತಿ ವೇದಿಕೆ ಪೇಪಾಲ್ ಭಾರತದಲ್ಲಿನ ತನ್ನ ದೇಶೀಯ ಪಾವತಿ ಸೇವೆಗಳನ್ನು ಏಪ್ರಿಲ್ 1ರಿಂದ ಮುಕ್ತಾಯಗೊಳಿಸಲು ನಿರ್ಧರಿಸಿದೆ.
ಏಪ್ರಿಲ್ 1ರಿಂದ ಕಂಪನಿಯು ಭಾರತೀಯ ವ್ಯವಹಾರಗಳಿಗೆ ಅಂತಾರಾಷ್ಟ್ರೀಯ ಮಾರಾಟವನ್ನು ಶಕ್ತಗೊಳಿಸುವತ್ತ ಕೇಂದ್ರೀಕರಿಸಲಾಗುತ್ತದೆ. ಇದರರ್ಥ ನಾವು ಇನ್ನು ಮುಂದೆ ಏಪ್ರಿಲ್ 1ರಿಂದ ಭಾರತದೊಳಗೆ ದೇಶೀಯ ಪಾವತಿ ಸೇವೆ ನೀಡುವುದಿಲ್ಲ ಎಂದು ಪೇಪಾಲ್ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಹಣಕಾಸಿನ ತಕರಾರು ಇತ್ಯರ್ಥಕ್ಕೆ 'ಒಂದು ರಾಷ್ಟ್ರ ಒಂದು ತನಿಖಾಧಿಕಾರಿ' ಸ್ಕೀಮ್: ಆರ್ಬಿಐ ಗವರ್ನರ್
ಕಂಪನಿಯು ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಮೂರು ಕೇಂದ್ರಗಳನ್ನು ಹೊಂದಿದ್ದು, ಇವು ಅಮೆರಿಕ ಹೊರಗಿನ ಅತಿದೊಡ್ಡ ಕೇಂದ್ರಗಳಾಗಿವೆ. ಕಂಪನಿಯು ಭಾರತದಲ್ಲಿ ತನ್ನ ವ್ಯವಹಾರ ಅಭಿವೃದ್ಧಿ ತಂಡಗಳನ್ನು ಸಹ ಹೊಂದಿದೆ.
-
2020 was the strongest year in @PayPal’s history. We achieved record growth in net new active accounts, volume, revenue, operating income, earnings and free cash flow. $PYPL https://t.co/6jeqf1f9Ul pic.twitter.com/WSdA7QMDzt
— PayPal News (@PayPalNews) February 3, 2021 " class="align-text-top noRightClick twitterSection" data="
">2020 was the strongest year in @PayPal’s history. We achieved record growth in net new active accounts, volume, revenue, operating income, earnings and free cash flow. $PYPL https://t.co/6jeqf1f9Ul pic.twitter.com/WSdA7QMDzt
— PayPal News (@PayPalNews) February 3, 20212020 was the strongest year in @PayPal’s history. We achieved record growth in net new active accounts, volume, revenue, operating income, earnings and free cash flow. $PYPL https://t.co/6jeqf1f9Ul pic.twitter.com/WSdA7QMDzt
— PayPal News (@PayPalNews) February 3, 2021
ವಿಶ್ವದಾದ್ಯಂತ ಸುಮಾರು 350 ಮಿಲಿಯನ್ ಪೇಪಾಲ್ ಗ್ರಾಹಕರನ್ನು ತಲುಪಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮಾರಾಟ ಹೆಚ್ಚಿಸಲು ಮತ್ತು ಭಾರತೀಯ ಆರ್ಥಿಕತೆಯು ಬೆಳವಣಿಗೆಗೆ ನೆರವಾಗಲು ನಮ್ಮ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುವುದಾಗಿ ಪೇಪಾಲ್ ಹೇಳಿದೆ.