ನವದೆಹಲಿ: ಪೇಟಿಎಂ ಪೇಮೆಂಟ್ಸ್ ವಹಿವಾಟುಗಳನ್ನು ಯೆಸ್ ಬ್ಯಾಂಕ್ ಖಾತೆಗಳಿಗೆ ನಿರ್ಬಂಧಿಸಲಾಗಿದೆ ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಹೇಳಿದೆ.
ಯುಪಿಐ ಪ್ಲಾಟ್‌ಫಾರ್ಮ್ ಮೂಲಕ ಯೆಸ್ ಬ್ಯಾಂಕ್ ಖಾತೆದಾರರು ನಡೆಸುವ ನಗದು ವರ್ಗಾವಣೆಯ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಶತಮಾನಗಳಷ್ಟು ಹಳೆಯದಾದ ಪುರಿಯ ಜಗನ್ನಾಥ ದೇವಾಲಯದ ಪುರೋಹಿತರು ಯೆಸ್ ಬ್ಯಾಂಕ್ ಮೇಲೆ ಆರ್ಬಿಐನ ನಿರ್ಬಂಧದಿಂದ ಆತಂಕಕ್ಕೊಳಗಾಗಿದ್ದಾರೆ. ದೇವಾಲಯದ ಪುರೋಹಿತರು 545 ಕೋಟಿ ರೂ. ದೇವರ ಹೆಸರಿನಲ್ಲಿ ಯೆಸ್ ಬ್ಯಾಂಕ್ನಲ್ಲಿ ಠೇವಣಿ ಇರಿಸಿದ್ದಾರೆ. ಆರ್ಬಿಐ ಗರಿಷ್ಠ ನಗದು ಮಿತಿ ₹ 50,000 ಮಾತ್ರ ನಿಗದಿಪಡಿಸಿದೆ. ಮುಂದಿನ ಆದೇಶದವರೆಗೆ ಯಾವುದೇ ಬ್ಯಾಂಕಿಂಗ್ ಕಾರ್ಯಾಚರಣೆ ನಡೆಸದಂತೆ ಆಡಳಿತ ಮಂಡಳಿಗೆ ನಿರ್ದೇಶನ ನೀಡಿದೆ.