ನವದೆಹಲಿ : ಭಾರತದಲ್ಲಿ ತಯಾರಿಸಿದ ಕೊರೊನಾ ಲಸಿಕೆ ಕೋವ್ಯಾಕ್ಸಿನ್ನ ತುರ್ತು ಬಳಕೆಗೆ ನೇಪಾಳ ರಾಷ್ಟ್ರೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದಿಸಿದೆ.
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಈವರೆಗೆ ಮೂರು ದೇಶಗಳಲ್ಲಿ ಅನುಮೋದಿಸಲಾಗಿದೆ. ಕೊರೊನಾ ನಿರೋಧಕತೆಯ ಮೇಲೆ ಶೇ.81ರಷ್ಟು ಪರಿಣಾಮಕಾರಿತ್ವ ಹೊಂದಿರುವ ಈ ಲಸಿಕೆಯನ್ನು ತುರ್ತು ಬಳಕೆಯಡಿ ಕೇಂದ್ರ ಸರ್ಕಾರವು ಜನವರಿಯಲ್ಲಿ ಅಂಗೀಕರಿಸಿತ್ತು. ಈ ತಿಂಗಳ ಆರಂಭದಲ್ಲಿ ಜಿಂಬಾಬ್ವೆ ಸರ್ಕಾರವು ಕೋವ್ಯಾಕ್ಸಿನ್ ಲಸಿಕೆ ಬಳಕೆಗೆ ಹಸಿರು ನಿಶಾನೆ ನೀಡಿತು.
ಇದನ್ನೂ ಓದಿ: ಭಾರತದಲ್ಲಿ 'ವಾಕ್ ಸ್ವಾತಂತ್ರ್ಯ'ಕ್ಕೆ ತೀವ್ರ ಹೊಡೆತ ಬಿದ್ದಿದೆ: RBI ಮಾಜಿ ಗವರ್ನರ್ ರಾಜನ್ ಗುಡುಗು
ಆಕ್ಸ್‌ಫರ್ಡ್-ಆಸ್ಟ್ರೊಜೆನಿಕಾ ಅಭಿವೃದ್ಧಿ ಪಡಿಸಿದ ಚೀನಾದ ಸೈನೊಫಾರ್ಮ್‌ನ ಕೋವಿಶೀಲ್ಡ್ ಅಭಿವೃದ್ಧಿಪಡಿಸಿದ ಬಿಬಿಐಬಿಪಿ-ಸಿಒಆರ್ವಿ ಲಸಿಕೆ ಬಳಕೆಯನ್ನೂ ನೇಪಾಳ ಅನುಮೋದಿಸಿದೆ. ನೇಪಾಳದಲ್ಲಿ ಈವರೆಗೆ 2,75,750 ಕೊರೊನಾ ಸೋಂಕು ಕಂಡು ಬಂದಿದ್ದು, ಅವರಲ್ಲಿ 3,016 ಮಂದಿ ಮೃತಪಟ್ಟಿದ್ದಾರೆ.