ಮುಂಬೈ: ಅಮೆರಿಕದ ಟೌನ್ ಕಂಟ್ರಿ ನಿಯತಕಾಲಿಕದ ಕೋವಿಡ್ ಸೋಂಕು ಕಾಲದಲ್ಲಿ ಮಾಡಿರುವ ವಿಶ್ವದ ಪ್ರಮುಖ ಲೋಕೋಪಕಾರಿ ಸೇವಗಳ ಪಟ್ಟಿಯಲ್ಲಿ ರಿಲಯನ್ಸ್ ಫೌಂಡೇಷನ್ ಅಧಕ್ಷೆ ನೀತಾ ಅಂಬಾನಿ ಸ್ಥಾನ ಪಡೆದಿದ್ದಾರೆ.
ಯುಎಸ್ ಟೌನ್ ಮತ್ತು ಕಂಟ್ರಿ ಮ್ಯಾಗಜೀನ್ ಪ್ರಕಟಿಸಿರುವ 2020ರ ಉನ್ನತ ಲೋಕೋಪಕಾರಿಗಳ ಪಟ್ಟಿಯಲ್ಲಿ ಟಿಮ್ ಕುಕ್, ಓಪ್ರಾ ವಿನ್ಫ್ರೇ, ಲಾರೆನ್ ಪೊವೆಲ್ ಜಾಬ್ಸ್, ಲಾಡರ್ ಫ್ಯಾಮಿಲಿ, ಡೊನಾಟೆಲ್ಲಾ ವರ್ಸೇಸ್, ಮೈಕೆಲ್ ಬ್ಲೂಮ್ಬರ್ಗ್, ಲಿಯೊನಾರ್ಡೊ ಡಿ ಕ್ಯಾಪ್ರಿಯೋ ಅವರೂ ಸ್ಥಾನ ಪಡೆದಿದ್ದಾರೆ.
ಸಾಂಕ್ರಾಮಿಕ ರೋಗದ ಪ್ರಸ್ತುತ ಸಂದರ್ಭದಲ್ಲಿ ಈ ಪಟ್ಟಿಯಲ್ಲಿ ಇರುವ ಬಹುತೇಕರು ತ್ವರಿತವಾಗಿ ಸ್ಪಂದಿಸಿದ್ದಾರೆ. ಐತಿಹಾಸಿಕ ವಿಪತ್ತಿನ ವೇಳೆಯಲ್ಲಿ ಇವರೆಲ್ಲರೂ ಜೀವಗಳನ್ನು ಉಳಿಸಲು ಶ್ರಮಿಸುತ್ತಿದ್ದಾರೆ. ಜೀವ ರಕ್ಷಣೆಯ ಭರವಸೆ ಉಳಿಸಿಕೊಂಡಿದ್ದಾರೆ ಎಂದು ನಿಯತಕಾಲಿಕೆ ಶ್ಲಾಘಿಸಿದೆ.
ರಿಲಯನ್ಸ್ ಫೌಂಡೇಶನ್ ಸ್ಥಾಪಕರಾದ ನೀತಾ ಅಂಬಾನಿ ಕೋವಿಡ್ ಬಿಕ್ಕಟ್ಟಿನ ವೇಳೆ ಲಕ್ಷಾಂತರ ಕಾರ್ಮಿಕರು ಮತ್ತು ಬಡವರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಸೋಂಕು ತಡೆಗಟ್ಟುವ ಮಾಸ್ಕ್ಗಳನ್ನು ವಿತರಿಸಿದ್ದಾರೆ. ಭಾರತದ ಪ್ರಥಮ ಕೋವಿಡ್-19 ಆಸ್ಪತ್ರೆ ಸ್ಥಾಪಿಸಿದ್ದಾರೆ. ರೋಗಿಗಳು ಮತ್ತು ತುರ್ತು ನಿಧಿಗಾಗಿ 72 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ ಎಂದು ನಿಯತಕಾಲಿಕೆ ಹೇಳಿದೆ.