ನವದೆಹಲಿ: 'ಡೈರೆಕ್ಟ್' ಎಂಬ ಚಂದಾದಾರಿಕೆ ಆಧಾರಿತ ಚಾನಲ್ ಮೂಲಕ ಫ್ರಾನ್ಸ್‌ನಲ್ಲಿ ದೂರದರ್ಶನ ಕ್ಷೇತ್ರಕ್ಕೆ ನೆಟ್‌ಫ್ಲಿಕ್ಸ್ ಪಾದಾರ್ಪಣೆ ಮಾಡಲು ಸಿದ್ಧವಾಗಿದೆ.
ಸಾಂಪ್ರದಾಯಿಕ ಟಿವಿ ಪರದೆಯತ್ತ ಫ್ರಾನ್ಸ್ ಹೊರಳುತ್ತಿದ್ದು, ಒಟಿಟಿ ಮೂಲಕ ಮಿನಿ ಸ್ಕ್ರೀನ್ನಲ್ಲಿ ಪ್ರಾಬಲ್ಯ ಸಾಧಿಸಿ ದೂರದರ್ಶನದತ್ತ ದೃಷ್ಟಿ ನೆಟ್ಟಿದೆ.
ಕೆಲ ವರದಿಗಳ ಪ್ರಕಾರ, ಅಂತಾರಾಷ್ಟ್ರೀಯ, ಫ್ರಾನ್ಸ್ ಮತ್ತು ಅಮೆರಿಕ ಚಲನಚಿತ್ರಗಳು ಹಾಗೂ ಟಿವಿ ಶೋಗಳನ್ನು ಪ್ರಸಾರ ಮಾಡುತ್ತದೆ ಎಂದು ಹೇಳಲಾಗುತ್ತಿದೆ.
ನೆಟ್‌ಫ್ಲಿಕ್ಸ್ ಹಲವು ಆಯ್ಕೆಗಳ ವಿಷಯ ಒದಗಿಸುತ್ತದೆ. ಅದರಲ್ಲಿ ಯಾವುದಾದರು ಒಂದನ್ನು ಆರಿಸುವುದಕ್ಕೆ ವೀಕ್ಷಕರು ಹೆಣಗಾಡುತ್ತಿದ್ದಾರೆ. ಇಂತಹ ಗೊಂದಲದಿಂದ ಬಳಕೆದಾರರನ್ನು ತೊಡೆದುಹಾಕಲು ನೆಟ್‌ಫ್ಲಿಕ್ಸ್ ತನ್ನ ಹೊಸ ವೈಶಿಷ್ಟ್ಯ ಪರೀಕ್ಷೆ ವಿಧಾನ ಬಳಸಲಿದೆ ಎಂದು ಮಾಧ್ಯಮ ಒಂದಕ್ಕೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಟೆಸ್ಟ್ ಚಾನೆಲ್ ನವೆಂಬರ್ 5ರಂದು ಸಣ್ಣ ಪ್ರಮಾಣದಲ್ಲಿ ಶುರುವಾಗಿದೆ. ಡಿಸೆಂಬರ್ ಆರಂಭದಲ್ಲಿ ಫ್ರಾನ್ಸ್‌ನಲ್ಲಿ ಹೆಚ್ಚು ವ್ಯಾಪಕವಾಗಿ ಲಭ್ಯವಾಗಲಿದೆ ಎಂದು ನೆಟ್‌ಫ್ಲಿಕ್ಸ್ ತಿಳಿಸಿದೆ.