ನವದೆಹಲಿ/ ಜ್ಯೂರಿಚ್: ತೆರಿಗೆ ವಂಚಕರ ಹಣ ಕೂಡಿಡುವ ಸ್ವರ್ಗವೆಂದು ಕರೆಯಲಾಗುವ ಸ್ವಿಸ್ ಬ್ಯಾಂಕ್‌ನಲ್ಲಿ ವಾರಸುದಾರರೇ (ಸುಪ್ತ ಖಾತೆ) ಇಲ್ಲದ 2,600 ಖಾತೆಗಳಿವೆ.
ಇದರಲ್ಲಿ ಭಾರತೀಯರಿಗೆ ಸೇರಿರುವ ಸುಮಾರು ಒಂದು ಡಜನ್ ಸುಪ್ತ ಖಾತೆಗಳಿದ್ದು, ಯಾವುದೇ ವಾರಸುದಾರರು ತನ್ನದು ಎಂದು ಹೇಳಿಕೊಂಡು ಮುಂದೆ ಬಂದಿಲ್ಲ. ಈ ಖಾತೆಗಳಲ್ಲಿರುವ ಹಣ ಸ್ವಿಡ್ಜ್ರ್ಲೆಂಡ್ ಸರ್ಕಾರಕ್ಕೆ ವರ್ಗಾಯಿಸುವಲ್ಲಿ ತೊಡಕು ಎದುರಾಗಿದೆ.
ಸ್ವಿಸ್ ಸರ್ಕಾರ ಸುಪ್ತ ಖಾತೆಗಳ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು 2015ರಲ್ಲಿ ಆರಂಭಿಸಿತ್ತು. ಹಕ್ಕುದಾರರಿಗೆ ಆ ನಿಧಿ ಪಡೆಯಲು ಅಗತ್ಯವಾದ ಪುರಾವೆ ಸಲ್ಲಿಸುವ ಅವಕಾಶವನ್ನು ಕಲ್ಪಿಸಿತ್ತು.
ಸುಪ್ತ ಖಾತೆಗಳ ಪೈಕಿ ಬ್ರಿಟಿಷ್ ಆಡಳಿತ ಸಂದರ್ಭದಲ್ಲಿ ಭಾರತೀಯ ನಿವಾಸಿಗರೊಂದಿಗೆ ಸಂಪರ್ಕ ಹೊಂದಿದ ಕೆಲವು ಖಾತೆಗಳು ಸೇರಿ ಒಟ್ಟು ಹತ್ತು ಖಾತೆಗಳಿವೆ. ಸ್ವಿಸ್ ಅಧಿಕಾರಿಗಳಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ, ಕಳೆದ 6 ವರ್ಷಗಳಲ್ಲಿ ಭಾರತದೋಮಗೆ ಸಂಪರ್ಕ ಹೊಂದಿದ ಒಂದೇ ಒಂದು ಸುಪ್ತ ಖಾತೆಯನ್ನು ಯಶಸ್ವಿಯಾಗಿ ಹೇಳಿಕೊಳ್ಳಲು ಆಗಲಿಲ್ಲ. ಸರ್ಕಾರ ನೀಡಿದ ಗಡುವು ಮುಂದಿನ ತಿಂಗಳು ಮುಕ್ತಾಯವಾಗಲಿದೆ.
2015ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ 2,600 ಸುಪ್ತ ಖಾತೆಗಳು ಸಾರ್ವಜನಿಕವಾಗಿ ಬಹಿರಂಗ ಪಡಿಸಲಾಯಿತು. ಇವುಗಳಲ್ಲಿ ಸುಮಾರು 45 ದಶಲಕ್ಷ ಸ್ವಿಸ್ ಫ್ರಾಂಕ್ (300 ಕೋಟಿ ರೂ. ಅಧಿಕ) ಠೇವಣಿ ಇದೆ. ಸ್ವಿಸ್ ಬ್ಯಾಂಕಿಂಗ್ ತನ್ನ ಕಾನೂನಿ ಅನ್ವಯ ಪ್ರತಿ ವರ್ಷ ಸುಪ್ತ ಖಾತೆಗಳ ಬಗ್ಗೆ ಸಾರ್ವಜನಿಕವಾಗಿ ಹಂಚಿಕೊಳ್ಳುತ್ತಿದೆ. ಇತ್ತೀಚಿನ ಪಟ್ಟಿಯಲ್ಲಿ ಸುಪ್ತ ಖಾತೆ ಸಮಖ್ಯೆ ಸುಮಾರು 3,500 ಎಂದು ಹೇಳಿದೆ.