ETV Bharat / business

ಐಡಿಬಿಐ ಬ್ಯಾಂಕ್ ಗ್ರಾಹಕರಿಗೆ ವರ್ಷಕ್ಕೆ 20 ಚೆಕ್ ಮಾತ್ರ ಉಚಿತ - ಐಡಿಬಿಐ ಬ್ಯಾಂಕ್ ಚೆಕ್ ಬುಕ್

ಗ್ರಾಹಕರಿಗೆ ಈ ಮೊದಲು ವರ್ಷಕ್ಕೆ ಬ್ಯಾಂಕ್ 60 ಚೆಕ್‌ಗಳನ್ನು ಉಚಿತವಾಗಿ ನೀಡಿತ್ತು. ಆ ನಂತರದ ವರ್ಷಗಳಲ್ಲಿ 50 ಚೆಕ್‌ಗಳಿಗೆ ತಗ್ಗಿಸಿತ್ತು. ನಂತರ ಒಬ್ಬರಿಗೆ 5 ರೂ. ಈ ಹೆಚ್ಚಿಸಿದೆ. ‘ಸಬ್​ಕಾ ಸೇವಿಂಗ್ಸ್ ಅಕೌಂಟ್’ ಗ್ರಾಹಕರಿಗೆ ಇದು ಅನ್ವಯಿಸುವುದಿಲ್ಲ. ವಾರ್ಷಿಕವಾಗಿ ಅನಿಯಮಿತ ಚೆಕ್ ಸ್ವೀಕರಿಸಬಹುದು ಎಂದು ಐಡಿಬಿಐ ಬ್ಯಾಂಕ್ ಹೇಳಿದೆ.

IDBI Bank
IDBI Bank
author img

By

Published : Jun 12, 2021, 10:27 AM IST

ನವದೆಹಲಿ: ಐಡಿಬಿಐ ಬ್ಯಾಂಕ್ ಜುಲೈ 1ರಿಂದ ವಿವಿಧ ಸೇವೆಗಳ ಸುಂಕ ಪರಿಷ್ಕರಿಸಿದೆ. ಗ್ರಾಹಕರಿಗೆ ವರ್ಷಕ್ಕೆ ಕೇವಲ 20 ಉಚಿತ ಚೆಕ್‌ಗಳನ್ನು ಮಾತ್ರ ಉಚಿತವಾಗಿ ನೀಡಲಾಗುತ್ತದೆ. ನಂತರ ಪ್ರತಿ ಚೆಕ್‌ಗೆ 5 ರೂ. ವಿಧಿಸಲಿದೆ.

ಗ್ರಾಹಕರಿಗೆ ಈ ಮೊದಲು ವರ್ಷಕ್ಕೆ ಬ್ಯಾಂಕ್ 60 ಚೆಕ್‌ಗಳನ್ನು ಉಚಿತವಾಗಿ ನೀಡಿತ್ತು. ಆ ನಂತರದ ವರ್ಷಗಳಲ್ಲಿ 50 ಚೆಕ್‌ಗಳಿಗೆ ತಗ್ಗಿಸಿತ್ತು. ನಂತರ ಒಬ್ಬರಿಗೆ 5 ರೂ. ಈ ಹೆಚ್ಚಿಸಿದೆ. ‘ಸಬ್​ಕಾ ಸೇವಿಂಗ್ಸ್ ಅಕೌಂಟ್’ ಗ್ರಾಹಕರಿಗೆ ಇದು ಅನ್ವಯಿಸುವುದಿಲ್ಲ. ವಾರ್ಷಿಕವಾಗಿ ಅನಿಯಮಿತ ಚೆಕ್ ಸ್ವೀಕರಿಸಬಹುದು ಎಂದು ಐಡಿಬಿಐ ಬ್ಯಾಂಕ್ ಹೇಳಿದೆ.

ನಗದು (ಹೋಮ್​ ಮತ್ತು ನಾನ್​ಹೋಮ್​) ಠೇವಣಿ ಇಡುವುದಕ್ಕಾಗಿ ಅರೆ ನಗರ ಮತ್ತು ಗ್ರಾಮೀಣ ಶಾಖೆಗಳಿಗೆ ತಿಂಗಳಿಗೆ ಉಚಿತ ಸೌಲಭ್ಯಗಳ ಸಂಖ್ಯೆಯನ್ನು ವಿವಿಧ ಉಳಿತಾಯ ಖಾತೆಗಳಿಗಾಗಿ ಕ್ರಮವಾಗಿ ಈಗ ಅಸ್ತಿತ್ವದಲ್ಲಿರುವ 7 ಮತ್ತು 10ರಿಂದ ತಲಾ 5ಕ್ಕೆ ಇಳಿಸಿದೆ.

ಓದಿ: ಸರ್ಕಾರಿ ಕಚೇರಿ, ಸಚಿವಾಲಯಗಳ ಅನಗತ್ಯ ವೆಚ್ಚಗಳಿಗೆ ಬ್ರೇಕ್​: ಶೇ. 20ರಷ್ಟು ಖರ್ಚು ಕಟ್

ಸೂಪರ್ ಉಳಿತಾಯ ಮತ್ತು ಖಾತೆಗಳಿಗಾಗಿ ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಉಚಿತ ವಹಿವಾಟು ಕ್ರಮವಾಗಿ 10 ಮತ್ತು 12ರಂತೆ ತಲಾ 8 ಆಗಿರುತ್ತದೆ. ಜುಬಿಲೀಪ್ಲಸ್ ಹಿರಿಯ ನಾಗರಿಕ ಖಾತೆದಾರರಿಗೆ ಮಾಸಿಕ ಸರಾಸರಿ ಬಾಕಿ (ಎಂಎಬಿ) 10,000 ರೂ.ಗಿಂತ ಕಡಿಮೆಯಿದ್ದರೆ ಲಾಕರ್ ಬಾಡಿಗೆಗೆ ಯಾವುದೇ ರಿಯಾಯಿತಿ ಸಿಗುವುದಿಲ್ಲ.

ಗ್ರಾಹಕರು 12 ತಿಂಗಳಿಗೊಮ್ಮೆ 10,000-24,999 ರೂ.ಗಳ ಬಾಕಿ ಶೇ. 10ರಷ್ಟು ಮತ್ತು 25 ಸಾವಿರ ರೂ.ಗೆ ಶೇ. 15ರಷ್ಟು ಮತ್ತು ಎಂಎಬಿಗಿಂತ ಹೆಚ್ಚಿನ ರಿಯಾಯಿತಿ ಪಡೆಯುತ್ತಾರೆ.

ಪ್ರಸ್ತುತ, ನಾಲ್ಕು ತ್ರೈಮಾಸಿಕಗಳಲ್ಲಿ 5,000 ರೂ. ಎಕ್ಯೂಬಿ (ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್) ಆಗಿ ನಿರ್ವಹಿಸಿದರೆ ಬ್ಯಾಂಕ್ ಲಾಕರ್ ಬಾಡಿಗೆಗೆ ಶೇ. 25ರಷ್ಟು ರಿಯಾಯಿತಿ ನೀಡುತ್ತದೆ. ಅದೇ ಪರಿಷ್ಕೃತ ಶುಲ್ಕಗಳು ಲಾಕರ್ ಬಾಡಿಗೆಗೆ ಸೂಪರ್‌ಶಕ್ತಿ ಮಹಿಳಾ ಖಾತೆಗೆ ಅನ್ವಯವಾಗುತ್ತವೆ. ಎ ಮತ್ತು ಬಿ ಗಾತ್ರದ ಲಾಕರ್‌ಗಳಲ್ಲಿ ಮಾತ್ರ ರಿಯಾಯಿತಿ ನೀಡಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.