ನವದೆಹಲಿ: ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ), ಯುಪಿಐ ವಹಿವಾಟು ನಡೆಸುವಾಗ ಎದುರಾದ ಸಮಸ್ಯೆ ಮತ್ತು ಗ್ರಾಹಕರ ದೂರುಗಳನ್ನು ಪರಿಹರಿಸಲು 'ಬೀಮ್' ಅಪ್ಲಿಕೇಶನ್‌ನಲ್ಲಿ 'ಯುಪಿಐ-ಹೆಲ್ಪ್' ಆಯ್ಕೆ ಪರಿಚಯಿಸಿದೆ.
-
NPCI Media Press Statement: UPI, 15th March 2021. UPI-Help for Digital Payments goes live on BHIM UPI: https://t.co/K91YkjYUeR pic.twitter.com/ZrIn4iHTT1
— NPCI (@NPCI_NPCI) March 15, 2021 " class="align-text-top noRightClick twitterSection" data="
">NPCI Media Press Statement: UPI, 15th March 2021. UPI-Help for Digital Payments goes live on BHIM UPI: https://t.co/K91YkjYUeR pic.twitter.com/ZrIn4iHTT1
— NPCI (@NPCI_NPCI) March 15, 2021NPCI Media Press Statement: UPI, 15th March 2021. UPI-Help for Digital Payments goes live on BHIM UPI: https://t.co/K91YkjYUeR pic.twitter.com/ZrIn4iHTT1
— NPCI (@NPCI_NPCI) March 15, 2021
ಯುಪಿಐ ಹೆಲ್ಪ್ ಯುಪಿಐ ವ್ಯಾಪಾರಿಗಳಿಗೆ ಬೀಮ್ ಯುಪಿಐ ಅಪ್ಲಿಕೇಷನ್ ಬಳಸಿ ಆನ್‌ಲೈನ್‌ನಲ್ಲಿ ದೂರುಗಳನ್ನು ನೋಂದಾಯಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಯುಪಿಐ-ಹೆಲ್ಪ್ ಒಂದು ವಹಿವಾಟಿನಿಂದ ಉಂಟಾಗುವ ಸಮಸ್ಯೆಗಳಿಗೆ ಸಂಬಂಧಿಸಿದ ಆನ್‌ಲೈನ್ ದೂರುಗಳನ್ನು ಪರಿಹರಿಸುತ್ತದೆ.
ಬೀಮ್ ಯುಪಿಐ-ಹೆಲ್ಪ್ ಯುಪಿಐ ಬಳಕೆದಾರರು ಈ ಕೆಳಗಿನಂತೆ ತಮ್ಮ ಅಪ್ಲಿಕೇಷನ್ ಬಳಸಲು ನೆರವಾಗುತ್ತದೆ
1. ಬಾಕಿ ಇರುವ ವಹಿವಾಟಿನ ಸ್ಥಿತಿಗತಿ ಪರಿಶೀಲನೆ
2. ಫಲಾನುಭವಿಗೆ ಪಾವತಿಸಿದ ಅಥವಾ ನಗದುರಹಿತ ವಹಿವಾಟಿನ ಬಗ್ಗೆ ದೂರು
3. ವ್ಯವಹಾರ, ವಹಿವಾಟಿನ ಬಗ್ಗೆ ದೂರು
ಪ್ರಸ್ತುತ ಯುಪಿಐ-ಹೆಲ್ಪ್ ಆಯ್ಕೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಗ್ರಾಹಕರ ಅಪ್ಲಿಕೇಷನ್‌ನಲ್ಲಿ ಲಭ್ಯವಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮತ್ತು ಟಿಜೆಎಸ್ಬಿ ಕೋ-ಆಪರೇಟಿವ್ ಬ್ಯಾಂಕ್ ಗ್ರಾಹಕರು ಕೂಡ ಶೀಘ್ರದಲ್ಲೇ ಯುಪಿಐ-ಹೆಲ್ಪ್ ಲಾಭ ಪಡೆಯಬಹುದು ಎಂದು ಎನ್‌ಪಿಸಿಐ ತಿಳಿಸಿದೆ.
ಇದನ್ನೂ ಓದಿ: ರಾತ್ರೋರಾತ್ರಿ ಜೆಫ್ ಬೆಜೋಸ್ನ ವಿಶ್ವದ ನಂ.1 ಸಿರಿವಂತ ಪಟ್ಟ ಕಿತ್ತುಕೊಂಡ ಎಲೋನ್ ಮಸ್ಕ್!
ಯುಪಿಐ-ಹೆಲ್ಪ್ ಲಾಭವನ್ನು ತಮ್ಮ ಗ್ರಾಹಕರಿಗೆ ಜಾರಿಗೆ ತರಲು ಇತರ ಬ್ಯಾಂಕ್ಗಳು ಸಹ ಸಜ್ಜಾಗಿವೆ ಎಂದು ಎನ್‌ಪಿಸಿಐ ಹೇಳಿದೆ.