ETV Bharat / business

ತೀವ್ರ ಟೀಕೆ, ವಿರೋಧದ ಬಳಿಕ ವಾಟ್ಸ್​ಆ್ಯಪ್​​ ಹೊಸ ಬದಲಾವಣೆ ವಾಪಸ್​ - ವಾಟ್ಸಾಪ್ ಹೊಸ ನಿಯಮ

ವಾಟ್ಸ್​ಆ್ಯಪ್​ ತನ್ನ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯಲ್ಲಿನ ನವೀಕರಣದ ಕುರಿತು ಬಳಕೆದಾರರಿಗೆ ಅಪ್ಲಿಕೇಶನ್‌ನಲ್ಲಿನ ಅಧಿಸೂಚನೆಗಳನ್ನು ಹೊರತರಲು ಪ್ರಾರಂಭಿಸಿತ್ತು. ವಾಟ್ಸ್​ಆ್ಯಪ್​ ಸೇವೆ ಬಳಸುವುದನ್ನು ಮುಂದುವರಿಸಲು ಬಳಕೆದಾರರು 2021ರ ಫೆಬ್ರವರಿ 8ರೊಳಗೆ ಹೊಸ ನಿಯಮಗಳು ಮತ್ತು ನೀತಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಹೇಳಿತ್ತು.

WhatsApp
ವಾಟ್ಸಾಪ್​
author img

By

Published : Jan 9, 2021, 7:43 PM IST

ನವದೆಹಲಿ: ಫೇಸ್‌ಬುಕ್ ಒಡೆತನದ ವಾಟ್ಸ್​ಆ್ಯಪ್​ ತನ್ನ ಇತ್ತೀಚಿನ ಅಪ್ಡೇಟ್​​ಗೆ ಜಾಗತಿಕವಾಗಿ ಬಹುಸಂಖ್ಯೆಯ ಬಳಕೆದಾರರಿಂದ ಟೀಕೆಗಳು ವ್ಯಕ್ತವಾಗಿದ್ದರಿಂದ ಸಾಮಾಜಿಕ ಮಾಧ್ಯಮ ದೈತ್ಯದೊಂದಿಗೆ ತನ್ನ ಡೇಟಾ ಹಂಚಿಕೆ ಪದ್ಧತಿ ಇಲ್ಲ ಎಂದು ಹೇಳಿದೆ.

ವಾಟ್ಸ್​ಆ್ಯಪ್​ ತನ್ನ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯಲ್ಲಿನ ನವೀಕರಣದ ಕುರಿತು ಬಳಕೆದಾರರಿಗೆ ಅಪ್ಲಿಕೇಶನ್‌ನಲ್ಲಿನ ಅಧಿಸೂಚನೆಗಳನ್ನು ಹೊರತರಲು ಪ್ರಾರಂಭಿಸಿತ್ತು. ವಾಟ್ಸ್​ಆ್ಯಪ್ ಸೇವೆ ಬಳಸುವುದನ್ನು ಮುಂದುವರಿಸಲು ಬಳಕೆದಾರರು 2021ರ ಫೆಬ್ರವರಿ 8ರೊಳಗೆ ಹೊಸ ನಿಯಮಗಳು ಮತ್ತು ನೀತಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಹೇಳಿತ್ತು.

ವಾಟ್ಸ್​ಆ್ಯಪ್​​ ಬಳಕೆದಾರರ ಮಾಹಿತಿ ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಆರೋಪಿಸುವ ಮೂಲಕ ಅಂತರ್ಜಾಲದಲ್ಲಿ ಸಂಭಾಷಣೆ ಮತ್ತು ಮೇಮ್‌ಗಳ ವ್ಯಾಪಕವಾಗಿ ಹರಿದಾಡಿದವು. ಇದೇ ಅವಧಿಯಲ್ಲಿ ಸಿಗ್ನಲ್ ಮತ್ತು ಟೆಲಿಗ್ರಾಮ್‌ನಂತಹ ಪ್ರತಿಸ್ಪರ್ಧಿ ಪ್ಲಾಟ್‌ಫಾರ್ಮ್‌ ಡೌನ್‌ಲೋಡ್‌ ಪ್ರಮಾಣ ಏರಿಕೆ ಕಾಣುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 2021-22ರ ಕೇಂದ್ರ ಬಜೆಟ್ : ವಾಯುಯಾನ ಉದ್ಯಮಕ್ಕೆ ತೆರಿಗೆ ಕಡಿತದ ಸುಳಿವು

ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಕೂಡ ಈ ಸಂಭಾಷಣೆಯಲ್ಲಿ ಸೇರಿಕೊಂಡು ಜನರು ವಾಟ್ಸ್​ಆ್ಯಪ್​ನಿಂದ ಹೊರಹೋಗುವಂತೆ ಕೇಳಿಕೊಂಡರು. ಟ್ವೀಟ್‌ಗಳ ಸರಣಿಯಲ್ಲಿ ವಾಟ್ಸ್​ಆ್ಯಪ್​ನ ಹೆಡ್ ವಿಲ್ ಕ್ಯಾಥ್‌ಕಾರ್ಟ್ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ಕಂಪನಿಯು ತನ್ನ ನೀತಿಯನ್ನು ಪಾರದರ್ಶಕವಾಗಿರಿಸಲಿದೆ. ನಮಗೆ ಸ್ಪಷ್ಟವಾಗಿರುವುದು ಮುಖ್ಯ, ಈ ನವೀಕರಣವು ವ್ಯವಹಾರ ಸಂವಹನವನ್ನು ವಿವರಿಸುತ್ತದೆ ಮತ್ತು ಫೇಸ್‌ಬುಕ್‌ನೊಂದಿಗೆ ವಾಟ್ಸ್​ಆ್ಯಪ್‌ನ ಡೇಟಾ ಹಂಚಿಕೆ ಅಭ್ಯಾಸಗಳನ್ನು ಬದಲಾಯಿಸುವುದಿಲ್ಲ ಎಂದು ಹೇಳಿದರು.

ಎಂಡ್-ಟು-ಎಂಡ್ ಎನ್‌ಕ್ರಿಪ್ಶನೊಂದಿಗೆ (ಇ 2 ಇ) ಖಾಸಗಿ ಚಾಟ್‌ ಅಥವಾ ಕರೆಗಳನ್ನು ನೋಡಲು ಸಾಧ್ಯವಿಲ್ಲ. ಇದು ಫೇಸ್‌ಬುಕ್‌ಗು ಕೂಡ ಬಳಕೆದಾರರ ಮಾಹಿತಿ ವಿಕ್ಷೀಸಲು ಸಾಧ್ಯವಾಗುವುದಿಲ್ಲ. ಕಂಪನಿಯು ಇ 2 ಇಗೆ ಬದ್ಧವಾಗಿದೆ ಎಂದು ಕ್ಯಾಥ್‌ಕಾರ್ಟ್ ಒತ್ತಿಹೇಳಿದ್ದಾರೆ.

ನಾವು ಇತರರೊಂದಿಗೆ ಗೌಪ್ಯತೆ ಕುರಿತು ಸ್ಪರ್ಧೆಯಲ್ಲಿದ್ದೇವೆ. ಅದು ಜಗತ್ತಿಗೆ ತುಂಬಾ ಒಳ್ಳೆಯದು. ಜನರು ಹೇಗೆ ಸಂವಹನ ನಡೆಸುತ್ತಾರೆ ಎಂಬುದರ ಬಗ್ಗೆ ಆಯ್ಕೆಗಳನ್ನು ಹೊಂದಿರಬೇಕು. ಅವರ ಚಾಟ್‌ಗಳನ್ನು ಬೇರೆ ಯಾರೂ ನೋಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.