ನವದೆಹಲಿ : ಪ್ರಪಂಚವನ್ನೇ ಭೀತಿಗೆ ತಳ್ಳಿದ ಕೊರೊನಾ ವೈರಸ್ ಸೋಂಕಿಗೆ ಲಸಿಕೆ ಲಭ್ಯವಾಗುವ ಲಕ್ಷಣಗಳು ಕಂಡು ಬರುತ್ತಿವೆ. ಶುಭ ಸೂಚಕದ ನಡುವೆ ವ್ಯಾಕ್ಸಿನ್ನ ಲಭ್ಯತೆ ಮತ್ತು ದರದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿವೆ.
ಇದರ ನಡುವೆ ಇನ್ಫೋಸಿಸ್ ಸಹ - ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು, ಕೊರೊನಾ ವೈರಸ್ ಲಸಿಕೆ ಲಭ್ಯವಾದ ನಂತರ ಜನರಿಗೆ ಶುಲ್ಕ ವಿಧಿಸಬಾರದು ಎಂದು ಮನವಿ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನನ್ನ ನಂಬಿಕೆ ಅನುಗುಣವಾಗಿ ಕೋವಿಡ್ -19 ಲಸಿಕೆ ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಿರಬೇಕು. ಅದನ್ನು ಪ್ರತಿಯೊಬ್ಬರಿಗೂ ಉಚಿತವಾಗಿ ನೀಡಬೇಕು. ಈ ಲಸಿಕೆಗಳು ಭೂಮಿಯ ಸಂಪೂರ್ಣ ಜನಸಂಖ್ಯೆಗೆ ಮುಕ್ತವಾಗಿರಬೇಕು.
ವಿಶ್ವ ಸಂಸ್ಥೆ ಮತ್ತು ಇತರ ರಾಷ್ಟ್ರಿಗಳು ಲಸಿಕೆ ಉತ್ಪಾದಿಸುವ ಎಲ್ಲ ಕಂಪನಿಗಳಿಗೆ ಪರಿಹಾರ ನೀಡಬೇಕು. ಅದನ್ನು ದೊಡ್ಡ ಲಾಭಕ್ಕಾಗಿ ಅಲ್ಲ ಎಂದು ಪ್ರತಿಪಾದಿಸಿದರು.
ಲಸಿಕೆಗಳನ್ನು ಉಚಿತವಾಗಿ ನೀಡುವ ವೆಚ್ಚ ಭರಿಸಬಲ್ಲ ಕಂಪನಿಗಳಿಗೆ ಮುಕ್ತವಾಗಿ ವಿತರಣೆ ಮಾಡುವಂತೆ ಭಾರತ ಐಟಿ ಸಂತ ಮನವಿ ಮಾಡಿದರು.
ಕಳೆದ ತಿಂಗಳು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು, ಭಾರತದಲ್ಲಿ ಲಸಿಕೆ ಲಭ್ಯವಾದ ನಂತರ ಉಚಿತ ಕೋವಿಡ್ -19 ಲಸಿಕೆ ನೀಡುವ ಭರವಸೆ ನೀಡಿದ್ದರು.